ದಿನದ ಸುದ್ದಿ
ಎಮಿರೇಟ್ಸ್ ವಿಮಾನದಲ್ಲಿ ಹಿಂದೂ ಊಟ ರದ್ದು
ಸುದ್ದಿದಿನ ಡೆಸ್ಕ್: ದುಬೈನ ಪ್ರಖ್ಯಾತ ಎಮಿರೇಟ್ಸ್ ವೈಮಾನಿಕ ಸಂಸ್ಥೆಯು ತನ್ನ ಪ್ರಯಾಣಿಕರ ಮೆನುವಿನಲ್ಲಿ ಹಿಂದೂ ಊಟದ ಆಯ್ಕೆಯನ್ನು ರದ್ದು ಮಾಡಿದ್ದು, ಜಾಲತಾಣಗಳಲ್ಲಿ ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಏರ್ ಇಂಡಿಯಾ, ಸಿಂಗಾಪುರ ಏರ್ ಲೈನ್ಸ್ ಸೇರಿದಂತೆ ವಿಶ್ವದ ಪ್ರಸಿದ್ಧ ವೈಮಾನಿಕ ಸಂಸ್ಥೆಗಳು ಹಿಂದೂ ಹಾಗೂ ಜೈನ್ ಮೀಲ್ ಎಂಬ ಆಯ್ಕೆಯನ್ನು ಇಟ್ಟಿದ್ದವು.
ಶಾಖಾಹಾರಿಗಳಿಗೆ ನಮ್ಮಲ್ಲಿ ನೂರು ಪ್ರತಿಶತ ಸಸ್ಯಾಹಾರ ಸಿಗುತ್ತದೆ ಎಂಬುದನ್ನು ಖಚಿತಪಡಿಸಲು ಹಿಂದೂ ಮೀಲ್ ಆಯ್ಕೆ ಇಡಲಾಗಿತ್ತು. ವಿಮಾನದ ಟಿಕೆಟ್ ಬುಕ್ ಮಾಡುವಾಗಲೇ ಇದನ್ನು ಹಿಂದೂ ಅಥವಾ ಜೈನ್ ಊಟ ಆಯ್ಕೆ ಮಾಡಬಹುದಿತ್ತು.
ಎಮಿರೇಟ್ಸ್ ಸಂಸ್ಥೆಯು ತಮ್ಮಲ್ಲಿ ವಿಶ್ವಪ್ರಸಿದ್ಧ ಸಸ್ಯಾಹಾರ ಆಹಾರಗಳು ಲಭ್ಯವಿದೆ. ಪ್ರಯಾಣಿಕರು ಅದನ್ನು ಪ್ರಿ ಬುಕ್ ಮಾಡಬಹುದು ಎಂದಷ್ಟೇ ಹೇಳಿದೆ.