ದಿನದ ಸುದ್ದಿ
ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮೀಜಿ ಮಹಾರಥೋತ್ಸವ
ಹೊನ್ನಾಳಿ: ಹೊನ್ನಾಳಿ ಹಿರೇಕಲ್ಮಠದ ಶ್ರೀ ಚನ್ನಪ್ಪ ಸ್ವಾಮೀಜಿ ಮಹಾರಥೋತ್ಸವ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ಅಲಂಕೃತಗೊಂಡ ಮಹಾ ರಥೋತ್ಸವ ಮಠದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ನಡೆಯಿತು. ಹಿರೇಕಲ್ಮಠದ ಪೀಠಾಧ್ಯಾಕ್ಷ ಡಾ. ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಮ್ಮುಖದಲ್ಲಿ ಪೂಜಾಗಳು ನಡೆದವು. ಹಿರೇಕಲ್ಮಠದ ಪೀಠಾಧ್ಯಾಕ್ಷ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಪಲ್ಲಕ್ಕಿ ಮಹೋತ್ಸವ ವಿವಿಧ ಬಿರುದಾವಳಿಗಳೊಂದಿಗೆ ಹಿರೇಮಠದ ಮಹಾದ್ವಾರವರೆಗೆ ನಡೆಯಿತು. ಪಟ್ಟಣದ ಜನತೆ ಶ್ರೀಗಳಿಗೆ ಪೂಜೆಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ರಥೋತ್ಸವಕ್ಕೆ ಕರಡಿ ಮಜಲು, ಕೀಲುಕುದುರೆ, ಡೊಳ್ಳು ಕುಣಿತಗಳು ಮೆರಗು ನೀಡಿದವು. ಮಹಾರಥೋತ್ಸವದಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ನೆರೆದಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆ ಏರ್ಪಡಿಸಿತ್ತು.