ಸಿನಿ ಸುದ್ದಿ

ಕಲ್ಪನಾ ಲುಕ್‍ನಲ್ಲಿ ನಟಿ ಹಿತಾ ಚಂದ್ರಶೇಖರ್

Published

on

ಸುದ್ದಿದಿನ ಡೆಸ್ಕ್: ನಟಿ ಹಿತಾ ಚಂದ್ರಶೇಖರ್ ಅವರು ಕನ್ನಡದ ದಂತಕತೆ ಕಲ್ಪನಾ ಅವರಂತೆ ಕಾಣುವ ಫೋಟೊ ಶೂಟ್ ಮಾಡಿಸಿದ್ದಾರೆ.
ಬ್ಲ್ಯಾಕ್ ಅಂಡ್ ವೈಟ್ ಫೋಟೊದಲ್ಲಿ ಅವರು ಥೇಟ್ ಕಲ್ಪನಾ ಅವರಂತೇ ಕಾಣುತ್ತಿದ್ದು, ಈ ಫೋಟೊ ತೋರಿಸಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ಒಂಥರಾ ಬಣ್ಣಗಳು ಸಿನಿಮಾದ ಪ್ರಚಾರಕ್ಕಾಗಿ ಮೈಸೂರಿಗೆ ಬಂದಿದ್ದ ಅವರು ಈ ಕುರಿತು ಮಾತನಾಡಿದ್ದು ತಮಗೆ ಕಲ್ಪನಾ ಅವರ ಜೀವನಾಧಾರಿತ ಚಿತ್ರದಲ್ಲಿ ನಟಿಸುವ ಆಶಯ ವ್ಯಕ್ತಪಡಿಸಿದ್ದಾರೆ.
ನನ್ನ ಜೀವನದ ಒಂದ ಕನಸಿನ ಪಾತ್ರ ಅದು. ಈಚೆಗೆ ಒಂದು ಫೋಟೊ ಶೂಟ್ ಮಾಡಿಸಿದೆ. ಅದನ್ನು ನೋಡಿದ ಸ್ನೇಹಿತರು ಕಲ್ಪನಾ ಅವರಂತೆ ಇರುವುದಾಗಿ ಹೇಳಿದ್ದಾರೆ. ಮಹಾನ್ ನಟಿಯ ಹೋಲಿಕೆ ನೀಡಿರುವುದಕ್ಕೆ ಬಹಳ ಖುಷಿಯಾಯಿತು. ಅವರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಆಗಲೇ ಚಿಗುರೊಡೆಯಿತು ಎಂದು ತಿಳಿಸಿದರು.
ಕಲ್ಪನಾ ಅವರಿಗೆ ಬಲಗೆನ್ನೆಯಲ್ಲಿ ಡಿಂಪಲ್ ಇದೆ. ಅದೃಷ್ಟವಶಾತ್ ನನಗೂ ಕೂಡ ಅದೇ ರೀತಿ ಡಿಂಪಲ್ ಇದೆ. ಆ ಪಾತ್ರದಲ್ಲಿ ನಟಿಸಲು ಇದೂ ಒಂದು ಕಾರಣ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Trending

Exit mobile version