ರಾಜಕೀಯ

‘ಕೈ ಸಚಿವರ ವಿರುದ್ದ’ ರಾಹುಲ್ ಗೆ ಹೆಚ್.ಡಿ.ಕೆ ದೂರು

Published

on

ಸುದ್ದಿದಿನ, ಬೆಂಗಳೂರು : ಆರು ಕಾಂಗ್ರೆಸ್ ಸಚಿವರ ವಿರುದ್ದ ಬೆಂಗಳೂರಿಗೆ ಆಗಮಿಸಿದ ರಾಹುಲ್ ಗೆ ದೂರು ನೀಡಿದ್ದಾರೆ ಎಚ್ ಡಿ ಕೆ. ಈ ಆರು ಕಾಂಗ್ರೆಸ್ ಸಚಿವರ ಮೌಲ್ಯಮಾಪನ ನಡೆಸಿರುವ ಎಚ್ ಡಿ ಕುಮಾರಸ್ವಾಮಿ ಅವರ ದೂರಿನ ಹಿನ್ನಲೆಯಲ್ಲಿ ಆರು ಸಚಿವರ ಬದಲಾವಣೆ ಸಾಧ್ಯತೆ ಇದೆ.

2019 ರ ಚುನಾವಣಾ ಹಿನ್ನಲೆ ಕಾಂಗ್ರೆಸ್ ಸಚಿವರ ಗುಪ್ತ ಮೌಲ್ಯಮಾಪನ ನಡೆಸಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರಾಹುಲ್ ಗಾಂಧಿಗೆ ಸಚಿವರ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಎಚ್ ಡಿಕೆ ವರದಿ ಬಳಿಕ ಮೌಲ್ಯಮಾಪನ ಮಾಡುವಂತೆ ಕೆ ಸಿ ವೇಣುಗೋಪಾಲ್ ಗೆ ಸೂಚನೆ ನೀಡಿರುವ ರಾಹುಲ್ ಗಾಂಧಿ.

ಸಮ್ಮಿಶ್ರ ಸರಕಾರದಲ್ಲಿ ಬಜೆಟ್ ಭರವಸೆಗಳನ್ನು ಪೂರೈಸಲು ಕೈ ಸಚಿವರು ಸಹಕರಿಸುತ್ತಿಲ್ಲ. ಸರಕಾರ ಟೇಕಾಫ್ ಆದರೂ ಕೈ ಸಚಿವರು ಕೆಲಸ ಮಾಡುತ್ತಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಅವರು ರಾಹುಲ್ ಗೆ ದೂರು ನೀಡಿದ್ದಾರೆ. ಎಚ್ ಡಿ ಕೆ ದೂರಿನ ಹಿನ್ನಲೆಯಲ್ಲಿ ವೇಣುಗೋಪಾಲ್ ಗೆ ಮೌಲ್ಯಮಾಪನ ಜವಾಬ್ದಾರಿ ನೀಡಿದ ರಾಹುಲ್, ಡಿಸೆಂಬರ್ ವೇಳೆಗೆ ಮೌಲ್ಯಮಾಪನ ಮಾಡಿ ಖಾತೆ ಬದಲಾವಣೆ ಸಾಧ್ಯತೆ ಇದ್ದು, ಹಲವು ಸಚಿವರನ್ನು ಕೈಬಿಡಲು ಮುಂದಾಗಿದ್ದಾರೆ.

ಎಚ್ ಡಿ ಕೆ ಗುಪ್ತ ಮೌಲ್ಯಮಾಪನಕ್ಕೆ ಹಲವು ಹಿರಿಯ ಸಚಿವರ ಆಕ್ರೋಶವ್ಯಕ್ತ ಪಡಿಸಿದ್ದು,ಕಾಂಗ್ರೆಸ್ ಸಚಿವರ ಬಗ್ಗೆ ರಾಹುಲ್ ಗೆ ದೂರು ನೀಡಿರೋದ್ರ ಬಗ್ಗೆ ಒಳಗೊಳಗೇ ಅಸಮಾದಾನ ಗೊಂಡಿರುವ ಸಚಿವರು ಸಮ್ಮಿಶ್ರ ಸರಕಾರದ ಸಂಪುಟದಲ್ಲಿ ಅಸಮಾದಾನ ಸೃಷ್ಟಿಗೆ ಕಾರಣವಾದ ಮೌಲ್ಯಮಾಪನ. ಬುಧವಾರ ಕೈ ಸಚಿವರು ಬೆಂಗಳೂರಿನಲ್ಲಿ ಸಭೆ ಸೇರಲು ನಿರ್ಧಾರವಾಗಿದೆ. ಸಿಎಂ ಗುಪ್ತಮೌಲ್ಯಮಾಪನ ಮತ್ತು ರಾಹುಲ್ ದೂರಿನ ಬಗ್ಗೆ ಪರಮೇಶ್ವರ್ ಜೊತೆ ಸಭೆ ನಡೆಸಲಿರುವ ಕೈ ಸಚಿವರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version