ದಿನದ ಸುದ್ದಿ

ಹೊದಿಗೆರೆ | ಶ್ರೀ ಮಧುಕೇಶ್ವರ ಪ್ರೌಢಶಾಲೆಯಲ್ಲಿ ದುಶ್ಚಟಗಳ ವಿರುದ್ಧ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

Published

on

ಸುದ್ದಿದಿನ, ಚನ್ನಗಿರಿ: ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ (Dharmasthala ) ಗ್ರಾಮೀಣ ಅಭಿವೃದ್ಧಿ ಸಂಸ್ಥೆವತಿಯಿಂದ ಶ್ರೀ ಮಧುಕೇಶ್ವರ ಪ್ರೌಢಶಾಲೆ ಹೊದಿಗೆರೆಯಲ್ಲಿ ( Hodigere ) ದುಶ್ಚಟಗಳ ವಿರುದ್ಧ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಶಿವಕುಮಾರ್ ಯರಗಟ್ಟಿಹಳ್ಳಿ ರವರು ವಿದ್ಯಾರ್ಥಿಗಳು ಭವಿಷ್ಯದ ಸುತ್ಪ್ರಜೆಗಳು ಹಧಿಹರೆಯದ ವಯೋಮಾನದಲ್ಲಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದು ಇದರ ನಿವಾರಣೆಗೆ ಪೋಷಕರು ಮಕ್ಕಳ ಮೇಲೆ ಕಾಳಜಿವಹಿಸಬೇಕಿದೆ. ದುಶ್ಚಟಗಳಿಗೆ ಒಳಗಾಗುವುದಿಲ್ಲ ಎಂಬ ಸಕಲ್ಪ ಮಾಡಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ | ಚನ್ನಗಿರಿ | ಶ್ರೀ ಶಿವಲಿಂಗೇಶ್ವರ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೋವಿಡ್ ಲಸಿಕಕಾರಣ ಕಾರ್ಯಕ್ರಮ

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ರವಿಚಂದ್ರನ್ ಶಾಲೆಯ ಮುಖ್ಯೋಪಾಧ್ಯಾಯರಾದ ಬಾಲರಾಜ್ ಹಾಗೂ ರೂಪ ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version