ದಿನದ ಸುದ್ದಿ
ಹೊಳಲ್ಕೆರೆ ರೋಟರಿ ಸಂಸ್ಥೆಯಿಂದ ಡೆಸ್ಕುಗಳ ಕೊಡುಗೆ
ಸುದ್ದಿದಿನ, ಹೊಳಲ್ಕೆರೆ : ಹೊಳಲ್ಕೆರೆ ರೋಟರಿ ಸಂಸ್ಥೆಯು (ರೋಟರಿ ಜಿಲ್ಲೆ 3160) ತಾಲ್ಲೂಕಿನ ರಂಗಾಪುರ-ನುಲೇನೂರು ಗ್ರಾಮದ ಸ್ವಾತಂತ್ರ್ಯ ಜ್ಯೋತಿ ಪ್ರೌಢಶಾಲೆಗೆ ಎಂಟು ಡೆಸ್ಕುಗಳನ್ನು ಕೊಡುಗೆಯಾಗಿ ನೀಡಿರುತ್ತಾರೆ.
ಅಧ್ಯಕ್ಷರಾದ ರೋ. ಎಸ್ ರುದ್ರಪ್ಪನವರು ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ತಾಲ್ಲೂಕಿನ 10 ಶಾಲೆಗಳಿಗೆ ತಲಾ ಎಂಟು ಡೆಸ್ಕುಗಳನ್ನು ಉಚಿತವಾಗಿ ನೀಡಲಾಗಿದೆ ಎಂದರು. ಸಂಸ್ಥೆಯ ಸದಸ್ಯರಾದ ಎಸ್ ಪಿ ರವಿ, ಎನ್ ಗುರುಶಾಂತಪ್ಪ, ಹರೀಶ್ ಮುಂತಾದ ವರು ಸಹಕರಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಎಸ್ ರುದ್ರಪ್ಪ ಮತ್ತು ಸಹಶಿಕ್ಷಕರಾದ ಸಿ ಎನ್ ಮೃತ್ಯುಂಜಯಪ್ಪ, ಎಚ್ ಎನ್ ನಾಗರಾಜ, ಆರ್ ಟಿ ಲಕ್ಷ್ಮಣರೆಡ್ಡಿ, ಎಚ್ ಸಿ ವೇದಮೂರ್ತಿ, ಎಂ ಸಿ ಅರುಣಕುಮಾರ್ ಹಾಗೂ ಗೀತಾ ಅವರು ಡೆಸ್ಕುಗಳನ್ನು ಪಡೆದು, ವಿದ್ಯಾರ್ಥಿಗಳ, ಇದರ ಸದುಪಯೋಗ ಮಾಡಿಕೊಂಡು, ಚೆನ್ನಾಗಿ ವಿದ್ಯಾಭ್ಯಾಸ ಮಾಡಲು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243