ದಿನದ ಸುದ್ದಿ
ವಿಡಿಯೋ | ಹೊಳಲ್ಕೆರೆ : ಜನರಿಗೆ ಕೊಡಬೇಕಿದ್ದ ಹಾಲು ಕದ್ದೊಯ್ದರೇ ಬಿಜೆಪಿಯ ಪಟ್ಟಣ ಪಂಚಾಯ್ತಿ ಸದಸ್ಯ..?
ಸುದ್ದಿದಿನ,ಹೊಳಲ್ಕೆರೆ : ಜನರಿಗೆ ವಿತರಿಸ ಬೇಕಿದ್ದ ಹಾಲಿನ ಪ್ಯಾಕೇಜ್ ಗಳನ್ನು ಪಟ್ಟಣ ಪಂಚಾಯತಿಯ ಸದಸ್ಯರೊಬ್ಬರು ಕದ್ದಿದ್ದಾರೆ ಎನ್ನಲಾದ ಸಿಸಿ ಟಿವಿ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊರೋನಾ ಪರಿಣಾಮ ಕೊಳಚೆ ನಿವಾಸಿಗಳಿಗೆ
ಉಚಿತವಾಗಿ ವಿತರಿಸುವ ಸಂಬಂಧ ತಾಲ್ಲೂಕು ಆಡಳಿತ ಹೊಳಲ್ಕೆರೆ, ಇಂದಿರಾ ಕ್ಯಾಂಟೀನ್ ಮುಂದೆ 300 ಲೀಟರ್ ನಂದಿನಿ ಹಾಲನ್ನು ಇರಿಸಿದ್ದರು. ಎರಡು ಶ್ರೇಣಿ
ಗಳಲ್ಲಿ ಸುಮಾರು 24 ಲೀಟರ್ ನಂದಿನಿ ಹಾಲಿನ ಪಾಕೇಟ್ ಗಳನ್ನು ಏಪ್ರಿಲ್ 5 ನೇ ತಾರೀಖಿನಂದು
ತನ್ನ ಸಹಾಯಕ ನೊಂದಿಗೆ ಹೊಳಲ್ಕೆರೆ ಪಟ್ಟಣ ಪಂಚಾಯ್ತಿ ಬಿ.ಜೆ.ಪಿ ಸದಸ್ಯರೊಬ್ಬರು ಕದ್ದೊಯ್ದರು ಎಂದು ಆರೋಪಿಸಿದ ದೃಶ್ಯ ಸೆರೆಯಾಗಿದೆ.
ಹೊಳಲ್ಕೆರೆ ಇಂದಿರಾ ಕ್ಯಾಂಟೀನ್ ಸೇರಿದಂತೆ ಅಕ್ಕ ಪಕ್ಕದ ಅಂಗಡಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಗಳಲ್ಲಿ ಈ ದೃಶ್ಯ ಸೆರೆಯಾಗಿದ್ದು ಈಗ ಅದು ಸಾಮಾಜೀಕ ಚಾಲತಾಣದಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋ ನೋಡಿ..!
ಸುದ್ದಿದಿನ.ಕಾಂ|ವಾಟ್ಸಾಪ್|9980346243