ಸಿನಿ ಸುದ್ದಿ
ಕಿಚ್ಚನ ‘ಪೈಲ್ವಾನ್’ ಗೆ ಹಾಲಿವುಡ್ ಸ್ಟಂಟ್ ಮಾಸ್ಟರ್ ಎಂಟ್ರಿ..!
ಸುದ್ದಿದಿನ ಡೆಸ್ಕ್ : ಸುದೀಪ್ ಸಧ್ಯ ಪೈಲ್ವಾನ್ ಸಿನೆಮಾ ಚಿತ್ರೀಕರಣದಲ್ಲಿ ಬ್ಯುಸಿ ಅಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಕಿಚ್ಚ ತನ್ನ ದೇಹವನ್ನು ಹುರಿಗೊಳಿಸಿಕೊಳ್ಲಲು ಜಿಮ್ ನಲ್ಲಿ ಕಸರತ್ತು ಮಾಡುತ್ತಿದ್ದಾರೆ. ಎಂಬ ಸುದ್ದಿಯನ್ನು ನೀವು ಈಗಾಗಲೇ ಕೇಳಿದ್ದೀರಿ ಹಾಗೆ ಕಿಚ್ಚ ತನ್ನ ಪ್ರಭಾವಶಾಲಿ ಸ್ನಾಯುಗಳನ್ನು ಪ್ರದರ್ಶಿಸಿರುವ ಫೋಟೋಗಳನ್ನು ನೋಡಿದ್ದೀರಿ.
ಆದರೆ ಈಗ ಪೈಲ್ವಾನ್ ಸಿನೆಮಾದ ಆಕ್ಷನ್ ದೃಶ್ಯಗಳನ್ನು ಹಾಲಿವುಡ್ ಸಿನೆಮಾಗಳಿಗೆ ಸೆಡ್ಡು ಹೊಡೆತುವಂತೆ ಚಿತ್ರೀಕರಿಸಲು ಚಿತ್ರ ತಂಡ ತಯಾರಿ ನಡೆಸಿದೆ. ಆಕಾರಣಕ್ಕಾಗಿ ಹಾಲಿವುಡ್ ನ ಸ್ಟಂಟ್ಮ್ಯಾನ್ ‘ಲಾರ್ನೆಲ್ ಸ್ಟೊವಾಲ್ರ’ನ್ನು ಪೈಲ್ವಾನ್ ಸಿನೆಮಾಗಾಗಿ ಕರೆತಂದಿದ್ದಾರೆ. ಲಾರ್ನೆಲ್ ಅವರ ಸ್ಟಂಟ್ ನಿರ್ದೇಶನದ ಸಿವಿಲ್ ವಾರ್: ಕ್ಯಾಪ್ಟನ್ ಅಮೇರಿಕಾ ಮತ್ತು ಹಂಗರ್ ಗೇಮ್ಸ್ ಸಿನೆಮಾಗಳಿಗೆ ಸಾಹಸ ದೃಶ್ಯಗಳನ್ನು ನಿರ್ದೇಶಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401