ದಿನದ ಸುದ್ದಿ

ರೋಪ್‌ವೇಗಳ ಸುರಕ್ಷತೆ ಪರಿಶೋಧನೆಗೆ ರಾಜ್ಯಗಳಿಗೆ ಗೃಹ ಸಚಿವಾಲಯದಿಂದ ಸೂಚನೆ

Published

on

ಸುದ್ದಿದಿನ ಡೆಸ್ಕ್ : ಜಾರ್ಖಂಡ್‌ನ ದೇವಘರ್ ರೋಪ್‌ವೇ ಅವಘಡದ ಬೆನ್ನಲ್ಲೇ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ರೂಪ್ ವೇ ಯೋಜನೆಯ ಸುರಕ್ಷತಾ ಪರಿಶೋಧನೆ ಕೈಗೊಂಡು, ಪ್ರಮಾಣಿತ ಕಾರ್ಯಚರಣೆ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಈ ಸಂಬಂಧ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾಳ್ ಸೂಚನೆ ನೀಡಿದ್ದಾರೆ.

ಕಳೆದ ಭಾನುವಾರ ಸಂಭವಿಸಿದ ತಾಂತ್ರಿಕ ದೋಷದಿಂದಾಗಿ ಎರಡು ಕೇಬಲ್ ಕಾರುಗಳ ನಡುವೆ ಡಿಕ್ಕಿ ಸಂಭವಿಸಿತ್ತು. ಇದರಿಂದಾಗಿ 40 ಕ್ಕೂ ಹೆಚ್ಚು ಜನರು ರೋಪ್‌ವೇ ಕೇಬಲ್ ಕಾರಿನಲ್ಲಿ ಸಿಲುಕಿದ್ದರು. ಘಟನೆ ಸಂಬಂಧ ಮೂವರು ಮೃತಪಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version