ಲೈಫ್ ಸ್ಟೈಲ್

ಕೂದಲುಗಳ ಉದುರುವಿಕೆಗೆ ಮತ್ತು ಬೆಳವಣಿಗೆಗೆ ಇಲ್ಲಿದೆ ಮನೆ ಔಷಧಿ..!

Published

on

ಅಕಾಲ ವಯಸ್ಸಿನಲ್ಲಿ ಕೂದಲು ಉದುರುವುದು, ಬಿಳಿಯಾಗುವುದು ಈಗ ಸರ್ವೇಸಾಮಾನ್ಯವಾಗಿದೆ. ಈ ಸಮಸ್ಯೆಗಳಿಗೆ ಜನರು ಅದೆಷ್ಟೋ ಹಣ ವ್ಯವಮಾಡಿಕೊಂಡು ನೆಮ್ಮದಿಹಾಳುಮಾಡಿಕೊಂಡಿದ್ದಾರೆ. ಆದರೆ ಈಗ ನೀವು ನೆಮ್ಮದಿಯಿಂದ ಇರಲು ಕೂದಲಿನ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಮನೆ ಮದ್ದು.

ಮನೆ ಔಷಧಿ

  • ನಿಂಬೆ ರಸವನ್ನು ಚೆನ್ನಾಗಿ ತಲೆಗೆ ತಿಕ್ಕಿ ಅರ್ಧ ಗಂಟೆಯ ನಂತರ ತಣ್ಣೀರಿನಿಂದ ಸ್ನಾನ ಮಾಡಿ. ಇದೇ ಕ್ರಮವನ್ನು ಅನುಸರಿಸುತ್ತಿದ್ದರೆ ಕೂದಲು ಉದುರುವುದು ನಿಲ್ಲುವುದು.
  • ಸುಮಾರು 110 ಗ್ರಾಂ, ಕೊಬ್ಬರಿ ಎಣ್ಣೆಗೆ ಒಂದು ಚಮಚ ನಿಂಬೆರಸ ಹಾಕಿ ನಂತರ ಅಷ್ಟೇ ಪ್ರಮಾಣದ ಸುಣ್ಣದ ತಿಳಿಯೊಂದಿಗೆ ಮಿಶ್ರ ಮಾಡಿ ಕೂದಲಿಗೆ ಹಚ್ಚುತ್ತಿದ್ದರೆ ಕೂದಲು ಉದುರುವುದು ನಿಲ್ಲುವುದು. ಕೂದಲು ಉದ್ದವಾಗಿ ಬೆಳೆಯುವುದು ಕೂದಲಿನ ಕಾಂತಿ ಅಧಿಕಗೊಳ್ಳುವುದು.
  • ಸ್ತ್ರೀಯರು ಸ್ನಾನ ಮಾಡುವಾಗ ಗಲ್ಲ ಮತ್ತು ಕೆನ್ನೆಗೆ ಅರಿಶಿನ ಪುಡಿ ಹಚ್ಚಿಕೊಂಡು ಸ್ನಾನ ಮಾಡುವ ಹವ್ಯಾಸವಿಟ್ಟುಕೊಂಡರೆ ಅಲ್ಲಿ ಕೂದಲು ಬೆಳೆಯುವ ಸಂದರ್ಭವಿರುವುದಿಲ್ಲ.
  • ವೀಳ್ಯದೆಲೆಯನ್ನು ಅರೆದು ಕೊಬ್ಬರಿ ಎಣ್ಣೆಯಲ್ಲಿ ಕಲಿಸಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವುದು ನಿಂತು ಹೋಗುವುದು.
  • ಪ್ರತಿದಿನವೂ ತಲೆಗೆ ತಣ್ಣೀರು ಸ್ನಾನ ಮಾಡುತ್ತಿದ್ದರೆ ಕೂದಲು ಉದುರುವುದು ನಿಂತು ಹೋಗಿ ಕೂದಲು ಸೊಂಪಾಗಿ ಬೆಳೆಯುವುದು.
  • ಬಾಲನೆರೆಯನ್ನು ತಡೆಯಲು ಸ್ನಾನ ಮಾಡುವಾಗ ತಲೆಗೆ ಸೋಪು ಹಚ್ಚುವುದು ಕೈಬಿಡಿ ಸೋಪಿನ ಬದಲು ಹೆಸರು ಹಿಟ್ಟನ್ನು ಬಳಸುವುದು ಉತ್ತಮ.
  • ಕೂದಲಿನ ಬೆಲೆ ಕೂದಲನ್ನು ಕಳೆದುಕೊಂಡವರಿಗೆ ಮಾತ್ರ ಗೊತ್ತಾಗುತ್ತದೆ. ಕೂದಲನ್ನು ಕಳೆದುಕೊಳ್ಳುವ ಮುನ್ನ ಪ್ರತಿ ನಿತ್ಯ 7 ರಿಂದ 8 ತಾಸು ನಿಶ್ಚಿಂತೆಯಿಂದ ನಿದ್ರಿಸಿದರೆ ಕೂದಲು ಉದುರುವುದನ್ನು ತಡೆಯಬಹುದು. ಹಾಗೂ ಸದಾ ಚಿಂತಿಸುವುದನ್ನು ಬಿಟ್ಟು ನೆಮ್ಮದಿಯಾಗಿರಬೇಕು. ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಸಮತೋಲನವಾಗಿ ಸೇವಿಸಬೇಕು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version