ಲೈಫ್ ಸ್ಟೈಲ್

ಜೇನುತುಪ್ಪದಿಂದ ಆರೋಗ್ಯ ಭಾಗ್ಯ..!

Published

on

ಜೇನುತುಪ್ಪವನ್ನು ಯಾರು ತಾನೇ ಬೇಡ ಎನ್ನುತ್ತಾರೆ. ಪ್ರಪಂಚದಲ್ಲಿ ‘ಏಕ್ಸ್ಪಾರ್ ಡೇಟ್’ ಇಲ್ಲದೆ ಇರುವ ಏಕೈಕ ವಸ್ತು ಎಂದರೆ ಅದು ಈ ಜೇನು ತುಪ್ಪ. ಈ ಜೇನು ತುಪ್ಪವನ್ನು ಗಾಜಿನ ಬಾಟಲಿಯಲ್ಲಿ ಇಟ್ಟರೆ ಅದು ಎಷ್ಟೇ ವರ್ಷ ಹಳೆಯದಾದರೂ ಬಳಸಬಹುದು.ಇದನ್ನು ಫ್ರಿಜ್ ನಲ್ಲಿ ಮತ್ತು ಬಿಸಿಲಿನಲ್ಲಿ ಇರಬಾರದು. ಯಾರಿಗೆ ಜೇನು ತುಪ್ಪ ಇಷ್ಟ ಇಲ್ಲವೋ ಅಥವಾ ಅದರ ಬಗ್ಗೆ ಮಾಹಿತಿ ಇಲ್ಲವೋ, ಅವರು ಈ ಮಾಹಿತಿಯನ್ನು ಒಮ್ಮೆ ಓದಿ.ಇದನ್ನು ಎಲ್ಲಾ ವಯೋಮಾನದವರು ಬಳಸ ಬಹುದು. ಇದನ್ನು ರಕ್ತವರ್ಧಕ ಟಾನಿಕ್ ಮತ್ತು ಸ್ವಾಭಾವಿಕ ಬಲವರ್ಧಕ ಟಾನಿಕ್ ಎನ್ನುವರು.

ಜೇನುತುಪ್ಪದ ಉಪಯೋಗಗಳು

  1. ಚಿಕ್ಕ ಮಕ್ಕಳಿಗೆ ಹಾಲು ಕೊಡುವಾಗ ಜೇನು ತುಪ್ಪವನ್ನು ಬೆರೆಸಿ ಕೊಟ್ಟರೆ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ .
  2. ಸುಟಗಾಯಕ್ಕೆ ತಕ್ಷಣ ಜೇನು ತುಪ್ಪ ಹೆಚ್ಚುವುದರಿಂದ ಉರಿ ಶಮನವಾಗುತ್ತದೆ ಮತ್ತು ಗಾಯ ಶ್ರೀಘ್ರವೇ ಮಾಗಲು ಸಹಾಯ ಮಾಡುತ್ತದೆ.
  3. ಧಡೂತಿ ಶರೀರದವರು ನಾಲ್ಕು ಟೀ ಚಮಚದಷ್ಟು ಜೇನು ತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ತೂಕವು ಕಡಿಮೆಯಾಗಿ ನರಗಳಲ್ಲಿ ಹೊಸ ಉತ್ಸಾಹ ತುಂಬಿಕೊಳ್ಳವುದು.
  4. ಜೇನು ತುಪ್ಪವನ್ನು ಕ್ರಮಬದ್ಧವಾಗಿ ಸೇವಿಸುವುದರಿಂದ ಮಲಬದ್ಧತೆ ಉಂಟಾಗುವ ಸಂಭವವಿರುವುದಿಲ್ಲ.
  5. ವಸಡುಗಳು ಊದಿಕೊಂಡು ಹಲ್ಲುನೋವು ಉಂಟಾದರೆ, ಜೇನು ತುಪ್ಪದಲ್ಲಿ ನೆನೆಸಿದ ಹತ್ತಿಯನ್ನು ನಾಲ್ಕಾರು ಬಾರಿ ದಿನವೂ ಇಟ್ಟುಕೊಂಡರೆ ಹಲ್ಲುನೋವು ಮತ್ತು ವಸಡಿನ ಊತವು ನಿವಾರಣೆಯಾಗುವುದು.
  6. ಹುಳುಕಡ್ಡಿ, ಇಸಬು ಮುಂತಾದ ಚರ್ಮರೋಗಗಳಿಗೆ ಮತ್ತು ಹುಣ್ಣುಗಳ ಮೇಲೆ ಜೇನು ತುಪ್ಪವನ್ನು ಸವರುವುದರಿಂದ ಅವು ಗುಣ ಕಂಡು ಬರುವುದು.
  7. ಯಾವುದೇ ಔಷಧಿಯನ್ನು ಜೇನು ತುಪ್ಪದೊಂದಿಗೆ ಸೇವಿಸಿದರೆ ಶೀಘ್ರ ಗುಣ ಕಂಡು ಬರುತ್ತದೆ.
  8. ಜೇನು ತುಪ್ಪವನ್ನು ಪ್ರತಿದಿನವೂ ಬೆಳಿಗ್ಗೆ ಎದ್ದ ತಕ್ಷಣ ಬಾಯಿ ತೊಳೆದುಕೊಂಡು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಚೆನ್ನಾಗಿ ಜೀರ್ಣವಾಗುವುದು. ದೈಹಿಕ ಶಕ್ತಿ ಹೆಚ್ಚುವುದು. ಆಯಾಸ ಮತ್ತು ಆಲಸಿಕೆ ದೂರವಾಗಿ ಧಾರಣ ಶಕ್ತಿ ಅಧಿಕಗೊಳ್ಳವುದು.
  9. ಮಧುಮೇಹ ರೋಗಿಗಳು ಹಾಗೂ ಕ್ಷಯ ರೋಗಗಳು ಜೇನುತುಪ್ಪವನ್ನು ಸೇವಿಸುವುದರಿಂದ ಶಾರೀರಿಕ ಕ್ರಿಯೆಗಳು ಮಾಮೂಲಿ ಆರೋಗ್ಯವಂತರಂತೆ ನಡೆದು ಆರೋಗ್ಯ ಸುಧಾರಣೆ ಉಂಟಾಗುವುದು.
  10. ಎಳೆಮಕ್ಕಳಿಗೆ ಸಾಧಾರಣ ಕೆಮ್ಮು ಮತ್ತು ಜ್ವರ ಬಂದಾಗ ಒಂದು ಟೀ ಚಮಚ ತುಳಸಿ ರಸದಲ್ಲಿ ಹತ್ತಾರು ತೊಟ್ಟು ಜೇನುತುಪ್ಪವನ್ನು ಬೆರೆಸಿ ಕುಡಿಸಬೇಕು. ದಿನದ ಎರಡು ಬಾರಿ ಕುಡಿಸಿದರೆ ಮೂರೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ಉಂಟಾಗಿ ಮಕ್ಕಳು ಗುಣವಾಗುತ್ತರೆ.
  11. ಕೀಲುಗಳಲ್ಲಿ ನೋವುಂಟಾಗಿದ್ದರೆ ಆ ಸ್ಥಳಕ್ಕೆ ಸುಣ್ಣ ಮತ್ತು ಜೇನು ತುಪ್ಪವನ್ನು ಮಿಶ್ರಮಾಡಿ ಹಚ್ಚಿದರೆ ಶೀಘ್ರವೇ ಪರಿಣಾಮ ಉಂಟಾಗಿ ನೋವು ಮಾಯವಾಗುತ್ತದೆ.
  12. ಶುದ್ಧವಾದ ಜೇನು ತುಪ್ಪವನ್ನು ಊಟವಾದ ನಂತರ ಮಲಗುವುದಕ್ಕೆ ಮುಂಚೆ ಮೂರು ಟೀ ಚಮಚ ಸೇವಿಸುತ್ತಾ ಬಂದರೆ ಬಹುಮೂತ್ರ ರೋಗವೇ ಇಲ್ಲವಾಗುವುದು.
  13. ಬಜೆ ಪುಡಿಯೊಂದಿಗೆ ಜೇನು ತುಪ್ಪ ಕೊಡುವುದರಿಂದ ವಿದ್ಯಾರ್ಥಿಗಳ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ.
  14. ಪಪ್ಪಾಯಿ ಹಣ್ಣು, ಜೇನುತುಪ್ಪ ಮತ್ತು ಅರಿಶಿನ ಪುಡಿ ಮುಖಕ್ಕೆ ಲೇಪಿಸುವುದರಿಂದ ಮುಖದ ಮೊಡವೆಗಳು ದೂರವಾಗಿ ಮುಖದ ಕಾಂತಿ ಹೆಚ್ಚಾಗುತ್ತದೆ.
  15. ಹಸಿ ಕರಬೇವಿನೊಂದಿಗೆ ಜೇನು ತುಪ್ಪ ತಿನ್ನುವುದರಿಂದ ದೃಷ್ಟಿ ದೋಷಗಳು, ಕಣ್ಣಿನ ತೊಂದರೆಗಳು ಇಲ್ಲವಾಗುತ್ತದೆ.
  16. ಜೇನು ತುಪ್ಪವನ್ನು ನಿಯಮಿತವಾಗಿ ಸೇವಿಸುವುದರಿಂದ ಸಂಭೋಗ ಶಕ್ತಿಯಲ್ಲಿ ವೃದ್ಧಿ ಉಂಟಾಗುವುದು. ಸ್ವಪ್ನ ಸ್ಖಲನವಾಗುವ ಸಾಧ್ಯತೆ ಇರುವುದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version