ದಿನದ ಸುದ್ದಿ
ದಾವಣಗೆರೆ | ಅಂಗನವಾಡಿ ಕಾರ್ಯಕರ್ತೆ ಶಶಿಕಲಾ.ಎನ್ ಹಾಗೂ ಸಾಂತ್ವನ ಕೇಂದ್ರದ ಅಧ್ಯಕ್ಷೆ ಹೆಚ್.ಅನಿತಾಗೆ ಜಿಲ್ಲಾಡಳಿತದಿಂದ ಸನ್ಮಾನ
ಸುದ್ದಿದಿನ, ದಾವಣಗೆರೆ : ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021 ರಲ್ಲಿ ಸಾಧಕರಿಗೆ ಸನ್ಮಾನಿಸಲಾಯಿತು.
ಕರೋನಾ ಸಂದರ್ಭದಲ್ಲಿ ಜನರಿಗೆ ಸೇವೆ ಸಲ್ಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ಹಾಗೂ ತಮ್ಮ ಸೇವೆಗೆ ಕೇಂದ್ರ ಸರ್ಕಾರದಿಂದ ಇತ್ತೀಚಿಗೆ ದೆಹಲಿಯಲ್ಲಿ ಪ್ರಶಸಿ ಪಡೆದ ಹೊನ್ನಾಳಿ ತಾಲ್ಲ್ಲೂಕಿನ ಬಿದರಿಹಳ್ಳಿ ತಾಂಡಾದ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ.ಎನ್ ಹಾಗೂ ಹರಿಹರದ ಭಾರತ್ ಪೆಟ್ರೋಲಿಯಂನ ಮಾಲೀಕರು, ಸಾಂತ್ವನ ಕೇಂದ್ರದ ಅಧ್ಯಕ್ಷೆಯಾದ ಹೆಚ್.ಅನಿತಾ ಪಾಟೀಲ್ ಇವರು ತಾವು ವಿಶೇಷಚೇತನರಾದರೂ ಸುಮಾರು 250 ಮಹಿಳೆಯರಿಗೆ ಸ್ವಾವಲಂಬಿಗಳಾಗಲು ಸಹಾಯ ಮಾಡಿ ಮಹಿಳೆಯರಿಗೆ ಸ್ಫೂರ್ತಿಯಾಗಿರುವ ಈರ್ವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಇದನ್ನೂ ಓದಿ |ದಾವಣಗೆರೆ | ದೇಶ ಬಲಿಷ್ಟವಾಗಿರಬೇಕು ಎಂದರೆ ಅಲ್ಲಿ ಮಹಿಳೆಗೆ ಸಮಾನತೆ ಇರಬೇಕು : ಜಿ.ಪಂ ಸಿಇಓ ಡಾ.ವಿಜಯ ಮಹಾಂತೇಶ ಬಿ.ದಾನಮ್ಮನವರ್
ಜಿಲ್ಲಾ ಮಟ್ಟದ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆಗೈದ ಮಕ್ಕಳಿಗೆ ಸನ್ಮಾನಿಸಲಾಯಿತು. ನಾವೀನ್ಯತೆಯ ಕ್ಷೇತ್ರದಲ್ಲಿ ಕೀರ್ತನ ಎಂ.ಹೆಚ್ ಮತ್ತು ಎಸ್.ಡಿ ಸೈಫುದ್ದೀನ್, ಕ್ರೀಡೆಯಲ್ಲಿ ವೇಣುಗೋಪಾಲ್.ಎಸ್, ಯಶ್‍ರಾಜ್.ಎಸ್ ಸಾಂಸ್ಕøತಿಕ ಕ್ಷೇತ್ರದಲ್ಲಿ ಮನುಶ್ರೀ ಜಿ. ಜೆ, ಹಾಗೂ ವೈಷ್ಣವಿ.ಆರ್.ಭಾರದ್ವಾಜ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಬಾಲ್ಯ ವಿವಾಹ, ಕ್ರಿಮಿನಲ್ ಕಾನೂನುಗಳು, ಪೋಕ್ಸೊ ಕಾಯ್ದೆಯ ಕುರಿತು ವಕೀಲರಾದ ನೇತ್ರಾವತಿ ಹಾಗೂ ವರದಕ್ಷಿಣೆ ನಿಷೇಧ, ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ಕೌಟುಂಬಿಕ ಹಿಂಸೆ ಕುರಿತು ಐ.ಕೆ ಮಂಜುಳ ಉಪನ್ಯಾಸ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್ ಸ್ವಾಗತಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243