ಲೈಫ್ ಸ್ಟೈಲ್

‘ಮಾನ್ಯಹರ್ಷ’ ಳಾ ಹೋವರ್ ಡಾನ್ಸ್ ಈಗ ಸಖತ್ ವೈರಲ್ | ವಿಡಿಯೋ ನೋಡಿ ಥ್ರಿಲ್ ಆಗ್ತೀರಾ..!

Published

on

ಮಾನ್ಯಹರ್ಷ

ಧುನಿಕ ಜಗತ್ತಿನ ಲೈಫ್ ಸ್ಟೈಲ್ ಟ್ರೆಂಡ್ ಗಳು ಬಹಳ ವಿಚಿತ್ರ ಹಾಗೂ ಅಷ್ಟೇ ಆಕರ್ಷಕ! ಈ ಎಲಕ್ಟಾನಿಕ್ ಯುಗದಲ್ಲಿ ದಿನಕ್ಕೊಂದು ಹೊಸ ಡಿವೈಸ್ ತಯಾರಾಗುತ್ತಿದೆ. ಆ ಆಟದ ಸಾಮಾನು, ಈ ಆಟದ ಸಾಮಾ ಮನು ಅಂತೆಲ್ಲಾ ಆಡಿ ಬೋರಾದ ಮಕ್ಕಳು ಈಗ ಹೂವರ್ ಬೋರ್ಡ್ ನತ್ತ ಮುಖ ಮಾಡಿದ್ದಾರೆ.

ಏನಿದು ಹೂವರ್ ಬೋರ್ಡ್?

ಸಿಂಪಲ್ಲಾಗಿ ಹೇಳೋದಾದರೆ ಎರಡು ಚಕ್ರದ ಎಲಕ್ಟಾನಿಕ್ ಮಿನಿ ಸ್ಕೂಟರ್! ಸೆಗ್ವೇ ಎಂದೂ ಕರೆಯಲ್ಪಡುವ ಎಲಕ್ಟಾನಿಕ್ ಡಿವೈಸ್!
ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ಇದು ಬಹಳ ಹೆಚ್ಚಾಗಿ ಬಳಸಲಾಗುತ್ತಿದೆ.ಪ್ರಾರಂಭದಲ್ಲಿ ಬಾಲಿವುಡ್ ಸಿನೆಮಾಗಳಲ್ಲಿ.. ಸೆಲಿಬ್ರಿಟಿ ಗಳು ಮಾತ್ರ ಬಳಸುತ್ತಿದ್ದ ಹೂವರ್ ಬೋರ್ಡ್ ಈಗ ಜನಸಾಮಾನ್ಯರಲ್ಲೂ ಟ್ರೆಂಡ್ ಆಗಿದೆ. ಮಕ್ಕಳು ಸಹ ಈ ವಿಶಿಷ್ಟ ಡಿವೈಸ್ ಗೆ ಮಾರುಹೋಗಿದ್ದಾರೆ.

ಭಾರತದಲ್ಲಿ ಇತ್ತೀಚೆಗೆ ಈ ಹೂವರ್ ಬೋರ್ಡ್ ಟ್ರೆಂಡ್ ಫಾಲೋ ಆಗುತ್ತಿದೆ.ಕೇವಲ ದೊಡ್ಡವರು ಬಳಸುತ್ತಿದ್ದ ಹೂವರ್ ಬೋರ್ಡ್ ಈಗ ಈ ಪುಟ್ಟ ಮಕ್ಕಳ ಫೇವರಿಟ್ ಆಟಿಕೆ ಆಗಿ ಹೋಗಿದೆ.. ಇದರ ಮೇಲೆ ಬ್ಯಾಲೆಂಸ್ ಮಾಡುವುದು ಅಷ್ಟು ಸುಲಭವಲ್ಲ. ಅಂತಹದರಲ್ಲಿ ಈ 8″ ಪುಟ್ಟ ವಾಹನದ ಮೇಲೆ ನಿಂತು-ಕೂತು..ಕುಣಿದುಕುಪ್ಪಳಿಸುತ್ತಿದ್ದಾಳೆ ಎಂಟರ ಹರೆಯದ ಈ ಪುಟ್ಟ ಪೋರಿ.

ಈಕೆ ಮಾನ್ಯ ಹರ್ಷ. ಮೂಲತಃ ಬೆಂಗಳೂರಿನ ಹುಡುಗಿ. ವಯಸ್ಸು ಎಂಟು..ಆದರೆ ಈ ಹುಡುಗಿ “ಅಪ್ಪು ಡ್ಯಾನ್ಸ್ ” ಎಂದು 18 ” ಸೆಗ್ವೇ ಮೇಲೆ ಮಾಡಿರುವ ಡ್ಯಾನ್ಸ್ ನೋಡಿದವರು ಮಂತ್ರ ಮುಗ್ಧರಾಗಿದ್ದಾರೆ. ಹೂವರ್ ಬೋರ್ಡ್ ಮೇಲೆ ಕೇವಲ ಡ್ಯಾನ್ಸ್ ಅಷ್ಟೇ ಅಲ್ಲ. ಬಾಸ್ಕಟ್ ಬಾಲ್. ಕರಾಟೆ ಕೂಡಾ ಮಾಡಿದ್ದಾಳೆ ಈ ಹುಡುಗಿ.

ಮಾನ್ಯ ಒಬ್ಬ ಪ್ರತಿಭಾವಂತ ಹುಡುಗಿ ಆಗಿದ್ದು, ಕ್ರೀಡೆ, ಕಲೆ, ನೃತ್ಯ ಬರವಣಿಗೆ ಹೀಗೆ ಹಲವಾರು ರಂಗಗಳಲ್ಲಿ ತನ್ನನು ಯಶಸ್ವಿಯಾಗಿ ನಿರೂಪಿಸಿಕೊಂಡಿದ್ದಾಳೆ. ಹೂವರ್ ಬೋರ್ಡ್ ಮೇಲೆ ಶಿವ ತಾಂಡವ, ವಂದೇ ಮಾತರಂ ಹೀಗೆ ಹತ್ತು ಹಲವಾರು ಹಾಡುಗಳಿಗೆ ಹೆಜ್ಜೆ ಹಾಕಿರುವ ಮಾನ್ಯ ಹರ್ಷ ಳ ಹೊವರ್ ಬೋರ್ಡ್ ಡ್ಯಾನ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version