ನಿತ್ಯ ಭವಿಷ್ಯ
ಹೋಮ- ಹವನಗಳ ಮಹತ್ವ
ಶಿರಡಿ ಸಾಯಿಬಾಬಾ ಜ್ಯೋತಿಷ್ಯಾಲಯ ಗುರೂಜಿ ಗುರುರಾಜ ದೀಕ್ಷಿತ್ : 9036933032
ಹೋಮ- ಹವನಗಳ ಮಹತ್ವ…
ವೇದವೆಂದರೆ ಜ್ಞಾನ. ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು.
ನಮ್ಮ ಆಚರಣೆ-ವಿಚಾರದಲ್ಲಿ ಏನಾದರೂ ಅನುಮಾನ ಬಂದರೆ “ವೇದವಾಕ್ಯಂ ಪ್ರಮಾಣಂ”ಎಂದು ಒಪ್ಪಿ ಕೊಳ್ಳುವವರು. ವೇದವಾಕ್ಯವೆಂದರೆ ಅದು ಸರ್ವೋಚ್ಛ ನ್ಯಾಯಾಲಯದ ತೀರ್ಪು. ಅದನ್ನು ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ.
ವೇದಗಳು ಹೋಮ-ಹವನಗಳ ಮಹತ್ವವನ್ನು ಹೀಗೆ ತಿಳಿಸುತ್ತವೆ.
*”ಅಗ್ನಿಮೀಳೆ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಂ ಹೋತಾರಂ ರತ್ನಧಾತಮಮ್”* *”ಯಜ್ಞೋ ಹಿ ಶ್ರೇಷ್ಟತಮಂ ಕರ್ಮ”* *”ಅಗ್ನಿಂ ದೂತಂ ಪುರೋ ದಧೇ ಹವ್ಯವಾಹಮುಪ ಬ್ರುಹೇ”* *”ಪ್ರಾತಃ ಪ್ರಾತಃ ಗೃಹಪತಿರ್ನೋ ಅಗ್ನಿಃ, ಸಾಯಂ ಸಾಯಂ ಸೌಮನಸ್ಯ ದಾತಾ,”* *”ತಂ ಯಜ್ಞಂ ಬರ್ಹಿಷಿಃ ಪ್ರೌಕ್ಷನ್ ಪುರುಷಂ ಜಾತಮಗ್ರತಃ”* ನೆನಪಿಡಿ.
ಇವು ಕೇವಲ ಉದಾಹರಣೆಗಳು. ಹುಡುಕುತ್ತಾ ಹೋದರೆ ನಮ್ಮ ವೇದಗಳಲ್ಲಿ ಇಂತಹ ಸಾವಿರಾರು ಯಜ್ಞಕ್ಕೆ ಸಂಬಂಧಿಸಿದ ಉದಾಹರಣೆಗಳು ಸಿಗ ಬಹುದು.
“ಈ ಪ್ರಪಂಚವನ್ನು ಸೃಷ್ಟಿಸಿ ಭಗವಂತ ಯಜ್ಞವನ್ನು ಪ್ರಾರಂಭಿಸಿದನಂತೆ, ಹಾಗೇ ನಾನೂ ಸಹ ಯಜ್ಞ ಮಾಡುತ್ತೇನೆ”. “ಈ ಯಜ್ಞಗಳಿಂದ ಸಂಪತ್ತು ಸಿಗುತ್ತದೆ.
ಹಾಗಾಗಿ ಯಜ್ಞಗಳನ್ನು ತಪ್ಪದೇ ಮಾಡು”. “ನಾನು ಯಜ್ಞಕುಂಡದಲ್ಲಿ ನನ್ನೆಲ್ಲಾ ಪಾಪ-ದುಃಖಗಳನ್ನು ಸಮರ್ಪಿಸುತ್ತಿದ್ದೇನೆ”. “ಈ ಅಗ್ನಿಯ ಜ್ವಾಲೆಯಂತೇ ನನ್ನ ಯಶಸ್ಸು ಉನ್ನತ ಸ್ಥಾನಕ್ಕೇರುತ್ತಿರಲಿ,” “ಹೇ ಅಗ್ನಿ ! ಜಗತ್ತಿನಲ್ಲಿರುವ ಎಲ್ಲಾ ರೋಗಗಳನ್ನು ನಿವಾರಿಸು” ಹೀಗೆ ಯಜ್ಞ-ಅಗ್ನಿಗಳನ್ನು ಪ್ರಾರ್ಥಿಸಿ ಕೊಳ್ಳುವ ಅನೇಕ ಉದಾಹರಣೆಗಳು ವೇದಗಳಲ್ಲಿವೆ.
ಆದ್ದರಿಂದ ಜನ್ಮದಿನ, ವ್ಯವಹಾರ ಪ್ರಾರಂಭೋತ್ಸವ, ಮದುವೆ, ಮುಂಜಿ, ದುಃಖದಲ್ಲಿ, ಖುಷಿಯಲ್ಲಿ ಆಜೀವ ಪರ್ಯಂತ ಹೋಮವನ್ನು ಆಚರಿಸುತ್ತಲೇ ಇರುತ್ತೇವೆ. ಯಜ್ಞವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ. ಪಾಪಕರ್ಮಗಳು ದೂರವಾಗುತ್ತವೆ ಎಂದು ನಂಬಿದ್ದೇವೆ.
ಹೋಮ ಮಾಡುವಾಗಿನ ಭಕ್ತಿ, ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ. ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ.
ಈ ನಂಬಿಕೆಗಳಿಗೆ ವೇದಗಳು ಪುಷ್ಟೀಕರಣ ನೀಡಿವೆ. ವೇದವಾಕ್ಯವನ್ನು ಪಾಲಿಸುವುದು ನಮ್ಮ ಕರ್ತವ್ಯ. ಕೇವಲ ಹೋಮ ಮಾಡಿಸಿದ ಯಜಮಾನನಿಗಷ್ಟೇ ಹೋಮದ ಫಲ ಸಿಗುವುದಿಲ್ಲ. ಪ್ರಕೃತಿಗೂ ಹೋಮದ ಫಲ ಸಿಗುತ್ತದೆ. ಹೇಗೆಂದು ಕೇಳುತ್ತೀರ?
ಹವನದಲ್ಲಿ ಉಪಯೋಗಿಸುವ ಸಾಮಗ್ರಿಗಳು (ಇವು ಶುದ್ಧವಾಗಿ, ಪ್ರಕೃತಿದತ್ತವಾಗಿರ ಬೇಕು) ಅಗ್ನಿಯಲ್ಲಿ ಆಹುತಿ ಬಿದ್ದು ಅದರಿಂದ ಬರುವ ಧೂಮ (ಹೊಗೆ) ಸರ್ವತ್ರ ವ್ಯಾಪಕವಾಗುತ್ತದೆ. ಈ ಧೂಮದಲ್ಲಿ ಅನೇಕ ಔಷಧೀಯ ಗುಣಗಳಿರುತ್ತವೆ. ಪ್ರಕೃತಿಯಲ್ಲಿರುವ ರೋಗವನ್ನು ಹಬ್ಬಿಸುವ ವಿಷಾಣುಗಳನ್ನು ಇವು ನಾಶ ಪಡಿಸುತ್ತವೆ. ಇದು ವೈಜ್ಞಾನಿಕ ಸಂಶೋಧನೆಗಳಿಂದ ಸಾಬೀತು ಪಟ್ಟಿದೆ.
ವಿಶ್ವ ಸ್ವಾಸ್ಥ್ಯ ಸಂಘಟನೆಯ (WHO) ಪ್ರಕಾರ ಪ್ರತಿವರ್ಷ ವಿಶ್ವದಲ್ಲಿ ಸಂಭವಿಸುವ ೫೭ ಮಿಲಿಯನ್ ಸಾವುಗಳಲ್ಲಿ ಶೇಕಡ ೨೫ ಸಾವುಗಳಿಗೆ ಇಂತಹ ಬ್ಯಾಕ್ಟೀರಿಯಾಗಳೇ ಕಾರಣ. ಒಂದು ವಿಷಯ ನೆನಪಿಡಿ.
ಹೋಮದಲ್ಲಿ ಬಳಸುವ ಪ್ರತಿವಸ್ತುವೂ ಪರಿಶುದ್ಧ ಹಾಗೂ ಪ್ರಾಕೃತಿಕವಾಗಿರ ಬೇಕು. ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸಿರ ಬಾರದು. ಆಗಲೇ ಹೋಮದ ಪರಿಣಾಮ ಚೆನ್ನಾಗಿರುತ್ತದೆ. ಹೋಮ-ಹವನಗಳಿಂದ ಅನೇಕ ರೋಗರುಜಿನಗಳೂ ನಿಯಂತ್ರಣಕ್ಕೆ ಬರುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳು ಸಾಬೀತು ಪಡಿಸಿವೆ.
೧. ಶೀತ ಹಾಗೂ ತಲೆನೋವು
೨. ಟಿ.ಬಿ (ಕ್ಷಯರೋಗ)
೩. ಮಾನಸಿಕ ಒತ್ತಡ ಹಾಗೂ ಖಿನ್ನತೆ
೪. ಚರ್ಮ ಸಂಬಂಧಿ ಕಾಯಿಲೆಗಳು
೫. ಮೂತ್ರ ಸಂಬಂಧಿ ರೋಗಗಳು
೬. ಶ್ವಾಸ ಸಂಬಂಧಿ ರೋಗಗಳು, ಅಸ್ತಮಾ ಇತರೆ
೭. ಕೆಲವು ಅಲರ್ಜಿ ಸಮಸ್ಯೆಗಳು ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇನ್ನೂ ಒಂದು ಅಚ್ಚರಿಯೇನೆಂದರೆ ಸುಮಾರು ನೂರಕ್ಕೂ ಹೆಚ್ಚಿನ ರೋಗಗಳನ್ನು “ಯಜ್ಞ ಥೆರಪಿ” ಎಂಬ ವೈದ್ಯಕೀಯ ವಿಧಾನದಿಂದ ಗುಣ ಪಡಿಸ ಬಹುದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. “ಯಜ್ಞ ಥೆರಪಿ” ಎಂಬ ಹೊಸ ವಿಧಾನ ಪಾಶ್ಚಾತ್ಯ ದೇಶಗಳಲ್ಲಿ ಬೆಳೆಯುತ್ತಿದೆ. ಭಾರತೀಯರಾದ ನಾವು ಹೆಮ್ಮೆ ಪಡುವಂತಹ ವಿಷಯವಿದು. ಇಂತಹ ಚಮತ್ಕಾರಕ, ರೋಗನಾಶಕ, ಬಲವರ್ಧಕ ಅನ್ವೇಷಣೆ ನಮ್ಮ ಪೂರ್ವಜರದ್ದು. ಹೋಮ-ಹವನಗಳನ್ನು ಪ್ರತಿಪಾದಿಸಿದ್ದು ನಮ್ಮ ವೇದಗಳು. ಈ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ ಕೊಂಡು ಹೋಗ ಬೇಕಾದದ್ದು ನಮ್ಮ ಪರಮ ಕರ್ತವ್ಯ.
ಯಜ್ಞ-ಹೋಮಗಳು ಪುರೋಹಿತರು ಉದರ ಪೋಷಣೆಗಾಗಿ ಮಾಡಿ ಕೊಂಡಿದ್ದು ಎಂಬ ಮನೋಭಾವ ಬದಲಾಗಲಿ.
ನಮ್ಮ ಸಂಸ್ಕೃತಿ, ಆಚರಣೆಯ ಬಗ್ಗೆ ಅಭಿಮಾನವಿರಲಿ. ನಮ್ಮ ಸನಾತನ ಆಚರಣೆಗಳನ್ನು ಪರಿಪಾಲಿಸುವ, ಪೋಷಿಸುವ ಕಾಯಕ ನಮ್ಮದಾಗಲಿ.
ಹಿಂದೂ ಪುರಾಣಗಳ ಪ್ರಕಾರ ಯಾವ ಹೋಮ-ಹವನಗಳನ್ನು ಮಾಡಿದರೆ ಯಾವ ಫಲಗಳು ಸಿಗುತ್ತವೆ ಅಂತ ತಿಳ್ಕೊಳ್ಳಿ..!!
ಹಿಂದಿನಿಂದಲೂ ವೇದಗಳನ್ನು ನಮ್ಮ ಸಂಸ್ಕೃತಿಯ ಆಧಾರವೆಂದು ಪರಿಗಣಿಸಿದವರು ನಾವು. ವೇದಗಳ ಪ್ರಕಾರ ಹೋಮ ಹವನ ಶುದ್ಧಿಗೊಳಿಸಲಾದ ಅಗ್ನಿಯಲ್ಲಿ ಅರ್ಪಣೆಗಳನ್ನು ಮಾಡುವುದು ಪ್ರಮುಖ ಕ್ರಿಯೆ. ಪ್ರಾಚೀನ ಕಾಲದಲ್ಲಿ ಋಷಿಗಳಿಂದ ಅದರ ಆಚರಣೆ ಮಾಡುತ್ತಾ ಬರಲಾಗುತ್ತಿದೆ. ಈಗ ಹೋಮ-ಹವನ ಶಬ್ದಗಳನ್ನು ಯಜ್ಞ ಮತ್ತು ಅಗ್ನಿಹೋತ್ರ ಶಬ್ದಗಳಿಂದ ಅದಲುಬದಲು ಮಾಡಬಹುದು.
ಹೀಗೆ ಹೋಮ ಹವನವನ್ನು ಮಾಡುವುದರಿಂದ ಭಗವಂತನ ಸನ್ನಿಧಿ ಪ್ರಾಪ್ತಿಯಾಗುತ್ತದೆ. ಪಾಪಕರ್ಮಗಳು ದೂರವಾಗುತ್ತವೆ ಎಂದು ನಂಬಿದ್ದೇವೆ. ಹೋಮ ಮಾಡುವಾಗಿನ ಭಕ್ತಿ, ಶ್ರದ್ಧೆಗಳಿಂದ ಮನುಷ್ಯನ ಮನಸ್ಸು ಶಾಂತವಾಗುತ್ತದೆ. ಪರಮಾತ್ಮನಲ್ಲಿ ವಿಲೀನಗೊಳ್ಳುತ್ತದೆ. ಈ ಮನಶ್ಶಾಂತಿ ಮನಸ್ಸಿನ ಅನೇಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೆ ಹೋಮ ಹವನಗಳನ್ನು ಮಾಡಿಸುವುದರಿಂದ ಕೇವಲ ಹೋಮ ಮಾಡಿಸಿದ ಯಜಮಾನನಿಗಷ್ಟೇ ಅದರ ಫಲ ಸಿಗುವುದಿಲ್ಲ. ಪ್ರಕೃತಿಗೂ ಹೋಮದ ಫಲ ಸಿಗುತ್ತದೆ.
ಹಾಗಾದರೆ ಯಾವ ಫಲಕ್ಕೆ ಯಾವ ಹೋಮವನ್ನು ಮಾಡಿಸಬೇಕು ಅಂತ ತಿಳಿಯೋಣ ಬನ್ನಿ:
ಎಲ್ಲಾ ಕಷ್ಟಗಳನ್ನು ಮತ್ತು ಕಾರ್ಯದಲ್ಲಿ ಬರುತ್ತಿರುವ ವಿಘ್ನಗಳನ್ನು ನಿವಾರಣೆಗೊಳಿಸಲು.
ಗಣಹೋಮ
ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.
ವಲ್ಲಭ ಗಣಪತಿ ಹೋಮ
ಗಣಪತಿ ಅನುಗ್ರಹ ಪ್ರಾಪ್ತಿಗಾಗಿ.
ಶ್ರೀ ಶಕ್ತಿ ಗಣಪತಿ ಹೋಮ
ಶೀಘ್ರ ವಿವಾಹ ಪ್ರಾಪ್ತಿಗಾಗಿ (ಜಾತಕದಲ್ಲಿ ಸೂಚಿಸಿದಂತೆ, ವಿವಾಹವಾಗುವಲ್ಲಿ ಬರುವ ವಿಘ್ನನಿವಾರಣೆಗೆ ಆಚರಿಸಬೇಕು.)
ಹರಿದ್ರಾ ಗಣಪತಿ ಹೋಮ
ಬಾಲ ಗಣಪತಿ ಹೋಮ
ತ್ರೈಲೋಕ್ಯ ಮೋಹನ ಗಣಪತಿ ಹೋಮ
ಲಕ್ಷ್ಮಿ ಪ್ರಾಪ್ತಿಗಾಗಿ ಆಚರಿಸಬೇಕು.
ಲಕ್ಷ್ಮೀಗಣಪತಿ ಹೋಮ
ಮನಸ್ಸಿನ ಎಲ್ಲಾ ಕಾಮನೆಗಳನ್ನು ಪಡೆಯಲು ಈ ಹೋಮ ಮಾಡಬೇಕು.
ಚಿಂತಾಮಣಿ ಗಣಪತಿ ಹೋಮ
ವಿದ್ಯಾ ಪ್ರಾಪ್ತಿಗಾಗಿ (ಜಾತಕದ ಸೂಚನೆಯಂತೆ ಆಚರಿಸಬೇಕು.)
ಮೇಧಾ ಗಣಪತಿ ಹೋಮ
ಬುದ್ಧಿ ಗಣಪತಿ ಹೋಮ
ಸಿದ್ಧಿ ಗಣಪತಿ ಹೋಮ
ಅಷ್ಟ ದ್ರವ್ಯ ಗಣಹೋಮ
ಸಂತಾನ ಅಪೇಕ್ಷಿತರು
ಸಂತಾನ ಗೋಪಾಲ ಕೃಷ್ಣ ಮಂತ್ರ ಜಪ ಸಹಿತ ಹವನ ಸಹಿತ ಸರ್ಪ ಶಾಂತಿ ಹವನ
ಸಾಲದ ಬಾಧೆ ನಿವಾರಣೆಗೆ (ಗುರುಗಳ ಆದೇಶದಂತೆ ಆಚರಿಸಬೇಕು.)
ಋಣ ಹರಣ ಗಣಪತಿ ಹೋಮ
ಕ್ಷಿಪ್ರ ಗಣಪತಿ ಹೋಮ
ಸ್ವರ್ಣ ಗಣಪತಿ ಹೋಮ
ಸಂಕಟಹರ ಗಣಪತಿ ಹೋಮ
ಮಾಡುತ್ತಿರುವ ಕಾರ್ಯದಲ್ಲಿ ವಿಘ್ನ ಬರದಿರಲೆಂದು ಈ ಹೋಮವನ್ನು ಆಚರಿಸಬೇಕು
ವಿನಾಯಕ ಶಾಂತಿ
ಗ್ರಹ ಬಾಧೆಯಿಂದ ಜೀವನದಲ್ಲಿ ಬರುವ ರೋಗ ಪೀಡಾ ಪರಿಹಾರಕ್ಕಾಗಿ ಮತ್ತು ಅಕಾಲ ಮೃತ್ಯು ನಿವಾರಣೆಗಾಗಿ ಮಾಡಬೇಕಾದ ಹೋಮಗಳು
ಮಹಾ ಮ್ರತ್ಯುಂಜಯ ಹೋಮ
ಅಮೃತ ಮ್ರತ್ಯುಂಜಯ ಹೋಮ
ಅಭಯಾಯುಷ್ಯ ಹೋಮ
ಉಗ್ರ ನರಸಿಂಹ ಹೋಮ
ದೂರ್ವಾ ಮೃತ್ಯುಂಜಯ ಹೋಮ
ಆಯುಷ್ಯ(ಚರು)ಹೋಮ
ಮಹಾಲಕ್ಷ್ಮಿ ಅನುಗ್ರಹ ಪ್ರಾಪ್ತಿ ಮತ್ತು ಉದ್ಯೋಗ, ವ್ಯವಹಾರ ಜಯ ಪ್ರಾಪ್ತಿಗಾಗಿ .
ಶ್ರೀಸೂಕ್ತ ಹೋಮ
ಲಕ್ಷ್ಮೀ ಹೋಮ(ಕಮಲದ ಹೂವಿನಿಂದ)
ಲಕ್ಷ್ಮಿ ನೃಸಿಂಹ ಹೋಮ
ಲಕ್ಷ್ಮಿ ನಾರಾಯಣ ಹೃದಯ ಹೋಮ
ಕುಬೇರ ಲಕ್ಷ್ಮೀ ಹೋಮ
ಚಂಡಿಕಾ ಹೋಮ(ನವ,ಶತ,ಸಹಸ್ರ)
ರೋಗ ನಿವಾರಣೆಗಾಗಿ ಮಾಡಬೇಕಾದ ಹೋಮಗಳು (ಜಾತಕದಲ್ಲಿ ಸೂಚಿಸಿದಂತೆ ರೋಗಕ್ಕೆ ಅನುಸಾರವಾಗಿ ಮಾಡಬೇಕು)
ಧನ್ವಂತರಿ ಹವನ ಸಹಿತ ಮೃತ್ಯು ಸಂಜೀವಿನಿ ಮಹಾ ಮಂತ್ರ ಹವನ
ಅಪಸ್ಮಾರ ದಕ್ಷಿಣಾಮೂರ್ತಿ ಹೋಮ
ನವಗ್ರಹ ಹೋಮ(ಪ್ರತ್ಯೇಕ ಗ್ರಹಶಾಂತಿ)
ಸುಬ್ರಹ್ಮಣ್ಯ ಹೋಮ
ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ, ಆತಂಕಗಳ ನಿವಾರಣೆಯಾಗಿ ಶೀಘ್ರ ವಿವಾಹ ಪ್ರಾಪ್ತಿಯಾಗಲು ಮಾಡಬೇಕಾದ ಹೋಮ
ಉಗ್ರ ನೃಸಿಂಹ ಹೋಮ(೨೮ ಸಾವಿರ ಜಪ ಮಾಡಬೇಕು)
ಸ್ವಯಂವರ ಪಾರ್ವತಿ ಹೋಮ(೧೦ ಸಾವಿರ ಜಪ ಮಾಡಬೇಕು)
ಬಾಣೇಶಿ ಹೋಮ(೧೦ ಸಾವಿರ ಜಪ ಮಾಡಬೇಕು)
ಅಶ್ವಾರೂಢ ಪಾರ್ವತಿ ಹೋಮ(೧೦ ಸಾವಿರ ಜಪ ಮತ್ತು ಹೋಮ ಮಾಡಬೇಕು)
ಜನ್ಮಾಂತರದಲ್ಲಿ ಮಾಡಿದ ಪಾಪಕರ್ಮದ ಫಲವಾಗಿ ಮಕ್ಕಳು ಆಗದೆ ಇದ್ದಾಗ ಮಾಡಬೇಕಾದ ಹೋಮಗಳು
ಸಂತಾನ ಗೋಪಾಲಕೃಷ್ಣ ಹೋಮ
ನಾಗರಾಜ ಮಂತ್ರ ಹೋಮ
ಪುರುಷ ಸೂಕ್ತ ಹೋಮ
ಶ್ರೀ ವಿದ್ಯಾ ಹೋಮ
ಶ್ರೀ ರುದ್ರ ಹೋಮ(ಲಘು ರುದ್ರ,ಶತ ರುದ್ರ,ಮಹಾ ರುದ್ರ,ಅತಿ ರುದ್ರ) ಜಾತಕವನ್ನು ಪರಿಶೀಲಿಸಿ ಯೋಗ್ಯ ಸಲಹೆ ಪಡೆದು ಆಚರಿಸಬೇಕು.
ಕಳೆದು ಹೋದ ವಸ್ತು ಪ್ರಾಪ್ತಿಗಾಗಿ ಈ ಹೋಮವನ್ನು ಮಾಡಬೇಕು.
ಕಾರ್ತವೀರ್ಯಾರ್ಜುನ ಜಪ ಹೋಮ..
ಲೋಕಾಃ ಸಮಸ್ತಾಃ ಸುಖಿನೋ ಭವಂತು..
ಕೃಷ್ಣಾರ್ಪಣಮಸ್ತು