ನಿತ್ಯ ಭವಿಷ್ಯ
ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ: 15/07/2019 ಸೋಮವಾರ
ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ ಜ್ಯೋತಿಷ್ಯ ಮಾರ್ಗದರ್ಶನ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್ 9900494333
ಮೇಷ ರಾಶಿ
ವಿದ್ಯಾಭ್ಯಾಸ ಮಾಡುವವರು ಹೆಚ್ಚಿನ ಪ್ರಯತ್ನದಿಂದ ಯಶಸ್ಸು ಗಳಿಸಬಲ್ಲರು. ಏಕಾಗ್ರತೆಯಿಂದ ಪ್ರಯತ್ನಿಸಿ ನಿಮ್ಮಲ್ಲಿರುವ ಬುದ್ಧಿವಂತಿಗೆಯ ಪೂರ್ಣ ಪ್ರಯೋಜನ ಪಡೆಯಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಆತ್ಮವಿಶ್ವಾಸದ ಕೊರತೆಯಿಂದ ಹಿನ್ನೆಡೆ ಅನುಭಸುವ ಸಾಧ್ಯತೆ ಇದೆ.
ಪೂರ್ವ ತಯಾರಿ ನಡೆಸಿ ಆತ್ಮವಿಶ್ವಾಸ ದಿಂದ ಪ್ರಯತ್ನಿಸಿದರೆ ಕೆಲವು ಯಶಸ್ಸು ಸಾಧ್ಯವಾಗುವುದು. ಹೂಡಿಕೆಗೆ ಇದು ಕಾಲವಲ್ಲ. ವಿವಾಹದಲ್ಲಿ ಉತ್ತಮ ಸಂಬಂಧಗಳು ಬಂದರೂ ಅದನ್ನು ಶುಭ ಸಮಾರಂಭದಲ್ಲಿ ಕೊನೆಗೊಳಿಸುವಲ್ಲಿ ವಿಫಲ ರಾಗುವರು. ತಾಳ್ಮೆ ಇರಲಿ. ವೃದ್ಧರು ಆರೋಗ್ಯದ ಕಿರಿಕಿರಿ ಅನುಭವಿಸುವರು. ಮಕ್ಕಳ ಅಸಹಕಾರ ಚಿಂತೆ ತರುವುದು.
ವೃಷಭ ರಾಶಿ
ವಿದ್ಯಾಭ್ಯಾಸದಲ್ಲಿ ಸತತ ಪರಿಶ್ರಮದಿಂದ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗುವುದು. ಆಗಾಗ ಕಾಡುವ ಸಣ್ಣ ಪುಟ್ಟ ಅನಾರೋಗ್ಯಕ್ಕೆ ಮನಸು ಕೆಡಿಸಿಕೊಳ್ಳಬೇಡಿ.
ಉದ್ಯೋಗಿಗಳಿಗೆ ಉತ್ತಮ ಯಶಸ್ಸು ಗಳಿಸಲು ಸಾಧ್ಯವಾಗುವುದು. ಆದರೆ ಅಷ್ಟೇ ಅಡೆತಡೆಗಳನ್ನೂ ಖರ್ಚು ವೆಚ್ಚಗಳನ್ನೂ ಎದುರಿಸಬೇಕಾಗುವುದು. ಮುನ್ನುಗ್ಗಿ ಮುಂದಿನ ದಿನಗಳಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗುವುದು.
ವಿವಾಹದಲ್ಲಿ ಸರಿಯಾದ ಸಂಬಂಧಗಳು ಬರದೇ, ಕೌಟುಂಬಿಕ ಸಮಸ್ಯೆಯಿಂದ ಚಿಂತಿತ ರಾಗುವರು. ಧೈರ್ಯದಿಂದ ಪ್ರಯತ್ನ ಮುಂದುವರಿಸಿ.
ವೃದ್ಧರು ಹೃದಯ ಸಂಬಂಧಿಸಿರುವ ಕಾಯಿಲೆಯಿಂದ ನರಳುವ ಸಾಧ್ಯತೆ ಇದೆ. ವೃಥಾ ಮಾನಸಿಕ ಚಿಂತೆ ಕಾಡುವುದು. ಮಕ್ಕಳ ಸಹಾಯ, ಸಹಕಾರ ನೆಮ್ಮದಿ ತರುವ ವಿಚಾರ.
ಮಿಥುನ ರಾಶಿ
ವಿದ್ಯಾಭ್ಯಾಸ ಉತ್ತಮ ಪ್ರಯತ್ನ ಮಾಡುವರಾದರೂ ನೆನಪಿನ ಶಕ್ತಿಯ ಕೊರತೆಯಿಂದ ಅಧೀರರಾಗುವರು. ಚಿಂತಿಸಬೇಡಿ ಗುರು,ಹಿರಿಯರು ನಿಮ್ಮ ಬೆನ್ನಿಗಿದ್ದಾರೆ. ಹೆಚ್ಚಿನ ಪ್ರಯತ್ನ ಅತ್ಮವಿಶ್ವಾಸ ದಿಂದ ಸಾಕಷ್ಟು ಉತ್ತಮ ಯಶಸ್ಸು ಗಳಿಸಬಲ್ಲಿರಿ.
ಉದ್ಯೋಗದಲ್ಲಿ ದುಡುಕು ನಿರ್ಧಾರದಿಂದ ಉತ್ತಮ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ವಿವೇಚನೆಯಿಂದ ಅನುಭವಿಗಳ ಸಲಹೆ ಸಹಕಾರ ಪಡೆದು ಪ್ರಯತ್ನಿಸಿದರೆ ಯಶಸ್ಸು ಗಳಿಸಬಲ್ಲಿರಿ. ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಮನಕ್ಕೊಪ್ಪುವ ಸಂಬಂಧ ಸಿಗದೇ ಚಿಂತಿತರಾಗುವರು.
ತಾಳ್ಮೆ ಯಿಂದ ಪ್ರಯತ್ನ ಮುಂದುವರಿಸಿ. ವೃದ್ಧರು ಅಜೀರ್ಣ ಸಮಸ್ಯೆಯಿಂದ ಬಳಲುವರು. ಮಕ್ಕಳ ಸಹಾಯ ಸಹಕಾರ ಉತ್ತಮ ವಿರುವುದು.
ಕರ್ಕಟಕ ರಾಶಿ
ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಯತ್ನ ಶೀಲರಾಗಿ ಹೆಚ್ಚಿನ ಯಶಸ್ಸು ಗಳಿಸುವರು. ಚಂಚಲತೆಯನ್ನು ನಿಯಂತ್ರಿಸಿ ಏಕಾಗ್ರತೆಯಿಂದ ಪ್ರಯತ್ನಿಸಿ.
ಉದ್ಯೋಗಿಗಳಿಗೆ ಅಡೆತಡೆ ಗಳ ಮಧ್ಯೆಯೂ ಉತ್ತಮ ಯಶಸ್ಸು ಗಳಿಸಬಲ್ಲರು. ನಿಮ್ಮ ಪೂರ್ವ ತಯಾರಿ ಸರಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಅತಿಯಾದ ಅತ್ಮವಿಶ್ವಾಸ ಯಶಸ್ಸು ತರದು.
ವಿವಾಹಾರ್ಥಿಗಳು ಸರಿಯಾದ ಸಂಬಂಧ ಸಿಗದೇ ಚಿಂತಿತರಾಗುವರು. ಆದರೆ ಪ್ರೇಮ ವಿವಾಹಗಳು ಕೌಟುಂಬಿಕ ವಿರೋಧದ ನಡುವೆಯೂ ಯಶಸ್ಸು ಕಾಣುವವು.
ವೃದ್ಧರು ಬೆನ್ನು ನೋವು, ಅತಿಸಾರದಂತಹ ತೊಂದರೆ ಅನುಭವಿಸುವರು. ಮಕ್ಕಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಚಿಂತಿತರಾಗುವಿರಿ.
ಸಿಂಹ ರಾಶಿ
ವಿದ್ಯಾಭ್ಯಾಸದಲ್ಲಿ ಹಲವು ಬಾಹ್ಯ ಆಕರ್ಷಣೆಗಳಿಂದ ಏಕಾಗ್ರತೆ ಸಾಧಿಸಲು ವಿಫಲ ರಾಗುವರು. ಆತ್ಮವಿಶ್ವಾಸದ ಕೊರತೆಯೂ ಉಂಟಾಗುವುದು. ವಿವಾಹದಲ್ಲಿ ಉತ್ತಮ ಸಂಬಂಧ ಪಡೆದು ಶುಭ ಕಾರ್ಯ ಮಾಡಲು ಶಕ್ತ ರಾಗುವರು.
ಚಿಕ್ಕ ಪುಟ್ಟ ಕೌಟುಂಬಿಕ ವಿರಸಗಳಿಂದ ವಿಚಲಿತರಾಗದಿರಿ. ವೃದ್ಧರು ಅಪಘಾತ ಭಯ ಎದುರಿಸುವರು. ಹೊಟ್ಟೆ ಸಂಬಂಧಿ ಸಮಸ್ಯೆ ಎದುರಾಗುವುದು. ಆಹಾರ ವಿಹಾರದಲ್ಲಿ ಎಚ್ಚರ ಅವಶ್ಯಕ. ಮಕ್ಕಳ ಸಹಕಾರ ಇದ್ದರೂ ನಿಧಾನ ವಾಗುವುದು.
ಕನ್ಯಾ ರಾಶಿ
ವಿದ್ಯಾಭ್ಯಾಸದಲ್ಲಿ, ಉತ್ತಮ ಯಶಸ್ಸು ಸಾಧ್ಯವಾಗುವುದು. ಆದರೆ ನೆನಪಿನ ಶಕ್ತಿಯ ಕೊರತೆಯಿಂದ ಅದೀರರಾಗದೆ ಹೆಚ್ಚಿನ ಪ್ರಯತ್ನಮಾಡಿ ಯಶಸ್ಸು ಗಳಿಸಿ.
ಉದ್ಯೋಗಿಗಳಿಗೆ ಉತ್ತಮ ಪ್ರಯತ್ನದಿಂದ ಯಶಸ್ಸು ಗಳಿಸಬಲ್ಲರು. ಆದರೆ ಪ್ರತಿಸ್ಪರ್ಧಿಗಳ ಮಾತಿಗೆ ಮರುಳಾಗಿ ವೃಥಾ ಖರ್ಚು, ಮೋಸಹೋಗುವ ಸಾಧ್ಯತೆ ಇದೆ. ವಿವಾಹದಲ್ಲಿ ಉತ್ತಮ ಸಂಬಂಧ ಪಡೆದು ಶುಭಕಾರ್ಯ ನೆರವೇರುವುದು. ಕೌಟುಂಬಿಕ ಅಡೆತಡೆಗಳನ್ನು ವಿವೇಚನೆಯಿಂದ ನಿಭಾಯಿಸಿ.
ವೃದ್ಧರು ಮೂಲವ್ಯಾಧಿ ಇತ್ಯಾದಿಗಳಿಂದ ಬಳಲುವ ಸಾಧ್ಯತೆ ಇದೆ. ಆಹಾರ ವಿಹಾರದಲ್ಲಿ ಎಚ್ಚರ ಅಗತ್ಯ. ಮಕ್ಕಳ ಸಹಕಾರ ಉತ್ತಮವಿದ್ದರೂ ಸಾಕಷ್ಟು ಖರ್ಚು ವೆಚ್ಚ ಎದುರಾಗ ಬಹುದು.
ತುಲಾ ರಾಶಿ
ವಿದ್ಯಾಭ್ಯಾಸದಲ್ಲಿ ಚಂಚಲ ಮನಸ್ಸು, ಮಾನಸಿಕ ಆಲಸ್ಯ, ಪ್ರಯತ್ನ ಶೀಲತೆಯ ಕೊರತೆ ಯಿಂದ ಹಿನ್ನೆಡೆ ಅನುಭವಿಸ ಬೇಕಾಗ ಬಹುದು. ಧೈರ್ಯದಿಂದ, ಆತ್ಮ ವಿಶ್ವಾಸದಿಂದ ಹೆಚ್ಚಿನ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಸಾಧ್ಯವಾಗುವುದು.
ಉದ್ಯೋಗಿಗಳು ಬ್ರಮಾಧೀನರಾಗಿ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವಾಹಾರ್ಥಿಗಳು ಸರಿಯಾದ ಸಂಬಂಧಗಳು ಸಿಗದೇ ನಿರಾಶರಾಗುವರು. ಒಳ್ಳೇ ದಿನಕ್ಕಾಗಿ ಕಾಯದೇ ಬೇರೆ ಮಾರ್ಗವಿಲ್ಲ.
ವೃದ್ಧರು ಚರ್ಮ ಸಂಬಂಧಿರೋಗಗಳಿಂದ, ಅಲರ್ಜಿಯಿಂದ ಬಳಲುವ ಸಾಧ್ಯತೆ. ಸರಿಯಾದ ಆಯುರ್ವೇದ ಚಿಕಿತ್ಸೆ ಪಡೆಯಿರಿ. ಮಕ್ಕಳ ಸಹಕಾರ ನೆಮ್ಮದಿ ತರುವುದು.
ವೃಶ್ಚಿಕ ರಾಶಿ
ವಿದ್ಯಾಭ್ಯಾಸದಲ್ಲಿ ಉತ್ತಮ ಯಶಸ್ಸು ಪಡೆಯುವರು. ಆಗಾಗ ಕಾಡುವ ಆತ್ಮವಿಶ್ವಾಸದ ಕೊರತೆಯನ್ನು ಧೈರ್ಯದಿಂದ ವಿವೇಚನೆ ಯಿಂದ ಎದುರಿಸಿ.
ಉದ್ಯೋಗಿಗಳು ಅಸಡ್ಡೆ ಯಿಂದ ಸರಿಯಾದ ತಯಾರಿ ನಡೆಸದೇ ತೊಂದರೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ಅನುಭವಿಗಳ ಸಹಾಯ ಪಡೆದು ಆತ್ಮವಿಶ್ವಾಸ ದಿಂದ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗುವುದು.
ವಿವಾಹಾಕಾಂಕ್ಷಿಗಳು ಉತ್ತಮ ಸಂಬಂಧ ಪಡೆಯುವಲ್ಲಿ ಯಶಸ್ವಿ ಆಗುವರು. ಆದರೆ ಹಲವು ಅಡೆತಡೆಗಳು ಕೌಟುಂಬಿಕ ಸಮಸ್ಯೆಗಳು ಚಿಂತೆಗೆ ಕಾರಣ ವಾಗುವವು. ವೃದ್ಧರು ಹೊಟ್ಟೆ ಸಂಬಂಧಿ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ. ಮಕ್ಕಳ ಸಹಕಾರ ಉತ್ತಮ ವಾಗಿರುವುದು.
ಧನಸ್ಸು ರಾಶಿ
ವಿದ್ಯಾಭ್ಯಾಸದಲ್ಲಿ ನಿಮಗೆ ಹಲವು ವಿಘ್ನಗಳನ್ನು ಎದುರಿಸಬೇಕಾಗುತ್ತದೆ. ಚಂಚಲತೆಯಿಂದ ದೂರ ಇದ್ದು ನಿಮ್ಮ ಧ್ಯೇಯದ ಕಡೆ ಏಕಾಗ್ರತೆಯಿಂದ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗುವುದು.
ಉದ್ಯೋಗಿಗಳು ಹಿಂಜರಿಕೆಯಿಂದ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವೇಚನೆಯಿಂದ ಉತ್ತಮ ಪ್ರಯತ್ನದಿಂದ ಯಶಸ್ಸು ಸಾಧ್ಯವಾಗುವುದು. ವಿವಾಹದಲ್ಲಿ ಉತ್ತಮ ಸಂಬಂಧ ಬಂದರೂ ಹಿತಶತ್ರುಗಳ ಕಾಟದಿಂದ ಅವು ಕೈತಪ್ಪುವ ಸಾಧ್ಯತೆ. ತಾಳ್ಮೆ ಇರಲಿ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆದರೆ ಯಶಸ್ಸು ಸಾಧ್ಯ.
ವೃದ್ಧರು ಮೂತ್ರ ಕೋಶ ಸಂಬಂಧಿ ರೋಗಗಳಿಂದ ಅಥವ ಚರ್ಮರೋಗ, ಅಲರ್ಜಿಗಳಿಂದ ಬಳಲುವ ಸಾಧ್ಯತೆ ಇದೆ. ಉತ್ತಮ ಅಲೋಪಥಿ ವೈದ್ಯರ ಉಪಚಾರ ಪಡೆಯಿರಿ. ಮಕ್ಕಳ ಸಹಕಾರ ಸಿಗದೇ ಚಿಂತಿತರಾಗುವಿರಿ.
ಮಕರ ರಾಶಿ
ವಿದ್ಯಾಭ್ಯಾಸ ತಮ್ಮ ಚಂಚಲತೆ ಮತ್ತು ದಾಷ್ಟ್ಯ ದಿಂದ ಪ್ರಯತ್ನಶೀಲರಾಗದೇ ಹಿನ್ನೆಡೆ ಅನುಭವಿಸುವರು. ಗುರುಗಳ ಮಾರ್ಗದರ್ಶನದಂತೆ ನಡೆದು ಯಶಸ್ಸು ಗಳಿಸಿ. ಉದ್ಯೋಗಿಗಳು ಸರಿಯಾದ ರೆಸ್ಯೂಮೆ ಯೊಂದಿಗೆ ವಿವೇಚನೆಯಿಂದ ಆಲಸ್ಯ ತೊರೆದು ಪ್ರಯತ್ನಿಸಿದರೆ, ಹಲವು ವಿಘ್ನಗಳನಡುವೆಯೂ ಯಶಸ್ಸು ಗಳಿಸಬಲ್ಲರು.
ವಿವಾಹದಲ್ಲಿ ಸರಿಯಾದ ಸಂಬಂಧಗಳು ಬರದೇ ಚಿಂತಿತರಾಗವರು. ತಾಳ್ಮೆಯಿಂದ ಪ್ರಯತ್ನ ಮುಂದುವರಿಸಿ. ವೃದ್ಧರು ರಕ್ತದೊತ್ತಡ ದಂತಹ ಸಮಸ್ಯೆಗಳ ಬಗ್ಗೆ ಜಾಗರೂಕ ರಾಗಿವುದು ಒಳಿತು. ಮಕ್ಕಳ ಸಹಕಾರ ಉತ್ತಮ ವಾಗಿರುವದಾದರೂ ನಿಮ್ಮ ನಿರೀಕ್ಷೆಯಂತೆ ಇಲ್ಲವಾಗಿ ವೃಥಾ ಚಿಂತಿತ ರಾಗುವಿರಿ.
ಕುಂಭ ರಾಶಿ
ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಯತ್ನಶೀಲರಾದರೆ ಯಶಸ್ಸು ಗಳಿಸುವರು. ಅತಿ ಮಹತ್ವಾಕಾಂಕ್ಷೆ, ಕೈಮೀರಿದ ಕನಸು ನಿಮ್ಮ ಹಾದಿ ತಪ್ಪಿಸಬಹುದು. ಉದ್ಯೋಗಿಗಳು ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗಬಹುದು.
ವಿವೇಚನೆ ಅಗತ್ಯ. ವಿವಾಹದಲ್ಲಿ ಉತ್ತಮ ಸಂಬಂಧ ಪಡೆದು ಯಶಸ್ವಿಯಾಗುವರು. ಆದರೆ ವಿವೇಚನೆ ಅಗತ್ಯ ದುಡುಕು ನಿರ್ಧಾರ ನಿಮ್ಮನ್ನು ಆಮೇಲೆ ಸಂಕಷ್ಟಕ್ಕೆ ನೂಕಬಹುದು. ವೃದ್ಧರು ಅಪಘಾತ ಭಯವಿರುವುದರಿಂದ ಎಚ್ಚರ ಅವಶ್ಯಕ.
ಹೃದಯ ಸಂಬಂಧಿ ರೋಗದಿಂದ ಬಳಲುವರೂ ಎಚ್ಚರಿಕೆ ಯಿಂದ ಇರುವುದು ಅವಶ್ಯಕ. ಮಕ್ಕಳ ಸಹಕಾರ ಅಷ್ಟಕಷ್ಟೆ.
ಮೀನಾ ರಾಶಿ
ವಿದ್ಯಾಭ್ಯಾಸದಲ್ಲಿ ಅತಿ ಭೋಗದಾಸೆ ಹಿನ್ನೆಡೆ ತರುವುದು. ವಿವೇಚನೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ. ಯಶಸ್ಸು ನಿಮ್ಮದಾಗುವುದು. ಉದ್ಯೋಗಿಗಳು ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗುವುದು. ಸಧ್ಯ ಬಂದದ್ದನ್ನು ಸ್ವೀಕರಿಸುವು ಜಾಣತನ.
ಪ್ರಗತಿ ಸಾಧ್ಯವಾಗುವುದು. ವಿವಾಹದಲ್ಲಿ ಉತ್ತಮ ಸಂಬಂಧ ಬಂದರೂ ಅದನ್ನು ಶುಭ ಕಾರ್ಯದಲ್ಲಿ ಕೊನೆಗೊಳಿಸುವುದು ಕಷ್ಟ ಸಾಧ್ಯ.
ವೃದ್ಧರು ಅಪಘಾತ ಭಯ, ರಕ್ತ ಹೀನತೆ ಯಂತಹ ಸಮಸ್ಯೆಗಳಿಂದ ಬಳಲುವರು. ಎಚ್ಚರ ಅವಶ್ಯಕ. ಉತ್ತಮ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ. ಮಕ್ಕಳ ಸಹಕಾರ ಉತ್ತಮ ವಿರುವುದು. ವೃಥಾ ಚಿಂತೆ ಬೇಡ.
ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್ 9900494333.