ದಿನದ ಸುದ್ದಿ

ಭಯಾನಕ ಮೊಮೊ ಗೇಮ್ ; ಇಲ್ಲಿದೆ ನೋಡಿ ಶಾಕಿಂಗ್ ಮಾಹಿತಿ !

Published

on

ಸುದ್ದಿದಿನ ಡೆಸ್ಕ್: ಇಂಟರ್ ನೆಟ್ ಬಳಕೆ ಇಂದಿನ ಮಕ್ಕಳ ಜೀವಕ್ಕೆ ಕಂಠಕವಾಗುತ್ತಿದೆ. ಅದಕ್ಕೆ ಅಪಾಯಕಾರಿ ಆನ್ ಲೈನ್ ಆಟಗಳು ಕಾರಣವಾಗುತ್ತಿವೆ. ಈಗ ಭಯಾನಕ ಮೊಮೊ ಗೇಮ್ ಆತಂಕ ಹುಟ್ಟಿಸಿದೆ.

ಹೌದು, ಬ್ಲ್ಯೂ ವೇಲ್ ನಂತರ ಮೊಮೊ ವಾಟ್ಸಪ್ ಚಾಲೆಂಜ್ ಕೂಡ ಈಗ ಮಕ್ಕಳಿಗೆ ಮಾರಕವಾಗಿ ಪರಿಣಮಿಸಿದೆ. ಆಟಕ್ಕೆ ಭಾರತದಲ್ಲಿ ಮೊದಲ ಬಲಿಯಾಗಿರುವ ವರದಿಯಾಗಿದೆ.

ರಾಜಸ್ಥಾನದ ಅಜಮೇರ್ ಎಂಬಲ್ಲಿ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ. ನಮೊಮೊ ಚಾಲೆಂಜ್ ನಿಂದ ಹತ್ತನೇ ತರಗತಿಯ ವಿದ್ಯಾರ್ಥಿನಿಯೋರ್ವಳು ತನ್ನ ಕೈ ನರಗಳನ್ನು ಕತ್ತರಿಸಿಕೊಂಡು ನಂತರ ನೇಣಿಗೆ ಶರಣಾಗಿದ್ದಾಳೆ.

ವಿದ್ಯಾರ್ಥಿನಿಯ ಮೊಬೈಲ್ ನಲ್ಲಿರುವ ಬ್ರೌಸರ್ ಹಿಸ್ಟರಿ, ಮೊಮೊ ಚಾಲೆಂಜ್ ಗೇಮ್ ನ ನಿಯಮಗಳನ್ನು ಪರಿಶೀಲನೆ ಮಾಡಿ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ವರದಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version