ಲೈಫ್ ಸ್ಟೈಲ್
ರೆಸಿಪಿ | ಮುಂಗಾರಿನ ಮನಸ್ಸಿಗೆ ಈರುಳ್ಳಿ ಉಪ್ಪಿನಕಾಯಿ
ಮಳೆಗಾಲದ ಈ ದಿನಗಳಲ್ಲಿ ಬಜ್ಜಿ ಬೋಂಡಾಕ್ಕೆ ನಾಲಿಗೆ ಹಪಹಪಿಸುತ್ತದೆ. ದೇಹಕ್ಕೆ ಉಷ್ಣಾಂಶದ ಕೊರತೆಯುಂಟಾಗುವುದು ಇದಕ್ಕೆ ಪ್ರಮುಖ ಕಾರಣ. ಈ ನಿಟ್ಟಿನಲ್ಲಿ ಮಳೆಗಾಲದಲ್ಲಿ ತಪ್ಪದೇ ಖಾರದ ಅಂಶ ಆಹಾರದಲ್ಲಿ ಹೆಚ್ಚಿರಲಿ. ಮುಖ್ಯವಾಗಿ ಊಟದಲ್ಲಿ ಉಪ್ಪಿನಕಾಯಿ ಇರಲೇಬೇಕು. ಉಪ್ಪಿನಕಾಯಿ ಇದ್ರೆ ಸಾಕು ಇನ್ನೇನೂ ಬೇಡ. ಬರಿ ಅನ್ನಕ್ಕೆ ತುಪ್ಪ ಸೇರಿಸಿ ತಿನ್ನಬಹುದು.
ಮಳೆಗಾಲ ಅಂದ್ರೆ ಸಾಕು ಎಲ್ಲರ ಮನೆಯಲ್ಲೂ ಖಾರದ ಅಡುಗೆಗಳು ಘಮ ಘಮ ಎನ್ನುತ್ತವೆ. ಅದರಲ್ಲೂ ಬಾಯಿ ರುಚಿ ಅಂತಾ ಬಜ್ಜಿ ಬೋಂಡಾಗಳು ಬೇಯುತ್ತವೆ. ಆದ್ರೆ ಇದರಿಂದ ಎಣ್ಣೆ ಅಂಶ ದೇಹಕ್ಕೆ ಸೇರಿ ಚಳಿಗಾಲದಲ್ಲಿ ಹೃದಯಾಘಾತವಾಗುವ ಸಂಭವವಿರುತ್ತೆ. ಹಾಗಾದ್ರೆ ಮಳೆಗಾಲದಲ್ಲಿ ಮನಸು ಬೇಡುವ ಖಾರದ ರುಚಿಗೆ ತಪ್ಪದೇ ಉಪ್ಪಿನ ಸೇವಿಸಿ.
ಹಾಗಾದ್ರೆ ಮುಂಗಾರಿನ ತುಂತುರಿನಲ್ಲಿ ಸವಿಯಲೇಬೇಕಾದ ಈರುಳ್ಳಿ ಉಪ್ಪಿನಕಾಯಿಗಳು ಮಾಡೋದು ಹೇಗೆ ನೋಡಿ.
ಈರುಳ್ಳಿಯ ಸ್ಪೆಷಲ್ ಉಪ್ಪಿನ ಕಾಯಿ, ಮಳೆಗಾಲದಲ್ಲಿ ದೇಹಕ್ಕೆ ಅಗತ್ಯವಾದ ಉಷ್ಣಾಂಶವನ್ನು ಪೂರೈಸುವಲ್ಲಿ ಈರುಳ್ಳಿ ಸೇವನೆ ಪ್ರಯೋಜನಕಾರಿ. ಅಲ್ಲದೇ ಮಳೆಗಾಲದ ಆರೋಗ್ಯ ಸಮಸ್ಯೆಗೆ ಈರುಳ್ಳಿ ಸೇವನೆ ಇರಲಿ. ಸರಿ ಬನ್ನಿ ಹಾಗಿದ್ರೆ ಈರುಳ್ಳಿ ಉಪ್ಪಿನಕಾಯಿ ಸ್ವಾದವನ್ನು ಸವಿಯೋಣ.
ಈರುಳ್ಳಿ ಉಪ್ಪಿನಕಾಯಿಗೆ ಬೇಕಾಗುವ ಸಾಮಗ್ರಿಗಳು
• ಮೀಡಿಂಯಂ ಸೈಜ್ನ 7 ಕೆಂಪು ಈರುಳ್ಳಿಯನ್ನು ಸಿಪ್ಪೆ ಬಿಡಿಸಿಟ್ಟುಕೊಳ್ಳಿ.
• ಒಂದು ನಿಂಬೆ ಹಣ್ಣಿನ ಗಾತ್ರದ ಕೆಂಪು ಅಥವಾ ಹಳೇ ಹುಣಸೇ ಹಣ್ನನ್ನು ಬಳಸಿಕೊಳ್ಲಿ. ಹೂಣಸೇ ಹಣ್ಣು ಉಪ್ಪಿನಕಾಯಿಗೆ ಹೆಚ್ಚು ರುಚಿ ನೀಡುತ್ತದೆ.
• ಇನ್ನು ಮಿಕ್ಸಿ ಮಾಡಿಕೊಳ್ಳಲು ಒಂದು ಗಡ್ಡೆ ಬೆಳ್ಳುಳ್ಲಿ, ಸಿಪ್ಪೆ ಬಿಡಿಸಿಟ್ಟುಕೊಳ್ಳಿ. ಸಿಪ್ಪೆ ಬಿಡಿಸಿದ ಒಂದು ದೊಡ್ಡ ಶುಂಠಿ ಎಸಳು.
• 20-30 ಬ್ಯಾಡಗಿ ಮೆಣಸಿನಕಾಯಿಯನ್ನು ಬಳಸಿಕೊಳ್ಳಿ.ಇದನ್ನು ಮಸಾಲೆಗೆ ಬಳಸಿಕೊಳ್ಳುತ್ತೇವೆ. ಇದು ಉಪ್ಪಿನಕಾಯಿಗೆ ಹೆಚ್ಚ ಟೇಸ್ಟ್ ಕೊಡುತ್ತೆ.
• ಇಂಗು ಬಳಸುವುದರಿಂದ ಅಸಿಡಿಟಿ ಕಡಿಮೆಯಾಗುತ್ತದೆ. ಕರಿಯಲು ಎಣ್ಣೆ, ಎಳ್ಳೆಣ್ಣೆ ಬಳಸಿದ್ರೆ ಹೆಚ್ಚು ಟೇಸ್ಟಿ. ಸ್ವಲ್ಪ ವಿನೆಗರ್ ಕೂಡ ಸೇರಿಸಿಕೊಳ್ಳಬಹುದು.
ಮುಕ್ಕಾಲು ಚಮಚ ಅರಿಶಿಣ ಪುಡಿ
ಕಾಲು ಚಮಚ ಮೆಂತ್ಯೆಕಾಳು
ಈರುಳ್ಳಿ ಉಪ್ಪಿನಕಾಯಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ.
• ಮೊದಲಿಗೆ ಈರುಳ್ಳಿಯನ್ನು ಹೆಚ್ಚಿಕೊಂಡು ಒಂದು ಬಾಣಲಿ ಇಟ್ಟು ಈರುಳ್ಳಿ ಹಾಕಿಕೊಳ್ಳಿ. ಇದಕ್ಕೆ ಹುಣಸೇ ಹಣ್ಣು ಸೇರಿಸಿಕೊಳ್ಳಿ, ಜೊತೆಗೆ ಕರಿಬೇವು ಆಡ್ ಮಾಡಿ. 2 ಸ್ಪೂನ್ಸ್ ಉಪ್ಪು ಸೇರಿಸಿ ಕಾಲು ಲೀಟರ್ ಸೇರಿಸಿ ಕುದಿಸಿಕೊಳ್ಳಿ.
• ಈಗ ಒಂದು ಬಾಣಲಿ ಇಟ್ಟು, ಕಾಲು ಚಮಚ ಮೆಂತ್ಯೆಯನ್ನು ಡ್ರೈ ರೋಸ್ಟ್ ಮಾಡಿಕೊಳ್ಲಿ.
ನಂತರ ಇದನ್ನು ಮಿಕ್ಸಿಯಲ್ಲಿ ಇಲ್ಲವೇ ಕುಟ್ಟಾಣೀಯಲ್ಲಿಟ್ಟು ಪುಡಿ ಮಾಡಿಕೊಳ್ಳಿ.
ಇನ್ನೊಂದು ಕಡೆ ಈರುಳ್ಳಿ ಕುದಿ ಹತ್ತಿದೆಯೇ ಗಮನಿಸಿಕೊಳ್ಲಿ.
• ಈರುಳ್ಳಿ ಸಾಫ್ಟ್ ಆಗುವವರೆಗೆ ಕುದಿಸಿಕೊಳ್ಳಿ. ಹೀಗೆ ಗೊಜ್ಜಿನ ಹದ ಬಂದಾಗ ಈರುಳ್ಲಿ ಮಿಶ್ರಣ ಮಿಕ್ಸಿಗೆ ಹಾಕಿ 20 ಬ್ಯಾಡಗಿ ಮೆಣಸಿನಕಾಯಿ, ಒಂದು ದೊಡ್ಡ ಶುಂಠೀಯನ್ನು ಹೋಳುಗಳನ್ನಾಗಿ ಮಾಡಿಕೊಂಡು ರುಬ್ಬಿಕೊಳ್ಳಬೇಕು.ಮಿಕ್ಸಿ ಜಾರು ಚಿಕ್ಕದಿದ್ದರೇ ಎರಡು ಹಂತದಲ್ಲಿ ರುಬ್ಬಿಕೊಳ್ಳಬಹದು.
• ನಂತರ ಒಂದು ಪ್ಯಾನ್ ಇಟ್ಟು 150 ಗ್ರಾಂ ಎಳ್ಳೆಣ್ಣೆ ಹಾಕಿ ಬಿಸಿ ಮಾಡಿಕೊಳ್ಳಿ. ಇದಕ್ಕೆ ಮುಕ್ಕಾಲು ಟೇಬಲ್ ಸ್ಪೂನ್ ಸಾಸಿವೆ ಸೇರಿಸಿ. 2 ಕೆಂಪು ಮೆಣಸಿನಕಾಯಿ, ಕರಿಬೇವು ಸೇರಿಸಿ ಸಿಡಿಸಿಕೊಳ್ಳಿ. ಮಮುಕ್ಕಾಲು ಸ್ಪೂನ್ ಅರಿಶಿನ ಸೇರಿಸಿ ಮಿಕ್ಸ್ ಮಾಡಿಕೊಲ್ಳಿ. ಇದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ ನೀರಿನಾಂಶ ಇಂಗುವವರೆಗು ಕುದಿಸಿಕೊಳ್ಳಿ.
• ಮುಚ್ಚಳ ಮುಚ್ಚಿ 10 ನಿಮಿಷ ಬೇಯಿಸಿಕೊಳ್ಳಿ ನಂತರ ಕೈಯಾಡಿ, ಇದಕ್ಕೆ ಪುಡಿ ಮಾಡಿಕೊಂಡ ಮೆಂತ್ಯೆ ಪುಡಿ ಸೇರಿಸಿ, ತೆಂಗಿನ ಕಾಯಿ ಪುಡಿ ಒಂದು ಸ್ಪೂನ್ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.ಉಪ್ಪು ಕಡಿಮೆ ಬಿದ್ರೆ ಸ್ವಲ್ಪ ಉಪ್ಪು ಸೇರಿಸಿಕೊಳ್ಳಬಹುದು. ಇದಕ್ಕೆ 2 ಟೇಬಲ್ ಸ್ಪೂನ್ ನೀರೆ ಸೇರಿಸಿ ಮಿಕ್ಸ್ ಮಾಡಿ . ಮತ್ತೆ ಮಿಶ್ರಣ ಗಟ್ಟಿಯಾದಾ ನೀರು ಸೇರಿಸಿ ಮಿಕ್ಸ್ ಮಾಡಿ. ಕಡೆಯಲ್ಲಿ ಒಂದು ಸ್ಪೂನ್ ವಿನೇಗರ್ ಹಾಕಿ ಬೇಯಿಸಿಕೊಳ್ಲಿ. ಹೀಗೆ ಉಪ್ಪಿನಕಾಯಿ ಎಣ್ಣೆ ಬಿಡಲು ಆರಂಭಿಸಿದ್ರೆ ಉಪ್ಪಿನಕಾಯಿ ಸವಿಯೋದಕ್ಕೆ ಸಿದ್ಧ. ಈಗ ಸ್ಟೌವ್ ಆರಿಸಿ ಇದನ್ನು ಒಂದು ಉಪ್ಪಿನಕಾಯಿ ಜಾರ್ನಲ್ಲಿ ತುಂಬಿ ಉಪ್ಪಿನಕಾಯಿ ಮಿಶ್ರಣಕ್ಕಿಂತ ಒಂದು ಚೂರು ಮೇಲೆ ಬರುವಂತೆ ಎಣ್ಣೆ ಹಾಕಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401