ದಿನದ ಸುದ್ದಿ

ಹುಬ್ಬಳ್ಳಿಯ ವಿಜಯಚೇತನ, ವಿಶ್ವಚೇತನ ಹಾಗೂ ಧಾರವಾಡದ ವೈಷ್ಣವಿ ಚೇತನ ಪದವಿಪೂರ್ವ ಕಾಲೇಜುಗಳ ಮಾನ್ಯತೆ ರದ್ದು

Published

on

ಸುದ್ದಿದಿನ,ಧಾರವಾಡ : ವಿಜಯಚೇತನ ಪದವಿಪೂರ್ವ ಕಾಲೇಜು, ಹುಬ್ಬಳ್ಳಿ (ಜೆಜೆ-394), ವೈಷ್ಣವಿ ಚೇತನ ಪದವಿಪೂರ್ವ ಕಾಲೇಜು ಧಾರವಾಡ (ಜೆಜೆ-327) ಹಾಗೂ ವಿಶ್ವಚೇತನ ಪದವಿಪೂರ್ವ ಕಾಲೇಜು ಹುಬ್ಬಳ್ಳಿ (ಜೆಜೆ-328) ಈ ಕಾಲೇಜುಗಳ ಶೈಕ್ಷಣಿಕ ಮಾನ್ಯತೆಯನ್ನು 2020-21 ನೇ ಶೈಕ್ಷಣಿಕ ಸಾಲಿನಿಂದ ಬೆಂಗಳೂರು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರ ಕಚೇರಿಯಿಂದ ಹಿಂಪಡೆಯಲಾಗಿದೆ.

ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪಾಲಕರು, ಪೋಷಕರು ಈ ಮೂರು ಕಾಲೇಜುಗಳಿಗೆ ಪ್ರವೇಶ ಪಡೆಯಬಾರದು ಎಂದು ಧಾರವಾಡ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚಿದಂಬರ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version