ದಿನದ ಸುದ್ದಿ
ಹುಮನಾಬಾದ | ಎಸ್ ಎಸ್ ಎಲ್ ಸಿ ಯಲ್ಲಿ ಸುಪ್ರೀಯಾಗೆ ಶೇ 99.4 ಅಂಕ ; ಸನ್ಮಾನ
ಸುದ್ದಿದಿನ,ಹುಮನಾಬಾದ : ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 99.4 ರಷ್ಟು ಅಂಕ ಗಳಿಸಿ, ಬೀದರ ಜಿಲ್ಲೆ ಸೇರಿದಂತೆ ಹುಮನಾಬಾದ ತಾಲೂಕಿಗೆ ಕೀರ್ತಿ ತಂದಿರುವ ಹಳ್ಳಿಖೇಡ(ಬಿ) ಗ್ರಾಮದ ಕುಮಾರಿ ಸುಪ್ರೀಯಾ ತಂದೆ ನಾಗಪ್ಪ ನಾಯಕೋಡೆ ಯವರನ್ನು ಚಿಟಗುಪ್ಪಾ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.
ಪರಿಷತ್ತಿನ ಅಧ್ಯಕ್ಷ ಸಂಗಮೇಶ ಎನ್ ಜವಾದಿಯವರು ಮಾತನಾಡಿ ಕುಮಾರಿ ಸುಪ್ರೀಯಾ ರವರ ಸಾಧನೆ ಕೊಂಡಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ರಾಜಶೇಖರ ಉಪ್ಪಿನ
ಮಾತನಾಡಿ ವಿದ್ಯಾರ್ಥಿನಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದೆ ಸಹ ಇದೇ ರೀತಿ ಅಭ್ಯಾಸ ಮಾಡಬೇಕೆಂದರು.
ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ
ಚಂದ್ರಕಾಂತ್ ಮೊಳಕೇರಾ, ಮುಖ್ಯೋಪಾಧ್ಯಾಯರಾದ ಚಂದ್ರಕಾಂತ್ ಚಡಚಣ,ಶಿಕ್ಷಕರಾದ ಲೋಕೇಶ್ ರೆಡ್ಡಿ, ಶ್ರೀಮತಿ ಚಂದ್ರಕಲಾ ನಾಗಪ್ಪ ನಾಯಕೋಡೆ ,ಕುಮಾರಿ ಸ್ಪೂರ್ತಿ ನಾಗಪ್ಪ ನಾಯಕೋಡೆ ಸೇರಿದಂತೆ ಪರಿಷತ್ತಿನ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243