ಕ್ರೀಡೆ
ಅನಿಲ್ಕುಂಬ್ಳೆ ಆಯ್ಕೆಯ ‘ವಿಶ್ವಕಪ್ ಟೀಂ ಇಂಡಿಯಾ ಆಟಗಾರರು’ ಯಾರ್ಯಾರು ಗೊತ್ತಾ..!
ಸುದ್ದಿದಿನ ಡೆಸ್ಕ್ : ಇಂಗ್ಲೆಂಡ್ನಲ್ಲಿ ಮೇ 30 ರಿಂದ ಆರಂಭವಾಗಲಿರುವ ಪ್ರತಿಷ್ಠಿತ ವಿಶ್ವಕಪ್ ಟೂರ್ನಿಗಾಗಿ ಟೀಮ್ ಇಂಡಿಯಾ ಈಗಾಗಲೇ ಹಲವು ಸಿದ್ಧತೆಗಳನ್ನ ಮಾಡಿಕೊಂಡಿದೆ. ಈ ಮಹಾಸಂಗ್ರಾಮದಲ್ಲಿ ಆಡುವ ಆಟಗಾರರ ತಂಡದ ಆಯ್ಕೆ ಮಾತ್ರ ಆಗಿಲ್ಲ.
ಹೀಗಿದ್ದರೂ ಟೀಮ್ ಇಂಡಿಯಾದ ಹಲವು ಮಾಜಿ ಆಟಗಾರರು ವಿಶ್ವಕಪ್ ತಂಡದಲ್ಲಿ ಆಡಬೇಕಾದ ಆಟಗಾರರನ್ನ ಆಯ್ಕೆ ಮಾಡುತ್ತಿದ್ದಾರೆ. ಈಗ ಟೀಮ್ ಇಂಡಿಯಾ ಮಾಜಿ ಕೋಚ್, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಕೂಡ ತಮ್ಮ ಇಷ್ಟದ ವಿಶ್ವಕಪ್ ತಂಡವನ್ನ ಪ್ರಕಟಿಸಿದ್ದಾರೆ.
ಅನಿಲ್ ಕುಂಬ್ಳೆಯ ವಿಶ್ವಕಪ್ ತಂಡ ಹೀಗಿದೆ
ವಿರಾಟ್ ಕೊಹ್ಲಿ ( ನಾಯಕ), ಎಂ.ಎಸ್ ಧೋನಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯಜುವೇಂದರ್ ಚಹಾಲ್, ಮಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಖಲೀಲ್ ಅಹ್ಮದ್, ಅಂಬಟಿ ರಾಯುಡು, ರಿಷಬ್ ಪಂತ್, ವಿಜಯ್ ಶಂಕರ್
ಸುದ್ದಿದಿನ.ಕಾಂ|ವಾಟ್ಸಾಪ್|9986715401