ದಿನದ ಸುದ್ದಿ

ಚಂದಾ ಕೊಚ್ಚರ್ ವಿರುದ್ಧ ಸ್ವತಂತ್ರ ತನಿಖೆ: ಐಸಿಐಸಿಐ

Published

on

ಸುದ್ದಿದಿನ ಡೆಸ್ಕ್: ಐಸಿಐಸಿಐ ಬ್ಯಾಂಕ್‌ನ ಕಾರ‌್ಯ ನಿರ್ವಾಹಕ ಅಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕಿ ಚಂದ ಕೊಚ್ಚರ್ ಅವರ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸುವುದಾಗಿ ಸಂಸ್ಥೆಯು ತಿಳಿಸಿದೆ.

ಹಣಕಾಸು ವ್ಯವಹಾರಗಳ ಕುರಿತು ಆಳವಾದ ಜ್ಞಾನ ಹಾಗೂ ಅನುಭವವುಳ್ಳ ವ್ಯಕ್ತಿಯೊಬ್ಬರು ತನಿಖೆಯ ನೇತೃತ್ವ ವಹಿಸಲಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯು ಸ್ವತಂತ್ರ ತನಿಖೆಯ ನೇತೃತ್ವ ವಹಿಸಲಿರುವ ವ್ಯಕ್ತಿಯನ್ನು ಆಯ್ಕೆ ಮಾಡಲಿದ್ದು, ಆದಷ್ಟು ಬೇಗನೆ ಆರೋಪಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಕಂಪನಿಯು ತಿಳಿಸಿದೆ.
ವಿಡಿಯೋಕಾನ್ ಕಂಪನಿ ಹಾಗೂ ನುಪವರ್‌ಗೆ ಬ್ಯಾಂಕಿನಿಂದ ಸಾಲ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಸಿಐಸಿಐ ಬ್ಯಾಂಕ್ ಹಾಗೂ ಸಿಇಒ ಚಂದಾ ಕೊಚ್ಚರ್ ಅವರಿಗೆ ಮಾರುಕಟ್ಟೆ ನಿಯಂತ್ರಣ ಸಂಸ್ಥೆ – ಸೆಬಿ ಇತ್ತೀಚೆಗಷ್ಟೆ ನೋಟಿಸ್ ಜಾರಿ ಮಾಡಿತ್ತು.
ಚಂದಾ ಕೊಚ್ಚರ್  ಪತಿ ದೀಪಕ್ ಕೊಚ್ಚರ್ ಆರ್ಥಿಕ ಹಿತಾಸಕ್ತಿಯ ಖಾಸಗಿ ವಲಯದ ಸಾಲದಾತ ಎಂಬ ಆರೋಪಗಳೂ ಕೇಳಿಬಂದಿದ್ದವು.
2012ರಲ್ಲಿ ವಿಡಿಯೋಕಾನ್ ಕಂಪನಿಗೆ  ಐಸಿಐಸಿಐ ಬ್ಯಾಂಕ್  3. 250 ಕೋಟಿ ರೂಪಾಯಿ ಸಾಲ ನೀಡಿರುವ ಪ್ರಕರಣ ಕುರಿತು ಸಿಬಿಐ ಪ್ರಾಥಮಿಕ ತನಿಖೆ ನಡೆಸಿದ್ದು, ಇದರಲ್ಲಿ ಕೊಚ್ಚರ್ ಪತ್ನಿ ದೀಪಕ್ ಕೊಚ್ಚರ್ ಪಾತ್ರ  ವಹಿಸಿರುವ ಸಾಧ್ಯತೆ ಇದೆ.
ವಿಡಿಯೋಕಾನ್  ಮುಖ್ಯಸ್ಥ ವೇಣುಗೋಪಾಲ್ ದೊತ್ ನುಪವರ್ ನವೀಕರಿಸಬಹುದಾದ ವಿದ್ಯುತ್ ಕಂಪನಿಯಲ್ಲಿ 64 ಕೋಟಿ ಹೂಡಿಕೆ ಮಾಡಿದ್ದು,  ವಿಡಿಯೋ ಕಾನ್ ಕಂಪನಿಗೆ ಐಸಿಐಸಿಐ ಬ್ಯಾಂಕ್ ನಿಂದ ಸಾಲ ದೊರೆತ ನಂತರ  ಆ ಸಂಸ್ಥೆಗೆ ದೀಪಕ್ ಕೊಚ್ಚರ್ ಮಾಲೀಕರಾಗುತ್ತಾರೆ ಎಂಬ ಮಾಹಿತಿಗಳು ಕೇಳಿಬಂದಿದ್ದವು.

Leave a Reply

Your email address will not be published. Required fields are marked *

Trending

Exit mobile version