ಸಿನಿ ಸುದ್ದಿ

ಧಾರವಾಡದ ಯುವ ಪ್ರತಿಭೆಗಳ ‘ಇದು ನನ್ನ ಸ್ಟೋರಿ’ ಶಾರ್ಟ್ ಮೂವಿ | ಟೀಸರ್ ನೋಡಿ..!

Published

on

ಸುದ್ದಿದಿನ ಡೆಸ್ಕ್ | ಧಾರವಾಡಕ್ಕೂ ಕಲೆಗೂ ಅದೇನೋ ಬಿಡದ ನಂಟು. ಇದು ವಿದ್ಯಾಕಾಶಿಯೂ ಹೌದು. ಕಲೆಯ ಬೀಡೂ ಹೌದು. ಅದಕ್ಕೆ ಸಾಕ್ಷಿ ಎಂಬತೆ ಯುವ ಪ್ರತಿಭೆಗಳು ಸೇರಿ ‘ಇದು ನನ್ನ ಸ್ಟೋರಿ’ ಎನ್ನುವ ಶಾರ್ಟ್ ಸಿನೆಮಾವೊಂದನ್ನು ಮಾಡಿದ್ದಾರೆ. ಪ್ರೇಮಕತೆಯ ಹಂದರವುಳ್ಳ ಈ ಸಿನೆಮಾದ ಟೀಸರ್ ಲಾಂಚ್ ಮಾಡಿದೆ ಸಿನೆಮಾ ತಂಡ. ಅಪ್ಪಟ ಪ್ರೇಮಕಾವ್ಯದಂತೆ ಟೀಸರ್ ಮೂಡಿಬಂದಿದೆ.

ಅಂದಹಾಗೆ ಈ ಸಿನೆಮಾಗೆ ಯುವ ಕತೆಗಾರ ಸರ್ವೇಶ್ ಕುಮಾರ್ ಅವರು ಕತೆ ಬರೆಯುವುದರ ಜೊತೆ ನಾಯಕನಾಗಿ ಅಭಿನಯಿಸಿದ್ದಾರೆ. ನಾಯಕಿಯಾಗಿ ಪ್ರಿಯಾಂಕ ಕಾಣಿಸಿಕೊಂಡಿದ್ದಾರೆ, ವಿನಯ್ ವರ್ಮ ಎಂಬ ಹೊಸ‌ ಪ್ರತಿಭೆ ಈ ಶಾರ್ಟ್ ಮೂವಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಸಿನೆಮಾದ ಎಡಿಟಿಂಗ್ ಜವಾಬ್ದಾರಿಯನ್ನ ಪ್ರವೀಣ್, ಅಂಕಿತ್ ನಿರ್ವಹಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version