ದಿನದ ಸುದ್ದಿ
ಗುತ್ತಿಗೆದಾರರಿಗೆ ಕಮಿಷನ್ ಕೇಳಿದ್ದರೆ ಲೋಕಾಯುಕ್ತರಿಗೆ ದೂರು ನೀಡಿ : ಡಿಸಿಎಂ ಡಿ.ಕೆ. ಶಿವಕುಮಾರ್
ಸುದ್ದಿದಿನಡೆಸ್ಕ್:ರಾಜ್ಯದಲ್ಲಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಲು ಕಮಿಷನ್ ಕೇಳಿದರೆ ಲೋಕಾಯುಕ್ತಕ್ಕೆ ದೂರು ನೀಡಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸೌಧದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಲ್ ಪಾವತಿ ವಿಚಾರವಾಗಿ ಗುತ್ತಿಗೆದಾರರು ಸಚಿವರನ್ನು ಕೇಳಬೇಕಾಗಿಲ್ಲ. ಅವರಿಗೆ ಇಲಾಖೆಯ ಅನುದಾನದ ಬಗ್ಗೆ ತಿಳಿದಿರುತ್ತದೆ. ಅನುದಾನವೇ ಇಲ್ಲದಿರುವಾಗ ಗುತ್ತಿಗೆ ಹೇಗೆ ತೆಗೆದುಕೊಂಡರು ಎಂದು ಗುತ್ತಿಗೆದಾರರನ್ನೇ ಕೇಳಬೇಕಾಗುತ್ತದೆ ಎಂದರು.
ಅನುದಾನ ಇಲ್ಲದ ಕಾಮಗಾರಿಯನ್ನು ತೆಗೆದುಕೊಂಡು ಈಗ ಬಿಲ್ ಪಾವತಿಗೆ ಮನವಿ ಮಾಡುತ್ತಿರುವುದು ಸರಿಯಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243