ದಿನದ ಸುದ್ದಿ

ಕಾರು ಕಳುವಾದರೆ ಇನ್ಸುರೆನ್ಸ್ ಕ್ಲೇಮ್‍ಗೆ ಬೇಕು ಎರಡು ಕೀಗಳು

ಒಂದು ವೇಳೆ ನಿಮ್ಮ ಕಾರು ಕಳುವಾಗಿ ಪೊಲೀಸರಿಗೆ ದೂರು ನೀಡಿ ಇನ್ಸೂರೆನ್ಸ್ ಕ್ಲೇಮ್ ಮಾಡಲು ಹೋದರೆ ಅಲ್ಲಿ ಕಾರಿನ ಎರಡೂ ಒರಿಜಿನಲ್ ಕೀಗಳನ್ನು ಕೇಳುತ್ತಾರೆ. ಏಕೆಂದರೆ ಇಂಥ ಪ್ರಕರಣಗಳಲ್ಲಿ ಒರಿಜಿನಲ್ ಕೀಗಳನ್ನು ಇನ್ಸೂರೆನ್ಸ್ ಕಂಪನಿಗಳಿಗೆ ಸಲ್ಲಿಸುವುದು ಕಡ್ಡಾಯ.

Published

on

ಸುದ್ದಿದಿನ ಡೆಸ್ಕ್: ಒಂದು ವೇಳೆ ನಿಮ್ಮ ಕಾರು ಕಳುವಾಗಿ ಪೊಲೀಸರಿಗೆ ದೂರು ನೀಡಿ ಇನ್ಸೂರೆನ್ಸ್ ಕ್ಲೇಮ್ ಮಾಡಲು ಹೋದರೆ ಅಲ್ಲಿ ಕಾರಿನ ಎರಡೂ ಒರಿಜಿನಲ್ ಕೀಗಳನ್ನು ಕೇಳುತ್ತಾರೆ. ಏಕೆಂದರೆ ಇಂಥ ಪ್ರಕರಣಗಳಲ್ಲಿ ಒರಿಜಿನಲ್ ಕೀಗಳನ್ನು ಇನ್ಸೂರೆನ್ಸ್ ಕಂಪನಿಗಳಿಗೆ ಸಲ್ಲಿಸುವುದು ಕಡ್ಡಾಯ.
ದಿಲ್ಲಿ ಮೂಲದ ವ್ಯಕ್ತಿ ಸುರೇಶ್ ಎಂಬುವರು ತಮ್ಮ ಹೋಂಡಾ ಸಿಟಿ ಕಾರನ್ನು ಮನೆ ಮುಂದೆ ಪಾರ್ಕ್ ಮಾಡಿದ್ದಾಗ ಕಾರು ಕಳುವಾಗಿದೆ. ಪೊಲೀಸರಿಗೆ ದೂರು ನೀಡಿ ಅದನ್ನು ಇನ್ಸುರೆನ್ಸ್ ಕಂಪನಿಗೆ ಸಲ್ಲಿಸಿದಾಗ ಕಾರಿನ ಎರಡು ಒರಿಜಿನಲ್ ಕೀಗಳನ್ನು ಸಲ್ಲಿಸುವಂತೆ ಕೇಳಿದ್ದಾರೆ. ಸುರೇಶ್ ಅವರ ಬಳಿ ಇದ್ದ ಒಂದು ಕೀ ಕಳೆದುಹೋಗಿದ್ದ ಕಾರಣ ಅವರು ಸಲ್ಲಿಸಲು ಸಾಧ್ಯವಾಗಿಲ್ಲ.
ತಮ್ಮ ಸಬೂಬು ಬರೆದು ಅರ್ಜಿ ಜತೆ ಸೇರಿಸಿ ಕೊಟ್ಟಾಗ ಇನ್ಸುರೆನ್ಸ್ ಕಂಪನಿಯು ಅರ್ಜಿಯನ್ನು ವಜಾ ಮಾಡಿ ವಿಮೆ ಹಣ ನೀಡುವುದು ಅಸಾಧ್ಯ ಎಂದಿದೆ.
ಕೇಂದ್ರ ರಸ್ತೆ ಸಂಚಾರ ಇಲಾಖೆಯ ಪ್ರಕಾರ ವ್ಯಕ್ತಿಯು ಕಾರು ಕೊಂಡಾಗ ನೀಡುವ ಎರಡು ಕೀಗಳು ಕಳೆದುಹೋಗಿದ್ದರೆ ಡ್ಯೂಪ್ಲಿಕೆಟ್ ಕೀಗಳನ್ನು ಬಳಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಒರಿಜಿನಲ್ ಕೀಗಳನ್ನು ಸಲ್ಲಿಸಬೇಕೆಂಬ ನಿಯಮ ಸರಿಯಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್, ಇನ್ಸುರೆನ್ಸ್, ಆರ್‍ಟಿಒ ಕಚೇರಿಗಳಿಗೆ ಅಲೆಯುತ್ತಿರುವ ಸುರೇಶ್ ಹೈರಾಣಾಗಿರುವುದಂತೂ ನಿಜ.

Leave a Reply

Your email address will not be published. Required fields are marked *

Trending

Exit mobile version