ದಿನದ ಸುದ್ದಿ
‘ಅಕ್ರಮ ಮದ್ಯ ಮಾರಾಟ-ಸಂಗ್ರಹಣೆ’, ಮಾಹಿತಿ ನೀಡಿದವರಿಗೆ ಬಹುಮಾನ
ಸುದ್ದಿದಿನ,ಧಾರವಾಡ : ಮುಂಬರುವ ಲೋಕಸಭಾ ಚುನಾವಣೆ-2019 ರ ಹಿನ್ನೆಲೆಯಲ್ಲಿ ಚುನಾವಣೆಯ ಸಮಯದಲ್ಲಿ ಸಮಾಜಘಾತಕ ಶಕ್ತಿಗಳು ಅಕ್ರಮವಾಗಿ ಮದ್ಯ ಹಾಗೂ ಕಳ್ಳಭಟ್ಟಿ ಸಾರಾಯಿಯನ್ನು ತಯಾರಿಸುವ, ಸಾಗಾಟ ಮಾಡುವ, ಸಂಗ್ರಹಿಸುವ, ಮಾರಾಟ ಮಾಡುವ ಸಾಧ್ಯತೆಗಳು ಇರುತ್ತವೆ.
ಇಂತಹ ಅಕ್ರಮ ಮದ್ಯ ಹಾಗೂ ಕಳ್ಳಭಟ್ಟಿಯನ್ನು ಮತದಾರರಿಗೆ ಸರಬರಾಜು ಮಾಡುವ ಸಾಧ್ಯತೆಗಳು ಇರುತ್ತವೆ. ಚುನಾವಣೆ ಸಂದರ್ಭದಲ್ಲಿ ಪ್ರತಿಷ್ಟಿತ ಕಂಪನಿಗಳ ಹೆಸರಿನಲ್ಲಿ ನಕಲಿ ಮದ್ಯ ತಯಾರಿಕೆ, ಸಂಗ್ರಹಣೆ, ಸಾಗಾಟ, ಮಾರಾಟ ಮಾಡುವ ಕೃತ್ಯಗಳಲ್ಲಿ ಕೆಲವು ಸಮಾಜಘಾತಕ ಶಕ್ತಿಗಳು ತೊಡಗುವ ಸಾಧ್ಯತೆ ಇರುತ್ತವೆ. ಈ ಕುರಿತು ಅಬಕಾರಿ ಇಲಾಖೆಗೆ ಮಾಹಿತಿ ನೀಡುವ ಸಾರ್ವಜನಿಕರಿಗೆ ಬಹುಮಾನ ನೀಡಲಾಗುವುದು ಎಂದು ಘೋಷಿಸಲಾಗಿದೆ.
ಅಬಕಾರ ಸಂಬಂಧಿತ ಕೃತ್ಯಗಳು ಕಂಡುಬಂದಲ್ಲಿ ಅಬಕಾರಿ ಉಪಆಯುಕ್ತರ ಕಚೇರಿಯಲ್ಲಿ ಈಗಾಗಲೇ ರಚಿಸಿರುವ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ : 0836-2322066ಹಾಗೂ ಟೋಲ್ ಫ್ರೀಸಂಖ್ಯೆ 18004250742ಕ್ಕೆ ಸಂಪರ್ಕಿಸಿ ಮಾಹಿತಿ ನೀಡಬಹುದು. ತಾಲೂಕ ಮಟ್ಟದಲ್ಲಿ ರಚಿಸಿರುವ ಕಂಟ್ರೋಲ್ ರೂಂಸಂಖ್ಯೆಗಳ ಕೂಡ ಮಾಹಿತಿ ಹೀಗಿದೆ.
ಧಾರವಾಡ ವಲಯ 9448233066,948090466, ಹುಬ್ಬಳ್ಳಿ ವಲಯ9700111777, ಕಲಘಟಗಿ ವಲಯ 9449597087, ಕುಂದಗೋಳ ವಲಯ9742209224, ನವಲಗುಂದ ವಲಯ 9980765667, ಧಾರವಾಡ ಉಪವಿಭಾಗ 0836-2436816 ಹುಬ್ಬಳ್ಳಿ ಉಪ ವಿಭಾಗ 9449597090. ಮಾಹಿತಿ ನೀಡುವ ವ್ಯಕ್ತಿಗಳ ಹೆಸರನ್ನು ಗೌಪ್ಯವಾಗಿಡುವುದಲ್ಲದೇ ಯೋಗ್ಯ ಪ್ರೋತ್ಸಾಹ ಧನವನ್ನು ಸಹ ನೀಡಲಾಗುವುದು ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243