ದಿನದ ಸುದ್ದಿ
ಅಕ್ರಮ ಗಾಂಜಾ ಜಾಲ ಪತ್ತೆ..!
ಸುದ್ದಿದಿನ, ದಾವಣಗೆರೆ: ಡಿಸಿಬಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಗಾಂಜಾ ಜಾಲ ಪತ್ತೆಯಾಗಿದೆ. ಕಳೆದೆರಡು ತಿಂಗಳಿನಿಂದಲು ಕೂಡ ಗಾಂಜ ಮಾರಟದ ಸದ್ದು ಕೇಳಿ ಬರುತ್ತಿತ್ತು .ಇದರ ಬೆನ್ನಲ್ಲೆ ಕಳೆದ ತಿಂಗಳು ಕೂಡ ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..
ಇಂದು ಕೂಡ ಇಂತದೆ ಪ್ರಕರಣವನ್ನು ಬೇದಿಸಲು ಡಿಸಿಬಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಡಿಸಿಬಿ ಇಸ್ಸ್ ಪೆಕ್ಟರ್ ದೇವರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಯನ್ನು ಬಂದಿಸಿದ್ದಾರೆ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ದಾದಾಪೀರ್ (45) ಎಂಬ ಪ್ರಮುಖ ಆರೋಪಿ. ಹಾಗೂ ಇವನ ಬಳಿ ಇದ್ದ 400 ಗ್ರಾಂ ಗಾಂಜಾವನ್ನು ವಶಪಡಿಸಿಕೊಡಿದ್ದಾರೆ.
ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಮಾಡಲಾಗಿದೆ ಹಾಗೂ ಇನ್ನುಳಿದ ಆರೋಪಿಗಳ ಬಂಧನಕ್ಕಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ.