ದಿನದ ಸುದ್ದಿ
ದಾವಣಗೆರೆ | ಐಎಂಎ ಮಾಲೀಕನ ಸ್ಥಿರಾಸ್ತಿ ಜಪ್ತಿ
ಸುದ್ದಿದಿನ,ದಾವಣಗೆರೆ : ಸರ್ಕಾರದ ಅಧಿಸೂಚನೆಯಂತೆ ಐ ಮಾನಿಟರಿ ಅಡ್ವೈಸರಿ (ಐ.ಎಮ್.ಎ) ಮಾಲೀಕರಾದ ಮೊಹಮ್ಮದ್ ಮನ್ಸೂರ್ ಖಾನ್ ಇವರು ದಾವಣಗೆರೆಯಲ್ಲಿ ಹೊಂದಿರುವ ಸ್ಥಿರಾಸ್ಥಿಗಳನ್ನು ಜಪ್ತಿ ಮಾಡಲಾಗಿದೆ.
ಕರ್ನಾಟಕ ಹಣಕಾಸು ಸಂಸ್ಥೆಗಳ ಠೇವಣಿದಾರರ ಹಿತಾಸಕ್ತಿ ಸಂರಕ್ಷಣೆ ಅಧಿನಿಯಮ 2004ರ ಅಡಿಯಲ್ಲಿ ಈ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.
ಜಪ್ತಿ ಮಾಡಲಾಗಿರುವ ಸ್ವತ್ತಿನ ವಿವರ
ದಾವಣಗೆರೆ ತಾಲ್ಲೂಕು ದೊಡ್ಡಬಾತಿ ಗ್ರಾಮದ ಸ.ನಂ.98/2ರ 5.20 ಎಕರೆ ಖುಷ್ಕಿ ಜಮೀನು ಹಾಗೂ ನಂ1531/ಎ, ದೊಡ್ಡ ಬೂದಿಹಾಳ್ ಡಿವಿಜನ್, ದಾವಣಗೆರೆ ಮಹಾನಗರಪಾಲಿಕೆ, ದಾವಣಗೆರೆ ಈ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243