ರಾಜಕೀಯ

ಐಎಂಎಫ್ ಮತ್ತು ವಿಶ್ವ ಬ್ಯಾಂಕ್ ಸಭೆ ; ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕಾ ಪ್ರವಾಸ

Published

on

ಸುದ್ದಿದಿನ ಡೆಸ್ಕ್ : ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ನ ಸಭೆಗಳಲ್ಲಿ ಭಾಗವಹಿಸುವ ಸಲುವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ರಾತ್ರಿ ಅಮೆರಿಕಾ ಪ್ರವಾಸ ಕೈಗೊಂಡಿದ್ದಾರೆ. ಅಲ್ಲದೆ ಅವರು ಜಿ-20 ಹಣಕಾಸು ಸಚಿವರುಗಳು ಹಾಗೂ ಕೇಂದ್ರೀಯ ಬ್ಯಾಂಕ್ ಗೌರ್ನರ್ಗಳ ಸಭೆಗಳಲ್ಲಿ ಭಾಗವಹಿಸುವರು.

ಇದಲ್ಲದೇ ನಿರ್ಮಲಾ ಸೀತಾರಾಮನ್ ಅವರು, ಇಂಡೋನೇಷಿಯಾ, ದಕ್ಷಿಣ ಕೊರಿಯಾ, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ರಾಷ್ಟ್ರಗಳ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.
ಜೊತೆಗೆ ಭಾರತ ಸರ್ಕಾರದ ಆದ್ಯತಾ ವಲಯಗಳಾದ ಸೆಮಿಕಂಡಕ್ಟರ್ ಮತ್ತು ಇಂಧನ ವಲಯ ಕುರಿತು ಸಿಇಒಗಳೊಂದಿಗೆ ಮುಖಾಮುಖಿ ಸಭೆಗಳನ್ನು ನಡೆಸುವರು.

ಅಧಿಕೃತವಾಗಿ ವಿಶ್ವ ಬ್ಯಾಂಕ್, ಐಎಂಎಫ್, ಜಿ-20 ಮತ್ತು ಹಣಕಾಸು ಕಾರ್ಯಪಡೆ ಸಭೆಗಳಲ್ಲದೇ ಅಟ್ಲಾಂಟಿಕ್ ಕೌನ್ಸಿಲ್ ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾಗವಹಿಸಲಿದ್ದಾರೆ. ಮತ್ತು ಸ್ಟ್ಯಾನ್ಪೋರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮತ್ತು ಬೋಧಕರೊಂದಿಗೆ ಸಂವಾದ ನಡೆಸುವರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version