ದಿನದ ಸುದ್ದಿ
ಪ್ರಮುಖ ಸಂಕ್ಷಿಪ್ತ ಸುದ್ದಿಗಳು
ಪ್ರಮುಖ ಸಂಕ್ಷಿಪ್ತ ಸುದ್ದಿಗಳು
- ಹುಬ್ಳಳ್ಳಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ತನಿಖೆ ನಂತರ ಘಟನೆಗೆ ಸಂಚು ರೂಪಿಸಿದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
- ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿನ ಮೀನು ತ್ಯಾಜ್ಯ ಸಂಸ್ಕರಣಾ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆಯಿಂದ ಮೃತಪಟ್ಟ ಕಾರ್ಮಿಕರ ಸಂಖ್ಯೆ ಐದಕ್ಕೆ ಏರಿದೆ. ನತದೃಷ್ಟ ಕಾರ್ಮಿಕರು ಪಶ್ಚಿಮ ಬಂಗಾಳ ಮೂಲದವರಾಗಿದ್ದಾರೆ. ನಿನ್ನೆ ರಾತ್ರಿ ಮೂವರು ಮೃತಪಟ್ಟಿದ್ದು, ಅಸ್ವಸ್ಥರಾಗಿದ್ದ ಇತರ ಐದು ಮಂದಿಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಇಂದು ಮೃತರಾಗಿದ್ದಾರೆ. ಇತರ ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್ ತಿಳಿಸಿದ್ದಾರೆ.
- ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನಯೋಜನೆಯಡಿ ಈಗಾಗಲೇ 5ಹಂತಗಳಲ್ಲಿ ಉಚಿತವಾಗಿ ಪಡಿತರ ವಿತರಿಸಿದ್ದು, 6ನೇ ಹಂತದಲ್ಲಿ ಸೆಪ್ಟೆಂಬರ ಮಾಹೆಯವರೆಗೆ ವಿತರಿಸಲಾಗುತ್ತಿದೆ. ಇದರ ಸದುಪಯೋಗವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್ ಕರೆ ನೀಡಿದ್ದಾರೆ.
- ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆಯಲ್ಲಿ 9ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ರಾಜ್ಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣವನ್ನು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ. ಸಿ. ಪಾಟೀಲ ಇಂದು ಲೋಕಾರ್ಪಣೆಗೊಳಿಸಿದರು.
- ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ಥೋಮರ್ ಅವರು ಇಂದು ಎರಡು ಹೊಸ ಆನ್‌ಲೈನ್ ಪೋರ್ಟಲ್ ಗಳಾದ ಸಮಗ್ರ ಕೀಟನಾಶಕ ನೋಂದಣಿ-ಕ್ರಾಪ್ ಮತ್ತು ಸಸಿಗಳಿಗೆ ಕೀಟಬಾಧೆ ನಿರ್ವಹಣಾ ವ್ಯವಸ್ಥೆ-ಪಿಕ್ಯುಎಂಎಸ್ ಅನ್ನು ದೆಹಲಿಯಲ್ಲಿಂದು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಪೋರ್ಟಲ್‌ಗಳು ವ್ಯಾಪಾರಿಗಳಿಗೆ ತೊಂದರೆಯಿಲ್ಲದ ಸೇವೆಯನ್ನು ಒದಗಿಸುವುದಲ್ಲದೆ, ರಫ್ತು ಮತ್ತು ಆಮದಿಗೂ ಅವರಿಗೆ ನೆರವಾಗುತ್ತವೆ ಎಂದು ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243