ದಿನದ ಸುದ್ದಿ
ಗಂಡ- ಹೆಂಡಿರ ಜಗಳ; ಮಗುವನ್ನು ನೆಲಕ್ಕೆ ಎಸೆದ ಮಹಾತಾಯಿ
ಸುದ್ದಿದಿನ ಹೈದರಾಬಾದ್: ಗಂಡ- ಹೆಂಡಿರ ನಡುವೆ ನಡೆದ ಜಗಳದಲ್ಲಿ ತಾಯಿಯೇ ಮಗುವನ್ನು ನೆಲಕ್ಕೆ ಎಸೆದಿದ್ದಾಳೆ. ಹೈದರಾಬಾದಿನ ಮೆಹದಿಪಟ್ಟಣಂ ಜಂಕ್ಷನ್ ನಲ್ಲಿ ಕುಡಿದ ಪತಿಯೊಬ್ಬ ಪತ್ನಿಯೊಂದಿಗೆ ಜಗಳ ತೆಗೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಪತ್ನಿ ತನ್ನ ಕಂಕುಳಲ್ಲಿದ್ದ ಇಂದು ತಿಂಗಳ ಮಗುವನ್ನು ತೆಗೆದು ನೆಲಕ್ಕೆ ಎಸೆದಿದ್ದಾಳೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಹಾನಿಯಾಗಿಲ್ಲ.
ಹೈದರಾಬಾದಿನ ಮೆಹದಿಪಟ್ಟಣ ಅತ್ಯಂತ ಬ್ಯುಸಿ ಇರುವ ಸ್ಥಳದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುತ್ತದೆ. ಇಲ್ಲಿ ಮಹಿಳೆ ತನ್ನ ಕಂಕುಳದಲ್ಲಿದ್ದ ಮಗುವನ್ನು ಸ್ವಲ್ಪ ಹೊತ್ತು ಹಿಡಿದುಕೊಳ್ಳುವಂತೆ ಹೇಳಿದ್ದಾಳೆ. ಆದರೆ, ಪತಿ ಮಗುವನ್ನು ಹಿಡಿದುಕೊಳ್ಳಲು ನಿರಾಕರಿಸಿದ್ದಾನೆ. ಇದರಿಂದ ಸಿಟ್ಟಿಗೆದ್ದ ಮಹಿಳೆ ಕಂಕುಳದಿಂದ ತೆಗೆದು ನೆಲಕ್ಕೆ ಬೀಸಿ ಎಸೆದಿದ್ದಾಳೆ. ಜತೆಗೆ ಆಕೆಯ ತಾಯಿ ಕಪಾಳ ಮೋಕ್ಷ ಮಾಡಿದ್ದಾಳೆ. ಆಸೀಫ್ ನಗರ ಪೊಲೀಸರು ವಿಚಾರಣೆ ನಡೆಸಿದಾಗ ಪತಿ ಮಗು ತನ್ನದಲ್ಲ. ಮತ್ತೊಂದು ಮದುವೆ ಆಗಿದ್ದಾಳೆ ಎಂದು ತಿಳಿಸಿದ್ದಾರೆ. ಇಷ್ಟೆಲ್ಲಾ ಆದ ನಂತರ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದಾರೆ.