ದಿನದ ಸುದ್ದಿ
ಬೆಂಗಳೂರಿನಲ್ಲಿ ಮಳೆ ಅನಾಹುತ ತಡೆಗೆ 8 ವಲಯಗಳಿಗೆ ಸಚಿವರ ನೇತೃತ್ವದ ಕಾರ್ಯಪಡೆ ರಚನೆ
ಸುದ್ದಿದಿನ ಡೆಸ್ಕ್ : ಮಳೆ ಅನಾಹುತ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ 8 ವಲಯಗಳಿಗೆ ಬೆಂಗಳೂರಿನ ಸಚಿವರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ.
ಈ ಕಾರ್ಯಪಡೆಯಲ್ಲಿ ಸಂಬಂಧಪಟ್ಟ ವಲಯಗಳ ಶಾಸಕರು, ಸಂಸದರು ಮತ್ತು ಬಿಬಿಎಂಪಿ ಅಧಿಕಾರಿಗಳು ಸದಸ್ಯರಾಗಿರುತ್ತಾರೆ. ವಲಯಗಳ ಜಂಟಿ ಆಯುಕ್ತರು ಕಾರ್ಯಪಡೆಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಾರೆ.
ಸಚಿವರಾದ ಆರ್. ಅಶೋಕ್- ದಕ್ಷಿಣ ವಲಯ, ಡಾ.ಅಶ್ವತ್ಥ್ ನಾರಾಯಣ್- ಪೂರ್ವ ವಲಯ, ವಿ. ಸೋಮಣ್ಣ- ಪಶ್ಚಿಮ ವಲಯ, ಎಸ್.ಟಿ. ಸೋಮಶೇಖರ್-ಆರ್ ಆರ್ ನಗರ ವಲಯ, ಬೈರತಿ ಬಸವರಾಜ್- ಮಹದೇವಪುರ ವಲಯ, ಗೋಪಾಲಯ್ಯ -ಬೊಮ್ಮನಹಳ್ಳಿ ವಲಯ ಹಾಗೂ ಮುನಿರತ್ನ- ಯಲಹಂಕ ಮತ್ತು ದಾಸರಹಳ್ಳಿ ವಲಯಗಳ ಕಾರ್ಯಪಡೆ ನೇತೃತ್ವ ವಹಿಸಲು ನಿಯೋಜಿಸಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243