ದಿನದ ಸುದ್ದಿ
ಚನ್ನಗಿರಿಯಲ್ಲಿ ಕಾಡಾನೆಗಳ ದಾಂಧಲೆ | ಭಯದಲ್ಲಿ ಗ್ರಾಮಸ್ಥರು
- ಮುಖ್ಯಾಂಶಗಳು
• ರಾತ್ರಿ ವೇಳೆ ವಸತಿ ಪ್ರದೇಶದತ್ತ ನುಗ್ಗುವ ಪುಂಡಾನೆಗಳು.
• ಪ್ರಾಣಭಯದಲ್ಲೇ ಹೊಲಕ್ಕೆ ಹೋಗುವ ರೈತರು, ಗ್ರಾಮಸ್ಥರು.
ಸುದ್ದಿದಿನ ಡೆಸ್ಕ್ | ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಉಬ್ರಾಣಿ ಅರಣ್ಯ ಪ್ರದೇಶದಂಚಿನ ಗ್ರಾಮಗಳಲ್ಲಿ ಕಾಡಾನೆಗಳ ದಾಂಧಲೆ ಶುರುವಾಗಿದೆ. ಅರಣ್ಯದಂಚಿನ ಜಮೀನು, ಅಡಿಕೆ ಮತ್ತು ಬಾಳೆ ತೋಟಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ.
ತಾಲೂಕಿನ ಜೋಳದಾಳ್ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಅವಿತುಕೊಂಡಿರುವ ಎರಡು ಕಾಡಾನೆಗಳ ಹಿಂಡು ಕತ್ತಲಾಗುತ್ತಲೇ ಜಮೀನು ಮತ್ತು ವಸತಿ ಪ್ರದೇಶ ಕಡೆಗೆ ಬಂದು ದಾಳಿ ನಡೆಸುತ್ತಿವೆ. ಇದರಿಂದ ಬೆಳೆ ಹಾನಿಯಾಗುತ್ತಿದೆ. ಹಗಲು ವೇಳೆ ರೈತರು, ಗ್ರಾಮಸ್ಥರು ಪ್ರಾಣಭಯದಿಂದ ಕೃಷಿ ಕಾರ್ಯಕ್ಕಾಗಿ ಜಮೀನಿನತ್ತ ಹೋಗುವುದು ಕಡಿಮೆಯಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401