ದಿನದ ಸುದ್ದಿ

ಆಕಾಶವಾಣಿಯಲ್ಲಿ ಅರೆಕಾಲಿಕ ವರದಿಗಾರರ ಹುದ್ದೆಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ ಡೆಸ್ಕ್ : ಆಕಾಶವಾಣಿಯ ಬೆಂಗಳೂರು ಕೇಂದ್ರದ ಪ್ರಾದೇಶಿಕ ಸುದ್ದಿ ವಿಭಾಗವು, ಶಿವಮೊಗ್ಗ, ಹಾಸನ, ವಿಜಯನಗರ, ದಕ್ಷಿಣಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ಅರೆಕಾಲಿಕ ವರದಿಗಾರರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಎಂದು ಆಲ್ ಇಂಡಿಯಾ ರೇಡಿಯೋದ ಉಪ ನಿರ್ದೇಶಕರಾದ ಟಿ.ಬಿ.ನಂಜುಂಡಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಹತೆಗಳು

ಪಿ.ಜಿ ಡಿಪ್ಲೊಮಾ/ಪತ್ರಿಕೋದ್ಯಮ ಸಮೂಹ ಮಾಧ್ಯಮದಲ್ಲಿ ಪದವಿ ಹಾಗೂ ಕನಿಷ್ಠ ಎರಡು ವರ್ಷಗಳ ಮಾಧ್ಯಮ ಅನುಭವ ಹೊಂದಿರಬೇಕು. 24 ರಿಂದ 45 ವರ್ಷ (ಜಾಹಿರಾತು ಪ್ರಕಟಣೆಯ ದಿನಾಂಕಕ್ಕೆ ಅನ್ವಯಿಸುವಂತೆ) ಹೊಂದಿರಬೇಕು. ಅಭ್ಯರ್ಥಿಗಳು ಜಿಲ್ಲಾ ಮುಖ್ಯ ಕೇಂದ್ರದಲ್ಲಿ ಅಥವಾ ಜಿಲ್ಲೆಯ ಜಿಲ್ಲಾ ಮುಖ್ಯ ಕೇಂದ್ರ ಪುರಸಭೆ ವ್ಯಾಪ್ತಿಯ 10 ಕಿಲೋಮೀಟರ್ ಅಸುಪಾಸಿನ ಪ್ರದೇಶದಲ್ಲಿ ನೆಲೆಸಿರಬೇಕು.

ಅಪೇಕ್ಷಣೀಯ

ಕಂಪ್ಯೂಟರ್ ಮತ್ತು ವರ್ಡ್ ಪ್ರಾಸೆಸಿಂಗ್ ತಿಳಿವಳಿಕೆ ಇರಬೇಕು. ಸುದ್ದಿ ಸಂಗ್ರಹ ಉಪಕರಣಗಳನ್ನು ಹೊಂದಿರಬೇಕು. ವಿದ್ಯುನ್ಮಾನ ಮಾಧ್ಯಮಕ್ಕೆ ವರದಿಗಾರಿಕೆಯಲ್ಲಿ ಅನುಭವವಿರಬೇಕು. ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಆದ್ಯತೆ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಪೂರ್ಣ ವಿವರಗಳು, ಅಗತ್ಯ ದಾಖಲಾತಿಗಳ ಪ್ರತಿಗಳು ಹಾಗೂ ಅರ್ಜಿ ಶುಲ್ಕದ ಬ್ಯಾಂಕ್ ಡ್ರಾಫ್ಟ್‍ನ್ನು ಒಳಗೊಂಡ ಅರ್ಜಿಗಳನ್ನು, ರಿಜಿಸ್ಟರ್ಡ್ ಅಂಚೆ ಮೂಲಕ ಅಥವಾ ಖುದ್ದಾಗಿ ಜೂ.10ರೊಳಗೆ ತಲುಪುವಂತೆ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ

The Deputy Director General (E) & HOO) Attn: Regional News Unit, All India Radio, Raj Bhavan Road, Bengaluru 560 001.

ಹೆಚ್ಚಿನ ಮಾಹಿತಿಗೆ

ಮೊ.8317466729, 9448159726, 9482169168 ಹಾಗೂ ದೂ.080-22356344/22373000 ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version