ದಿನದ ಸುದ್ದಿ
ದೇಶದಲ್ಲಿ ಡೆಂಘಿ ಪ್ರಕರಣಗಳ ಹೆಚ್ಚಳ
ಸುದ್ದಿದಿನಡೆಸ್ಕ್:ದೇಶದಲ್ಲಿ ಡೆಂಘಿ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದರ ಹರಡುವಿಕೆಯನ್ನು ತಡೆಯಲು ಕೈಗೊಳ್ಳಬೇಕಾದ ಸಿದ್ಧತೆ ಕುರಿತು ನಿರ್ಣಯಿಸಲು ಕೇಂದ್ರ ಆರೋಗ್ಯ ಸಚಿವ ಜಗತ್ ಪ್ರಕಾಶ್ ನಡ್ಡಾ ತಮ್ಮ ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ನಿನ್ನೆ ಪರಿಶೀಲನಾ ಸಭೆ ನಡೆಸಿದರು.
ಬಳಿಕ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ಸಚಿವಾಲಯ ಡೆಂಘಿ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣೆಗಾಗಿ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ ಮತ್ತು ರಾಜ್ಯಗಳೊಂದಿಗೆ ಸಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.
24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಸಹಾಯವಾಣಿಯನ್ನು ಸಚಿವಾಲಯ ಪ್ರಾರಂಭಿಸಲಿದೆ ಮತ್ತು ಮುಂದಿನ 4-5ದಿನಗಳಲ್ಲಿ ಅಂತಹ ಸಹಾಯವಾಣಿಯನ್ನು ಪ್ರಾರಂಭಿಸಲು ರಾಜ್ಯಗಳನ್ನು ಕೋರಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆರೋಗ್ಯ ಸಚಿವಾಲಯ, ಶಿಕ್ಷಣ, ವಸತಿ ಮತ್ತು ನಗರಾಭಿವೃದ್ಧಿಯಂತಹ ಸಚಿವಾಲಯಗಳೊಂದಿಗೆ, ಅಂತರ-ವಲಯ ಮತ್ತು ಅಂತರ-ಇಲಾಖೆಯ ಸಭೆಗಳನ್ನು ಸಂಘಟಿಸಲು ಚಿಂತಿಸುತ್ತಿದೆ ಎಂದು ಸಚಿವರು ತಿಳಿಸಿದರು. ಮುಂದಿನ ಎರಡು ದಿನಗಳಲ್ಲಿ ಸಚಿವ ಜೆ.ಪಿ.ನಡ್ಡಾ ರಾಜ್ಯಗಳೊಂದಿಗೆ ಸಭೆಗಳನ್ನು ನಡೆಸಲಿದ್ದಾರೆ. ಶಾಲೆಗಳಿಗೆ ಮಾರ್ಗಸೂಚಿಗಳನ್ನು ನೀಡಲು, ಡೆಂಘಿ ಚಿಕಿತ್ಸಾ ವಾರ್ಡ್‌ಗಳು, ಮೀಸಲಾದ ನಿರ್ವಹಣೆ ಮತ್ತು ಔಷಧಗಳ ಲಭ್ಯತೆಗಳನ್ನು ಖಚಿತಪಡಿಸುವಂತೆ ಅವರು ಕೇಂದ್ರ ಆಸ್ಪತ್ರೆಗಳಿಗೆ ನಿರ್ದೇಶನ ನೀಡಿದ್ದಾರೆ.ಸುದ್ದಿದಿನ.ಕಾಂ|ವಾಟ್ಸಾಪ್|9980346243