ದಿನದ ಸುದ್ದಿ
ಆದಾಯ ತೆರಿಗೆ ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚಳ
ಸುದ್ದಿದಿನ ಹೊಸದಿಲ್ಲಿ: ಆದಾಯ ತೆರಿಗೆ ರಿಟರ್ನ್ಸ್ ಅರ್ಜಿ ಸಲ್ಲಕೆಯಲ್ಲಿ ಶನಿವಾರ ಸಂಜೆ ವೇಳೆಗೆ ಶೇ. 71 ಹೆಚ್ಚಳವಾಗಿದ್ದು, ಕೊನೆ ದಿನಾಂಕ ಆಗಸ್ಟ್ 31ರಂದು ಆನ್‌ಲೈನ್ ಮೂಲಕ ಸಲ್ಲಿಸಿದ ಅರ್ಜಿಗಳಿಂದ 5.42 ಕೋಟಿ ರೂ. ಆಕರವಾಗಿದೆ. ಕಳೆದ ವರ್ಷ 3.17 ಕೋಟಿ ರೂ. ಆದಾಯ ಬಂದಿತ್ತು.
ನೌಕರರು, ಆದಾಯ ತೆರಿಗೆ ವ್ಯಾಪ್ತಿಗೆ ಒಳಪಟ್ಟವರು ಇನ್ಕಮ್ ಟ್ಯಾಕ್ಸ್ ರಿಟರ್ನ್ಸ್ ಸಲ್ಲಿಕೆ ಅರ್ಹರಾಗಿದ್ದರು. 2017ರಿಂದ ಪರಿಚಯಿಸಲಾದ ಪೆನಾಲ್ಟಿ ಷರತ್ತಿನ ಕಾರಣದಿಂದ ಅರ್ಜಿ ಸಲ್ಲಿಕೆಯಲ್ಲಿ ಹೆಚ್ಚಳವಾಗಿದೆ. 10,000 ರೂ. ವರೆಗೆ ದಂಡ ಹಾಕುವ ಷರತ್ತು ವಿಧಿಸಲಾಗಿತ್ತು. ಜುಲೈ 31ರಿಂದ ಆಗಸ್ಟ್ 31ರ ವರೆಗೆ ಗಡುವು ವಿಸ್ತರಿಸಲಾಗಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9986715401