ದಿನದ ಸುದ್ದಿ
ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಾದ ನೀರು ; ಬೆಳೆ ಸಂಪೂರ್ಣ ನೀರು ಪಾಲು ; ಗೋಳಿಟ್ಟ ರೈತ
ಸುದ್ದಿದಿನ ಡೆಸ್ಕ್ : ತುಂಗಭದ್ರಾ ಜಲಾಶಯಕ್ಕೆ ಹರಿವು ಹೆಚ್ಚಾಳವಾದ ಕಾರಣ ಕೊಪ್ಪಳ ತಾಲೂಕಿನ ತಿಗರಿ ಗ್ರಾಮದಲ್ಲಿನ ಹಿನ್ನೀರಿನಲ್ಲಿ ಮೆಕ್ಕೆಜೋಳ ಬೆಳೆ ಸಂಪೂರ್ಣ್ ನೀರು ಪಾಲಾಗಿದ್ದು ರೈತ ಮಂಜುನಾಥ್ ಕಣ್ಣೀರಿಟ್ಟಿದ್ದಾರೆ.
ವಾಡಿಕೆಯಂತೆ ಜುಲೈ ಕೊನೆಯ ವಾರ ಟಿಬಿ ಡ್ಯಾಂನಲ್ಲಿ ಹೆಚ್ಚಿನ ಒಳ ಹರಿವು ಹೆಚ್ಚಾಗ ಬೇಕಿತ್ತು ಆದರೆ, ಈ ಬಾರಿ ತುಂಗಭದ್ರಾ ಜಲಾಶಯಕ್ಕೆ ನಿರೀಕ್ಷೆಗೂ ಮೀರಿ ಮೊದಲೇ 85 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಾಗಿದೆ. ಜಲಾಶಯದಲ್ಲಿ ಒಟ್ಟು 27 ಟಿಎಂಸಿ ನೀರು ಸಂಗ್ರಹವಾಗಿದೆ.
ರೈತ ಮಂಜುನಾಥ ಗಂಗಮ್ಮ ಅವರ ಜಲಾಶಯಕ್ಕಾಗಿ ಭೂ ಸ್ವಾಧೀನ ಮಾಡಿಕೊಂಡ ಭೂಮಿಯಲ್ಲಿ ಬೆಳೆದ ಬೆಳೆ ನೀರಿನಲ್ಲಿ ನಿಂತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243