ದಿನದ ಸುದ್ದಿ

ಸ್ವಾತಂತ್ರ್ಯ ದಿನಾಚಾರಣೆ ಹಿನ್ನೆಲೆ; ಪೊಲೀಸ್ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ ಪ್ರಕಟ

Published

on

ಸುದ್ದಿದಿನ ಡೆಸ್ಕ್ : 2022ನೇ ಸಾಲಿನ ಸ್ವಾತಂತ್ರ್ಯ ದಿನಾಚರಣೆ ( Independence day ) ಅಂಗವಾಗಿ ಅತ್ಯುತ್ತಮ ಸೇವೆ ಸಲ್ಲಿಸಿದ ಒಟ್ಟು 1ಸಾವಿರದ 82 ಪೊಲೀಸ್ ಅಧಿಕಾರಿಗಳು (Police Officers ) ಮತ್ತು ಸಿಬ್ಬಂದಿ ರಾಷ್ಟ್ರಪತಿ ಪದಕಕ್ಕೆ(President Medals) ಭಾಜನರಾಗಿದ್ದಾರೆ.

ಈ ಪೈಕಿ 347 ಸಿಬ್ಬಂದಿಗೆ ಶೌರ್ಯ ಪದಕ, 87 ಮಂದಿಗೆ ವಿಶಿಷ್ಟ ಸೇವಾ ಪದಕ, 648ಸಿಬ್ಬಂದಿಗೆ ಅತ್ಯುತ್ತಮ ಸೇವಾ ಪದಕಗಳನ್ನು ಪ್ರಕಟಿಸಲಾಗಿದೆ.

ಅಲ್ಲದೆ, 109 ಸಿಆರ್‌ಪಿಎಫ್ ಸಿಬ್ಬಂದಿ, ಜಮ್ಮು ಮತ್ತು ಕಾಶ್ಮೀರದ 108 ಪೊಲೀಸರಿಗೆ ಶೌರ್ಯ ಪ್ರಶಸ್ತಿ ಘೋಷಿಸಲಾಗಿದೆ. ವಿಶಿಷ್ಟ ಸೇವೆ ಸಲ್ಲಿಸಿದ್ದಕ್ಕಾಗಿ 7ಮಂದಿ ಹಾಗೂ 38 ಇತರೆ ಸಿಬ್ಬಂದಿ ರಾಷ್ಟ್ರಪತಿ ಅವರ ಸುಧಾರಣಾ ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version