ದಿನದ ಸುದ್ದಿ
ಸ್ವಾತಂತ್ರ್ಯ ದಿನಾಚರಣೆ | ಬಿ ಎಸ್ ಎನ್ ಎಲ್ ನಿಂದ ಗ್ರಾಹಕರಿಗೆ ಭರ್ಜರಿ ಆಫರ್..!
ಸುದ್ದಿದಿನ ಡೆಸ್ಕ್ | ಬಿಎಸ್ಸೆನ್ನೆಲ್ ಸ್ವಾತಂತ್ರ್ಯ ಸಂಭ್ರಮಕ್ಕಾಗಿ ಗ್ರಾಹಕರಿಗೆ ಕಡಿಮೆ ದರ ಫ್ರೀಡಂ- ಚೋಟಾ ಪ್ಯಾಕ್ ನೀಡುತ್ತಿದ್ದು, ಈ ಆಫರ್ ಅಡಿ ಪ್ರೀಪೇಯ್ಡ್ ಗ್ರಾಹಕರು ಅನ್.ಲಿಮಿಟೆಡ್ ವಾಯ್ಸ್, ಡೇಟಾ ಬೆನಿಫಿಟ್ ಪಡೆಯಲಿದ್ದಾರೆ. 9 ರೂ ಹಾಗೂ 29 ರೂ ಪ್ಯಾಕೇಜ್ ಗ್ರಾಹಕರಿಗೆ ಆಗಸ್ಟ್ 10ರಿಂದ ಈ ಸೌಲಭ್ಯ ಅನ್ವಯವಾಗಲಿದೆ.
9 ರೂ ಫ್ರೀಡಂ ಆಫರ್ನಲ್ಲಿ ಪ್ರೀಪೇಯ್ಡ್ ಗ್ರಾಹಕರು ಅನಿಯಮಿತ ಕರೆ (ದೆಹಲಿ, ಮುಂಬೈ ಹೊರತುಪಡಿಸಿ), 2GB ಡೇಟಾ, 100 ಎಸ್ಸೆಮೆಸ್ ಪಡೆಯಲಿದ್ದಾರೆ. ಒಂದು ದಿನದ ವ್ಯಾಲಿಡಿಟಿ ಹೊಂದಿದೆ. ಆಗಸ್ಟ್ 10ರಿಂದ 25ರ ವರೆಗೆ ಆಫರ್ ಆನಂದಿಸಬಹುದು.
29ರೂ ಮೌಲ್ಯದ ಆಫರ್
ಅನಿಯಮಿತ ಕರೆ, 2GB ಡೇಟಾ, 100 ಎಸ್ಸೆಮ್ಮೆಸ್ ಸೌಲಭ್ಯವನ್ನು ೭ದಿನಗಳ ವರೆಗೆ ಆನಂದಿಸಬಹುದು. ಈ ಪ್ಲ್ಯಾನ್ ಆಗಸ್ಟ್ 25 ಮುಂದುವರಿಯಲಿದೆ. ಕೆಲ ಮಿತಿಗಳನ್ನು ಒಳಗೊಂಡಿದೆ. ಇತ್ತೀಚಿಗೆ ಬಿಎಸ್ಸೆನ್ನೆಲ್ ₹ 27 ಮೌಲ್ಯದ ಪ್ರೀಪೇಯ್ಡ್ ಪ್ಲ್ಯಾನ್ ಬಿಡುಗಡೆ ಮಾಡಿದ್ದು, ಈ ಯೋಜನೆಯ ಗ್ರಾಹಕರು ಏಳು ದಿನಗಳ ಕಾಲ ದಿನವೊಂದಕ್ಕೆ ಒಂದು ಜಿಬಿ ಡೇಟಾ, ಅನಿಯಮಿತ ಕರೆ, 300 ಎಸ್ಸೆಮ್ಮೆಸ್ ಪಡೆಯಲಿದ್ದಾರೆ. ಆದರೆ, 29 ಪ್ಲ್ಯಾನಿನ ದೆಹಲಿ ಮತ್ತು ಮುಂಬೈ ವೃತ್ತದ ಗ್ರಾಹಕರಿಗೆ ಈ ಸೌಲಭ್ಯ ಸಿಗುವುದಿಲ್ಲ. ಪೋಸ್ಟ್ ಪೇಯ್ಡ್ ಗ್ರಾಹಕರಿಗೂ ಎಸ್ಸೆಮ್ಮೆಸ್ ಬೆನಿಫಿಟ್ ಮುಂದುವರಿಯಲಿದ್ದು, ರೂ 399 ಪ್ಲ್ಯಾನಿನ ಗ್ರಾಹಕರು ದಿನಕ್ಕೆ ನೂರು ಎಸ್ಸೆಮ್ಮೆಸ್ ಸೌಲಭ್ಯ ಪಡೆಯಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401