ದಿನದ ಸುದ್ದಿ

ಭಾರತ-ಬಾಂಗ್ಲಾದೇಶ ಗಡಿ ಪ್ರದೇಶದಲ್ಲಿ ಎರಡು ವರ್ಷಗಳ ಬಳಿಕ ’ಬಾರ್ಡರ್ ಹಾಟ್’ ವಿಶೇಷ ಮೇಳ

Published

on

ಸುದ್ದಿದಿನ ಡೆಸ್ಕ್ : ಎರಡು ವರ್ಷಗಳ ನಂತರ ನಿನ್ನೆ ಭಾರತ-ಬಾಂಗ್ಲಾದೇಶ ಗಡಿಪ್ರದೇಶದ ಮೇಘಾಲಯದಲ್ಲಿ ಬಾರ್ಡರ್ ಹಾಟ್ ಆರಂಭಗೊಂಡಿದೆ.

ಮೇಘಾಲಯದ ಪೂರ್ವ ಕಾಶಿ ಬೆಟ್ಟ ಪ್ರದೇಶದ ಬಾಲಾತ್ ಮತ್ತು ಬಾಂಗ್ಲಾದೇಶದ ಸುನಮ್‌ಗಂಜ್ ಜಿಲ್ಲೆಯ ದಲೋರಾ ಮಧ್ಯೆ ಬಾರ್ಡರ್ ಹಾಟ್ ಆರಂಭಕ್ಕೆ ಈ ತಿಂಗಳ 19 ರಂದು ಜಂಟಿ ಗಡಿ ಹಾಟ್ ನಿರ್ವಹಣಾ ಸಮೀತಿ ನಿರ್ದರಿಸಿತ್ತು.

ಮುಂದಿನ ತಿಂಗಳು ಮತ್ತೆರಡು ಹಾಟ್ ಆರಂಭಿಸಲು ಸಮೀತಿ ನಿರ್ಧರಿಸಿದೆ. ಪೂರ್ವ ಕಾಶಿ ಬೆಟ್ಟ ಪ್ರದೇಶದ ರಿಂಕು ಮತ್ತು ದೌರಾ ಬಾಜಾರ್‌ನ ಬಾಗನ್ ಬಾರಿ ಮಧ್ಯೆ ಮೇ 12 ರಂದು ಹಾಟ್ ಆರಂಭಗೊಳ್ಳಲಿದೆ.

ನೈಋತ್ಯ ಕಾಶಿ ಬೆಟ್ಟ ಪ್ರದೇಶದ ನಲಿಕಾಟಾ ಬಾಂಗ್ಲಾದೇಶದ ಸೈಯ್ಯಾಬಾದ್ ಮಧ್ಯೆ ಮೇ 16 ರಂದು ಹಾಟ್ ಆರಂಭಗೊಳ್ಳಲಿದೆ. ಗಡಿ ಪ್ರದೇಶದ ಜನರ ಮಧ್ಯೆ ಸ್ಥಳೀಯ ಸರಕುಗಳ ವ್ಯಾಪಾರ ವೃದ್ಧಿಗೆ ಈ ಮಹೋತ್ಸವಗಳು ನೆರವಾಗುತ್ತಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version