ದಿನದ ಸುದ್ದಿ
ವಿಡಿಯೋ | ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ ಪುಟಾಣಿ ಬಾಲಕ ಗುಹಾನ್..!
ಸುದ್ದಿದಿನ ಡೆಸ್ಕ್ : ಒಂದು ವರ್ಷ 10 ತಿಂಗಳ ಪುಟಾಣಿ ಬಾಲಕ ಗುಹಾನ್ ಸಿ.ಹೆಚ್ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ್ದಾನೆ. ಚಿಕ್ಕಮಗಳೂರು ಜಿಲ್ಲೆ ಗಂಜಲಗೋಡು ಗ್ರಾಮದ ಹರೀಶ್ ಜಿ.ಆರ್ ಹಾಗೂ ಚೈತ್ರಾ ದಂಪತಿಯ ಪುತ್ರ ಚಿಕ್ಕ ವಯಸ್ಸಿನಲ್ಲೆಯೇ ಅಪ್ರತಿಮ ಸಾಧನೆ ಮಾಡಿದ್ದಾನೆ. ಗುಹಾನ್ ಬುದ್ಧಿಶಕ್ತಿ ಮತ್ತು ಅಪಾರ ನೆನಪಿನ ಶಕ್ತಿ ಹೊಂದಿದ್ದಾನೆ.
ಒಂದು ನಿಮಿಷದಲ್ಲಿ 22 ಪ್ರಾಣಿಗಳ ಧ್ವನಿಯನ್ನು ನಕಲು ಮಾಡುವ ವಿಷಯವಾಗಿ ಗುಹಾನ್ ಸಿ.ಹೆಚ್ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ ಸೇರಿದೆ. ಜನವರಿ 10 2022ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯವರು ಗುಹಾನ್ ಹೆಸರನ್ನು ಇಂಡಿಯಾ ಬುಕ್ ರೆಕಾರ್ಡ್ ಗೆ ಸೇರಿಸಿದ್ದಾರೆ. ಅತೀ ಚಿಕ್ಕ ವಯಸ್ಸಿನಲ್ಲಿ ಪ್ರಾಣಿಗಳ ಧ್ವನಿ ನಕಲು ಮಾಡುವ ದಾಖಲೆ ಗುಹಾನ್ ಹೆಸರಿನಲ್ಲಿ ಸೇರಿದೆ.
ಇದಿಷ್ಟೆ ಅಲ್ಲದೆ ಈ ಪುಟ್ಟ ಬಾಲಕ 50 ಪ್ರಾಣಿ ಪಕ್ಷಿಗಳನ್ನು ಗುರುತಿಸಿ ಅವುಗಳ ಹೆಸರನ್ನು ಹೇಳುವುದು, 25 ವಾಹನಗಳ ಹೆಸರು, 20 ದೇಹದ ಅಂಗಗಳ ಹೆಸರು, 10 ಬಣ್ಣಗಳ ಹೆಸರು, 10 ಕೀಟಗಳು ಮತ್ತು ಸರೀಸೃಪಗಳ ಹೆಸರು, 20 ಬಗೆಯ ಆಹಾರ ಪದಾರ್ಥಗಳ ಹೆಸರು, 21 ಹಣ್ಣುಗಳು, 15 ತರಕಾರಿಗಳ ಹೆಸರು, 20 ಅನಿಮೇಷನ್ ಪಾತ್ರಗಳು, A to Z ಇಂಗ್ಲೀಷ್ ವರ್ಣಮಾಲೆಯ ಪದಗಳನ್ನು ಪಟ ಪಟನೆ ಹೇಳುತ್ತಾನೆ.
- ಒಂದು ವರ್ಷದ ವಯಸ್ಸಿದ್ದಾಗ ಗುಹಾನ್ ಮನೆ ಹೊರಗಡೆ ಹೋಗುವುದಕ್ಕೆ ಹೆಚ್ಚು ಹಠ ಮಾಡುತ್ತಿದ್ದ. ಮನೆ ಹೊರಗಡೆ ಹೋದಾಗ ಪ್ರಾಣಿಗಳನ್ನು ಕಂಡಾಗ ಧ್ವನಿಯನ್ನು ನಕಲು ಮಾಡುತ್ತಿದ್ದ, ಮನೆಗೆ ಬಂದ ಬಳಿಕವೂ ರೀಪೀಟ್ ಮಾಡುತ್ತಿದ್ದ, ಪ್ರಾಣಿಗಳ ಧ್ವನಿ ಮರೆಯುತ್ತಿರಲಿಲ್ಲ. ನೆನಪಿನ ಶಕ್ತಿಯನ್ನು ಗುರುತಿಸಿ ಇಂಡಿಯಾ ಬುಕದ ಆಫ್ ರೆಕಾರ್ಡ್ ಸಂಸ್ಥೆಯವರನ್ನು ಸಂಪರ್ಕಿಸಿದ್ದೆವು.
| ಚೈತ್ರಾ ಎ.ಎಸ್ , ಗುಹಾನ್ ತಾಯಿ
ವಿಡಿಯೋ ನೋಡಿ
ಸುದ್ದಿದಿನ.ಕಾಂ|ವಾಟ್ಸಾಪ್|9980346243