ದಿನದ ಸುದ್ದಿ
ಆಹಾರ ಭದ್ರತೆಯಿಂದಾಗಿ ಕೋವಿಡ್‌ಗೆ ಕಡಿವಾಣ ಹಾಕಿದ ಭಾರತ : ನಿರ್ಮಲಾ ಸೀತಾರಾಮನ್
ಸುದ್ದಿದಿನ, ದಕ್ಷಿಣ ಕೋರಿಯ : ಭಾರತ ಕೋವಿಡ್‌ನಿಂದ ಹೊರ ಬಂದು ಅಗ್ರಗಣ್ಯ ಐದು ಆರ್ಥಿಕ ಮುಂಚೂಣಿಯ ರಾಷ್ಟ್ರಗಳಲ್ಲಿ ನಿಲ್ಲಬೇಕಾದರೆ ಆಹಾರ ಭದ್ರತೆ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಮೇಲಿರುವ ದೂರದೃಷ್ಟಿಯಿಂದ ಸಾಧ್ಯವಾಯಿತು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕೋರಿಯಾದಲ್ಲಿ ನಡೆಯುತ್ತಿರುವ ಏಷ್ಯನ್ ಡೆವೆಲಪ್‌ಮೆಂಟ್ ಬ್ಯಾಂಕ್‌ನ 56ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕೋವಿಡ್ ನಂತರದ ಏಷ್ಯಾ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳ ಕುರಿತು ಸಮಾರಂಭದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದ್ದು, ಭಾರತ ವೇಗವಾಗಿ ಚೇತರಿಸಿಕೊಳ್ಳುವಲ್ಲಿ ದೇಶದ ಜನರ ಬಗೆಗಿನ ಸರ್ಕಾರದ ಕಾಳಜಿ ಮತ್ತು ದೂರದೃಷ್ಟಿಗಳೇ ಮುಖ್ಯ ಕಾರಣ ಎಂದು ಸೀತಾರಾಮನ್ ಒತ್ತಿ ಹೇಳಿದರು.
ಇದನ್ನೂ ಓದಿ | ದೇಶದಲ್ಲಿ ಅಂಗಾಂಗ ಕಸಿ ಗಣನೀಯ ಏರಿಕೆ
ಆಹಾರ ಭದ್ರತೆ ವಿಷಯ ಬೃಹತ್ ಜನಸಂಖ್ಯೆ ಹೊಂದಿರುವ ಭಾರತದಂತಹ ದೇಶಕ್ಕೆ ಬಹು ದೊಡ್ಡ ಸವಾಲಾಗಿತ್ತು. ಬಂಡವಾಳ ವೆಚ್ಚಕ್ಕಿಂತ ಕೃಷಿ, ಉತ್ಪಾದನಾ ವಲಯಗಳ ಉತ್ತೇಜನದ ಜೊತೆಗೆ ನಾವು ನೀಡುವ ಸೇವೆಯೂ ಸಹ ಅಮೃತ ಕಾಲದ ಅತ್ಯುತ್ತಮ ಯೋಜನೆಗಳಾಗಿದ್ದರಿಂದ ಭಾರತ ಕೋವಿಡ್‌ನಿಂದ ವೇಗವಾಗಿ ಚೇತರಿಸಿಕೊಳ್ಳುವಂತಾಯಿತು ಎಂದು ಭಾರತದ ಯಶೋಗಾಥೆಯನ್ನು ನೆರೆದಿದ್ದ ವಿವಿಧ ರಾಷ್ಟ್ರಗಳ ಪ್ರತಿನಿಧಿಗಳ ಮುಂದೆ ತೆರೆದಿಟ್ಟರು. ಉತ್ಪಾದನಾ ವಲಯಗಳಲ್ಲಿ ದುಡಿಯುವ ವರ್ಗದ ಜನರ ಮೂಲಭೂತ ಅಗತ್ಯಗಳ ಪೂರೈಕೆ, ಕೃಷಿಯಲ್ಲಿ ನೂತನ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಹತ್ತು ಹಲವು ವಿಭಾಗಗಳಲ್ಲಿ ಕಾರ್ಯತಂತ್ರಗಳನ್ನು ರೂಪಿಸಿ, ಸರಿಯಾಗಿ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದವರು ತಿಳಿಸಿದರು.
During the meeting with the investors, FM Smt. @nsitharaman mentioned that India has stood out as a beacon of hope facing the tailwinds of the pandemic and the headwinds of the geo-political conflicts to become the fifth-largest economy in the world. (4/6)
— Ministry of Finance (@FinMinIndia) May 3, 2023
ಸುದ್ದಿದಿನ.ಕಾಂ|ವಾಟ್ಸಾಪ್|9980346243