ದಿನದ ಸುದ್ದಿ

ಭಾರತ-ಜರ್ಮನಿ ಇಂಧನ ಪಾಲುದಾರಿಕೆ ಒಪ್ಪಂದಕ್ಕೆ ಸಹಿ

Published

on

ಸುದ್ದಿದಿನ ಡೆಸ್ಕ್ : ಭಾರತ-ಜರ್ಮನಿ, ತ್ರಿಕೋನ ಅಭಿವೃದ್ಧಿ ಸಹಕಾರ ಮತ್ತು ನವೀಕರಿಸಬಹುದಾದ ಇಂಧನದ ಪಾಲುದಾರಿಕೆ ಒಪ್ಪಂದಕ್ಕೆ ಸಹಿಹಾಕಿವೆ.

ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ್, ಜರ್ಮನಿಯ ಆರ್ಥಿಕ ಹಾಗೂ ಸಹಕಾರ ಮತ್ತು ಅಭಿವೃದ್ಧಿ ಸಚಿವೆ ಸ್ವೆನ್ಜಾ ಶುಲ್ಜ್ ಅವರ ಜೊತೆ ಬರ್ಲಿನ್‌ನಲ್ಲಿ ಸಭೆ ನಡೆಸಿದರು.

ಸಭೆಯ ವೇಳೆ, ಬದಲಾದ ವಾತಾವರಣ, ಜಾಗತಿಕ ತಾಪಮಾನ, ವಿಶ್ವಾಸಾರ್ಹ ಇಂಧನ ಪೂರೈಕೆ ಜಾಲ, ಇತರೆ ದೇಶದೊಂದಿಗಿನ ಪಾಲುದಾರಿಕೆ, ಉಕ್ರೇನ್ ಸಂಘರ್ಷದ ಆರ್ಥಿಕ ಹೊಡೆತ ಸೇರಿದಂತೆ ಹಲವು ವಿಷಯಗಳನ್ನು ಚರ್ಚಿಸಲಾಯಿತು ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಜರ್ಮನಿಯ ಆರ್ಥಿಕ ಸಚಿವರ ನಡುವೆ ಮತ್ತೊಂದು ಒಡಂಬಡಿಕೆ ಸಹಿ ಹಾಕಿಲಾಗಿದೆ. ಈ ಒಪ್ಪಂದ ಎರಡೂ ದೇಶಗಳ ವ್ಯವಸಾಯ ಸಂಬಂಧಿ ಸಂಶೋಧನೆ, ಜ್ಞಾನ ವಿನಿಮಯ, ಅನ್ವೇಷಣೆಯಿಂದ ಕೃಷಿಗೆ ಪೂರಕವಾದ ಅಂಶಗಳನ್ನು ಒಳಗೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version