ಕ್ರೀಡೆ

ಭಾರತದ ಜಯದ ಗುರಿಗೆ 1 ವಿಕೆಟ್ ಬಾಕಿ

Published

on

ಸುದ್ದಿದಿನ, ನಾಟಿಂಗ್ ಹ್ಯಾಮ್: ವೇಗಿ ಜಸ್ ಪ್ರೀತ್ ಬೂಮ್ರಾ ದಾಳಿಗೆ ತತ್ತರಿಸಿದ ಆತಿಥೇಯ ಇಂಗ್ಲೆಂಡ್‌ ತಂಡ, ಇಲ್ಲಿ ನಡೆಯುತ್ತಿರುವ 3 ನೇ ಟೆಸ್ಟ್‌ ನಲ್ಲಿ ಸೋಲಿನ ಸುಳಿಗೆ ಸಿಲುಕಿದೆ. ಮೊದಲ ಇನ್ನಿಂಗ್ಸ್ ನಲ್ಲಿ 168 ರನ್ ಗಳ ಮುನ್ನಡೆ ಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ 7 ವಿಕೆಟ್ ಗೆ 352 ಡಿಕ್ಲೇರ್ ಮಾಡಿಕೊಂಡಿದ್ದ ಭಾರತ, ಇಂಗ್ಲೆಂಡ್ ಗೆ ದಾಖಲೆಯ 521 ರನ್ ಗಳ ಗುರಿ ನೀಡಿತ್ತು.

4 ನೇ ದಿನವಾದ ಮಂಗಳವಾರ ವಿಕೆಟ್ ನಷ್ಟವಿಲ್ಲದೇ 23 ರನ್ ಗಳಿಂದ ದ್ವಿತೀಯ ಇನ್ನಿಂಗ್ಸ್ ಮುಂದುವರೆಸಿದ ಇಂಗ್ಲೆಂಡ್ ದಿನದಂತ್ಯಕ್ಕೆ 9 ವಿಕೆಟ್ ಗೆ 311 ರನ್ ಗಳಿಸಿತು. ಇಂಗ್ಲೆಂಡ್ ಇನ್ನೂ 210 ರನ್ ಗಳ ಹಿನ್ನಡೆಯಲ್ಲಿದೆ. 5 ನೇ ಮತ್ತು ಕೊನೆಯ ದಿನವಾದ ಬುಧವಾರ ಇಂಗ್ಲೆಂಡ್ 1 ವಿಕೆಟ್ ನಲ್ಲಿ 210 ರನ್ ಗಳ ಗುರಿ ತಲುಪುವುದು ಅಸಾಧ್ಯ ವಾಗಿದೆ.

ಅದ್ಭುತ ದಾಳಿ ಸಂಘಟಿಸಿದ ಯುವ ವೇಗಿ ಬೂಮ್ರಾ 85 ರನ್ ಗಳಿಗೆ 5 ವಿಕೆಟ್ ಕಿತ್ತು ಯಶಸ್ವಿ ಬೌಲರ್ ಎನಿಸಿದರು. ಇಂಗ್ಲೆಂಡ್ ಪರ ಜೋಸ್ ಬಟ್ಲರ್ 106, ಆಲ್ರೌಂಡರ್ ಬೆನ್ ಸ್ಟೋಕ್ಸ್ 62 ರನ್ ಗಳಿಸಿದರು. ಇದು ಸೇರಿದಂತೆ ಬಟ್ಲರ್ ಟೆಸ್ಟ್‌ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ 8 ಬಾರಿ 60 ಕ್ಕೂ ಹೆಚ್ಚು ರನ್ ದಾಖಲಿಸಿದ ಶ್ರೇಯ ಪಡೆದರು.

ಸಂಕ್ಷಿಪ್ತ ಸ್ಕೋರ್

ಭಾರತ 329 ಮತ್ತು 352/7 ಡಿಕ್ಲೇರ್
ಇಂಗ್ಲೆಂಡ್ 161 ಮತ್ತು 311/9 ( ಬಟ್ಲರ್ 106, ಸ್ಟೋಕ್ಸ್ 62, ಬೂಮ್ರಾ 85 ಕ್ಕೆ 5 ವಿಕೆಟ್ )
Scores in English
ENGvIND 3rd Test, Day 4: England 161 & 311/9 at stumps against India (329, 352/7d). India need 1 wicket to win in Nottingham. Bumrah 5/85, Buttler 106, Stokes 62

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version