ಕ್ರೀಡೆ

ವಿಂಡೀಸ್ ಮಣಿಸಿ ಹೊಸ ದಾಖಲೆ ಬರೆದ ಭಾರತ

Published

on

ಸುದ್ದಿದಿನ ಡೆಸ್ಕ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಇನ್ನಿಂಗ್ಸ್ ಮತ್ತು 272 ರನ್ ಗಳ ಭಾರಿ ಗೆಲುವು ದಾಖಲಿಸಿದ ಭಾರತ, ಹೊಸ ದಾಖಲೆ ಬರೆದಿದೆ. 1932ರಲ್ಲಿ ಟೆಸ್ಟ್ ಕ್ರಿಕೆಟ್ ದರ್ಜೆ ಪಡೆದಿದ್ದ ಭಾರತ ತಂಡದ ಈ ಗೆಲುವು ಈವರೆಗಿನ ಅತಿ ದೊಡ್ಡ ಗೆಲುವಾಗಿದೆ.

ಇದಕ್ಕೂ ಮೊದಲು ಭಾರತ ಅಫ್ಘನ್ ವಿರುದ್ಧ ಇನ್ನಿಂಗ್ಸ್ ಮತ್ತು 262 ರನ್(2018), ಬಾಂಗ್ಲಾ ವಿರುದ್ಧ ಇನ್ನಿಂಗ್ಸ್ ಮತ್ತು 239 ರನ್(2007) ಹಾಗೂ ಶ್ರೀಲಂಕಾ ವಿರುದ್ಧ ಇನ್ನಿಂಗ್ಸ್ ಮತ್ತು 239 ರನ್(2017)ಗಳ ಗೆಲುವು ದಾಖಲಿಸಿತ್ತು.

Trending

Exit mobile version