ದಿನದ ಸುದ್ದಿ

ಭಾರತ ಪ್ರಮುಖ ಆದ್ಯತೆಯ ಹೂಡಿಕೆ ತಾಣ; ಕಳೆದ ಆರ್ಥಿಕ ವರ್ಷ 88.57 ಶತಕೋಟಿ ಡಾಲರ್ ವಿದೇಶಿ ನೇರ ಬಂಡವಾಳ ಹೂಡಿಕೆ

Published

on

ಸುದ್ದಿದಿನ ಡೆಸ್ಕ್ : ಭಾರತ, ಆದ್ಯತೆಯ ಹೂಡಿಕೆಯ ತಾಣವಾಗಿ ಹೊರಹೊಮ್ಮಿದ್ದು, ಕಳೆದ ಆರ್ಥಿಕ ವರ್ಷದಲ್ಲಿ 88.57ಶತಕೋಟಿ ಅಮೆರಿಕನ್ ಡಾಲರ್‌ನಷ್ಟು ವಿದೇಶಿ ನೇರ ಬಂಡವಾಳ ಹರಿದು ಬಂದಿದೆ.

2014-15ರ ಹಣಕಾಸು ವರ್ಷದಲ್ಲಿ 45.15ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ನೇರ ಬಂಡವಾಳ ಹರಿದುಬಂದಿತ್ತು. ಇದನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡ 85ರಷ್ಟು ಬೆಳೆವಣಿಗೆಯನ್ನು ಭಾರತ ಕಂಡಿದೆ. ಕಳೆದ ನಾಲ್ಕು ವರ್ಷಗಳಿಂದ ಭಾರತ 301 ಶತಕೋಟಿ ಅಮೆರಿಕನ್ ಡಾಲರ್ ವಿದೇಶಿ ಬಂಡವಾಳವನ್ನು ಆಕರ್ಷಿಸಿದೆ.

ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯದ ಮಾಹಿತಿ ಪ್ರಕಾರ, ದೇಶದ ಒಳಹರಿವು 2003-04ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 20ಪಟ್ಟು ಹೆಚ್ಚಾಗಿದೆ. ಅಲ್ಲದೆ ಉತ್ಪಾದನಾ ವಲಯದಲ್ಲು ಭಾರತ ವಿದೇಶಿ ನೇರ ಬಂಡವಾಳ ಹೂಡಿಕೆಯ ಆದ್ಯತೆಯ ದೇಶವಾಗಿ ಹೊರಹೊಮ್ಮುತ್ತದೆ.

ಕಳೆದ ಹಣಕಾಸು ವರ್ಷದಿಂದ ಉತ್ಪಾದನಾ ವಲಯದಲ್ಲಿ ಒಳಹರಿವು ಹೆಚ್ಚಾಗಿದ್ದು 2020-21ರಲ್ಲಿ 21.34ಅಮೆರಿಕನ್ ಡಾಲರ್‌ನಷ್ಟಿತ್ತು. ಕಂಪ್ಯೂಟರ್ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್‌ನಲ್ಲಿ ಹೆಚ್ಚು ಬಂಂಡವಾಳ ಹೂಡಿಕೆಯಾಗಿದ್ದು, ನಂತರದ ಸ್ಥಾನದಲ್ಲಿ ಸೇವಾವಲಯ ಮತ್ತು ಆಟೋಮೊಬೈಲ್ ವಲಯಗಳು ಶೇಕಡ 25ರಷ್ಟು ಪಾಲನ್ನು ಹೊಂದಿದೆ.

ಎಫ್‌ಡಿಐ ಆಕರ್ಷಿಸುವಲ್ಲಿ ಕರ್ನಾಟಕ ಶೇಕಡ 38ರಷ್ಟು ಪಾಲನ್ನು ಹೊಂದಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ ಹಾಗೂ ದೆಹಲಿ ರಾಜ್ಯಗಳಿವೆ.ವಾಣಿಜ್ಯ ಹಾಗೂ ಕೈಗಾರಿಕಾ ವಲಯದಲ್ಲಿ ಉದಾರ ಮತ್ತು ಪಾರದರ್ಶಕ ನೀತಿ ಹಾಗೂ ಇತರ ಅನುಕೂಲಕರ ಉಪಕ್ರಮಗಳಿಂದಾಗಿ ದಾಖಲೆಯ ಪ್ರಮಾಣದಲ್ಲಿ ಎಫ್‌ಡಿಐ ಒಳಹರಿವಿಗೆ ಕಾರಣವಾಗಿದೆ ಎಂದು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version