ದಿನದ ಸುದ್ದಿ

2025ರ ವೇಳೆಗೆ ದೇಶದಿಂದ ಕ್ಷಯರೋಗ ತೊಲಗಿಸಲು ಭಾರತ ದಾಪುಗಾಲು ಹಾಕುತ್ತಿದೆ : ಸಚಿವ ಡಾ. ಮನ್ಸುಖ್ ಮಾಂಡವೀಯ

Published

on

ಸುದ್ದಿದಿನ ಡೆಸ್ಕ್ : 2025ರ ವೇಳೆಗೆ ದೇಶವನ್ನು ಮಾರಕ ಕ್ಷಯರೋಗದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಭಾರತ ದಾಪುಗಾಲು ಹಾಕುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವೀಯ ಹೇಳಿದ್ದಾರೆ.

ಕ್ಷಯ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆ ಹಾಗೂ ಗುಣಮಟ್ಟದ ಆರೋಗ್ಯ ರಕ್ಷಣೆ ಖಾತರಿಪಡಿಸುವ ಮೂಲಕ ಈ ಗುರಿ ತಲುಪಲಾಗುವುದು ಎಂದು ಸಚಿವ ಮಾಂಡವೀಯ ಹೇಳಿದ್ದಾರೆ.

2025ರ ವೇಳೆಗೆ ಕ್ಷಯರೋಗವನ್ನು ದೇಶದಿಂದ ತೊಲಗಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಾರ್ಯ ಪ್ರವೃತ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ದೇಶದಲ್ಲಿ ಕ್ಷಯ ರೋಗ ಕಂಡುಬರುತ್ತಿರುವ ಪ್ರಮಾಣ ಶೇಕಡ ೩೪ರಷ್ಟು ಇಳಿಕೆಯಾಗಿದ್ದು, 2025ರಲ್ಲಿ ಒಂದು ಲಕ್ಷ ಜನಸಂಖ್ಯೆಗೆ 217ಮಂದಿಗೆ ಕ್ಷಯ ರೋಗ ಕಂಡುಬಂದಿದ್ದು, 2020ರ ವೇಳೆಗೆ 142ಕ್ಕೆ ಇಳಿಕೆಯಾಗಿದೆ, ಕ್ಷಯರೋಗದಿಂದ ಸಾವನ್ನಪ್ಪುವವರ ಸಂಖ್ಯೆಯೂ ಕೂಡ ಶೇಕಡ53ರಷ್ಟು ಇಳಿಕೆಯಾಗಿದೆ. 2015ರಲ್ಲಿ ಲಕ್ಷ ಜನಸಂಖ್ಯೆಗೆ 32 ಮಂದಿ ಮೃತಪಡುತ್ತಿದ್ದರು. 2020ರ ವೇಳೆಗೆ 15ಮಂದಿಗೆ ಇಳಿಕೆಯಾಗಿದೆ ಎಂದು ಸಚಿವರು ಟ್ವೀಟ್ನಲ್ಲಿ ಅಂಕಿ-ಅಂಶ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version