ಕ್ರೀಡೆ
ಏಕದಿನ ಸರಣಿ | ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಜಯ
ಸುದ್ದಿದಿನ, ನ್ಯೂಜಿಲೆಂಡ್: ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಇಂದು ಮೊದಲನೇ ಪಂದ್ಯದಲ್ಲಿ ಭಾರತ, ಗೆಲುವನ್ನ ಸಾಧಿಸಿ ಶುಭಾರಂಭ ಮಾಡಿದೆ.ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ಗೆ ಆರಂಭದಲ್ಲಿ ಮೊಹಮ್ಮದ್ ಶಮಿ ದಾಳಿಗೆ ಮಂಕಾದ್ರೆ, ಬಳಿಕ ಕುಲ್ದೀಪ್ ಯಾದವ್ ಸ್ಪಿನ್ ಮೋಡಿಗೆ ವಿಕೆಟ್ ಕ್ಲೀನ್ ಸ್ವಾಪ್ ಆಗಿತ್ತು. ಹೀಗಾಗಿ ನ್ಯೂಜಿಲೆಂಡ್ 38 ಓವರ್‌ಗಳಲ್ಲಿ 157 ರನ್‌ಗೆ ಆಲೌಟ್ ಆಯಿತು.
ನ್ಯೂಜಿಲೆಂಡ್ ತಂಡವನ್ನ ಅಲ್ಪಮೊತ್ತಕ್ಕೆ ಆಲೌಟ್ ಮಾಡಿ 158 ರನ್ ಟಾರ್ಗೆಟ್ ಪಡೆದಿದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆರಂಭಿಸಿತು.ಬ್ಯಾಟಿಂಗ್‌ನಲ್ಲಿ ಶಿಖರ್ ಧವನ್ ಆಕರ್ಷಕ ಅರ್ಧ ಶತಕ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಮೊದಲ 34.5 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಭಾರತ ಜಯ ಸಾಧಿಸಿತು. ಧವನ್ ಅಜೇಯ 75 ರನ್ , ರಾಯುಡು 13 ರನ್ ನಾಯಕ ಕೊಹ್ಲಿ 45 ರನ್ ಗಳಿಸಿದ್ದಾರೆ.
ನಾಯಕ ಕೇನ್ ವಿಲಿಯಮ್ಸನ್ 64 ರನ್ ಹೊರತು ಪಡಿಸಿದರೆ ಇನ್ಯಾವ ಬ್ಯಾಟ್ಸ್‌ಮನ್‌ಗಳು ಹೋರಾಟ ನೀಡಲಿಲ್ಲ. ಭಾರತದಪರ ಕುಲ್ದೀಪ್ ಯಾದವ್ 4, ಮೊಹಮ್ಮದ್ ಶಮಿ 3, ಯಜುವೇಂದ್ರ ಚೆಹಾಲ್ 2 ಹಾಗೂ ಕೇದಾರ್ 1 ವಿಕೆಟ್ ಹಾಗು ಮಹ್ಮದ್ ಶಮಿ ಟಾಪ್ ಆರ್ಡರ್ ಮೂರು ವಿಕೆಟ್ ಪಡೆಯುವುದರ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.