ಕ್ರೀಡೆ

ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಏಕದಿನ ಪಂದ್ಯ ಗೆದ್ದು , 3-0 ಯಿಂದ ಸರಣಿ ಕೈವಶ ಮಾಡಿಕೊಂಡ ಭಾರತ

Published

on

ಸುದ್ದಿದಿನ ಡೆಸ್ಕ್ : ಫೋರ್ಟ್ ಆಫ್ ಸ್ಪೇನ್ ನಲ್ಲಿ ತಡರಾತ್ರಿ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ, 119 ರನ್ ಗಳಿಂದ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಸುಲಭ ಜಯ ಸಾಧಿಸಿದೆ.

ಇದರೊಂದಿಗೆ ಭಾರತ 3-0 ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಮೊದಲು ಬ್ಯಾಟ್ ಮಾಡಿದ ಭಾರತ, 24 ಓವರ್ ಗಳಲ್ಲಿ 1ವಿಕೆಟ್ ನಷ್ಟಕ್ಕೆ 115 ರನ್ ಗಳಿಸಿದಾಗ ಮಳೆ ಆಟಕ್ಕೆ ಅಡ್ಡಿಪಡಿಸಿತು.

ನಂತರ ಪಂದ್ಯ ಮುಂದುವರೆದಾಗ ನಿಗದಿತ ಓವರ್‌ಗಳ ಸಂಖ್ಯೆಯನ್ನು 40ಕ್ಕೆ ಕಡಿತಗೊಳಿಸಲಾಯಿತು. ಆದರೆ, ಭಾರತ 36 ಓವರ್ ಗಳಲ್ಲಿ 3ವಿಕೆಟ್ ನಷ್ಟಕ್ಕೆ 225 ರನ್‌ಗಳಿಸಿದಾಗ 2ನೇ ಬಾರಿಗೆ ಮಳೆ ಆಟಕ್ಕೆ ಅಡ್ಡಿಯುಂಟು ಮಾಡಿತು. ಭಾರತ ಪರ ಆರಂಭಿಕ ಶುಭ್ ಮನ್ ಗಿಲ್ ಅಜೇಯ 98 ಹಾಗೂ ನಾಯಕ ಶಿಖರ್ ಧವನ್ 58ರನ್‌ಗಳಿಸಿದರು.

ಬಳಿಕ ವೆಸ್ಟ್ ಇಂಡೀಸ್ ತಂಡಕ್ಕೆ ಡಕ್ ವರ್ಥ್ ಲೂಯಿಸ್ ನಿಯಮದಡಿ 35 ಓವರ್‌ಗಳಲ್ಲಿ 257 ರನ್‌ಗಳ ಗುರಿ ನೀಡಲಾಯಿತು. ಆದರೆ, ಆತಿಥೇಯರು 26 ಓವರ್‌ಗಳಲ್ಲಿ ಕೇವಲ 137 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ಭಾರತಕ್ಕೆ ನಿರಾಯಾಸ ಗೆಲುವು ದೊರೆಯಿತು. ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಯಜುವೇಂದ್ರ ಚಹಾಲ್ 4 ಹಾಗೂ ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ತಲಾ 2, ಅಕ್ಷರ್ ಪಟೇಲ್ ಮತ್ತು ಪ್ರಸಿದ್ಧ ಕೃಷ್ಣ ತಲಾ 1 ವಿಕೆಟ್ ಪಡೆದರು.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version