ದಿನದ ಸುದ್ದಿ
ಭಾರತದ ಏರ್‌ಸ್ಟ್ರೈಕ್ : ಬಾಲ ಸುಟ್ಟ ಬೆಕ್ಕಿನಂತಾದ ಪಾಕಿಸ್ತಾನ
ಸುದ್ದಿದಿನ, ಡೆಸ್ಕ್ : ಭಾರತದ ಏರ್‌ಸ್ಟ್ರೈಕ್ ನಂತರ ಬಾಲ ಸುಟ್ಟ ಬೆಕ್ಕಿನಂತಾಗಿದೆ ಪಾಕಿಸ್ತಾನ. ಭಾರತೀಯ ಸೇನೆ ನಡೆಸಿದ ಏರ್ ಸ್ಟ್ರೈಕ್‌ನಿಂದ ಕಂಗಲಾದ ಪಾಕಿಸ್ತಾನದ ಮಾದ್ಯಮಗಳು ಭಾರತದ ವಿರುದ್ಧ ಮುಗಿಬೀಳುತ್ತಿದ್ದು, ಪ್ರಧಾನಿ ಮೋದಿ ವಿರುದ್ಧ ವಿಡಂಬನಾತ್ಮಕ ಸುದ್ದಿ ಮಾಡುತ್ತಿವೆ.
ಭಾರತದ ವಾಯುದಾಳಿಗೆ ಪಾಕಿಸ್ತಾನ ಗಢಗಢ
ವಾಯುಸೇನೆ ದಾಳಿ ಬಗ್ಗೆ ಮೊದಲ ಪ್ರತಿಕ್ರಿಯೆ ಕೊಟ್ಟ ಪಾಕಿಸ್ತಾನವು, ಭಾರತೀಯ ದಾಳಿಯ ಬಗ್ಗೆ ನಮಗೆ ಮೊದಲೇ ಮಾಹಿತಿ ಇತ್ತು
ಭಾರತೀಯ ದಾಳಿಯನ್ನ ನಿರೀಕ್ಷಿಸಿದ್ದೆವು ಎಂದ ಪಾಕಿಸ್ತಾನ ಪ್ರಧಾನಿ ಬೆಳಗ್ಗೆಯಿಂದಲೂ ತುರ್ತು ಸಭೆ ನಡೆಸುತ್ತಿದ್ದಾರೆ.
ಪಾಪಿ ಪಾಕ್‌ಗೆ ತಕ್ಕ ಪಾಠ ಕಲಿಸಿದ ಭಾರತೀಯ ಸೇನೆಯು ಮಿಡ್‌ನೈಟ್‌ನಲ್ಲಿ ನಡೆಸಿದ ಮಹಾ ಏರ್ ಸ್ಟ್ರೈಕ್ ಇದಾಗಿದೆ. ವಾರ್‌ಗೂ ಮುನ್ನ ಪಾಕ್‌ಗೆ ಸ್ಪಷ್ಟ ಎಚ್ಚರಿಕೆ ನೀಡಿದ ಭಾರತವು
ಪ್ರತೀಕಾರದ ದಾಳಿಗೆ ಪಾಕ್ ಉಗ್ರನೆಲೆಗಳು ಉಡೀಸ್ ಆಗಿವೆ. ಸಾವಿರ ಕೆಜಿ ಬಾಂಬ್ ಬಳಸಿ ಜೈಷ್-ಎ- ಮಹಮ್ಮದ್ ನೆಲೆಗಳನ್ನ ಪೀಸ್ ಪೀಸ್ ಮಾಡಿದಿ ಸೇನೆ.
ಮಿರಾಜ್-2000 ಯುದ್ಧ ವಿಮಾನ ಬಳಸಿ ಕಾರ್ಯಾಚರಣೆಯನ್ನು ಮುಂಜಾನೆ 3.30 ರ ಸುಮಾರಿಗೆ ಬಾಲ್ಕೋಟ್‌ನ ಉಗ್ರ ನೆಲೆ ಮೇಲೆ ದಾಳಿ ನಡೆಸಿದೆ. IAF ಫೈಟರ್ ಜೆಟ್ ಮೂಲಕ ದಾಳಿ ನಡೆಸಿದ ಭಾರತೀಯ ಸೇನೆ ಟೆರರ್ ಕ್ಯಾಂಪ್‌ಗಳ ಮೇಲೆ ಎಡೆಬಿಡದೇ ಬಾಂಬ್ ದಾಳಿ ಮಾಡಿದೆ. 12 ಮಿರಾಜ್ ಫ್ಲೈಟ್‌ಗಳಿಂದ ನಡೆದ ಭಾರಿ ಏರ್ ಸ್ಟ್ಕೈಕ್ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದೆ.
ಲೇಸರ್ ಗೈಡಿಡ್ ಬಾಂಬ್
ಉಗ್ರರ ನೆಲೆ ಮೇಲೆ ಲೇಸರ್ ಗೈಡಿಡ್ ಬಾಂಬ್‌ಗಳನ್ನ ಬಳಸಿದ್ದು, ಭಾರತದ ಕಣಿವೆ ರಾಜ್ಯಕ್ಕೆ ಮತ್ತೆ ಉಗ್ರರನ್ನ ನುಗ್ಗಿಸಲು ರೆಡಿಯಾಗಿದ್ದ ಪಾಪಿ JEM POK ಯ ಗಡಿ ಅಂಚಿನಲ್ಲಿ ಉಗ್ರರು ಇರುವ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದೆ. ಸುಮಾರು 200 ರಿಂದ 300 ಕ್ಕೂ ಹೆಚ್ಚು ಉಗ್ರ ನೆಲೆಗಳನ್ನ ಸರ್ವನಾಶ ಮಾಡಿದ ಭಾರತೀಯ ಸೇನೆಮುಂಜಾನೆ 3.30 ರಿಂದ ಸುಮಾರು 15 ನಿಮಿಷಗಳ ಕಾಲ ಏರ್ ಸ್ಟ್ರೈಕ್ ನಡೆದಿದೆ. 12 ಮಿರಾಜ್ ಯುದ್ಧ ವಿಮಾನಗಳ ಮೂಲಕ ಬಾಂಬ್ ದಾಳಿ ನಡೆಸಿದೆ ಭಾರತೀಯ ಸೇನೆ.
ವಾಯುಸೇನೆಯಿಂದ ಸುದ್ದಿಗೋಷ್ಠಿ
ಪಾಪಿ ಪಾಕ್ ಮೇಲೆ ಭಾರತೀಯ ಸೇನೆಯಿಂದ ಏರ್ ಅಟ್ಯಾಕ್ ನಡೆಸಿದ ನಂತರ, ಇಂದು ಬೆಳಗ್ಗೆ ಭಾರತೀಯ ವಾಯುಸೇನೆಯಿಂದ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಭಾರತೀಯ ವಾಯುಸೇನೆ ಮುಖ್ಯಸ್ಥರು ಉಗ್ರ ನೆಲೆಗಳ ಮೇಲಿನ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದ್ದಾರೆ.
POKಯಲ್ಲಿ ಉಗ್ರರ ನಾಲ್ಕು ಲಾಂಚಿಂಗ್ ಪ್ಯಾಡ್‌ಗಳು ಉಡೀಸ್ ಮಾಡಿರುವ ಭಾರತೀಯ ಸೇನೆ, ಪಾಕ್ ಆಕ್ರಮಿತ ಬಾಲ್ಕೋಟ್‌ನಲ್ಲಿದ್ದ ಲ್ಯಾಂಚಿಂಗ್ ಪ್ಯಾಡ್‌ಗಳು,ಜೈಷ್-ಎ-ಮಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಲಾಂಚ್ ಪ್ಯಾಡ್‌ಗಳ ಮೇಲೆ
ಸಾವಿರ ಕೆಜಿ ಲೇಸರ್ ಬಾಂಬ್‌ಗಳನ್ನ ಬಳಸಿದ್ದ IAF ಉಗ್ರರ 3 ಕಂಟ್ರೋಲ್ ರೂಂಗಳನ್ನ ಸರ್ವ ನಾಶ ಮಾಡಿರುವ ಭಾರತೀಯ ಸೇನೆಯು
ಮತ್ತಷ್ಟು ದಾಳಿಗೆ ಸಜ್ಜಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401