ದಿನದ ಸುದ್ದಿ

ಸಂವಿಧಾನದ ತಿದ್ದುಪಡಿಗಳು

Published

on

ನಿರ್ದಿಷ್ಟ ಕಾಲಮಾನ ಮತ್ತು ಆ ಸಂದರ್ಭದಸ್ಥಿತಿಗತಿಗಳನ್ನುಗಮನದಲ್ಲಿರಿಸಿಕೊಂಡುಸಂವಿಧಾನ ವನ್ನು ರಚಿಸಲಾಯಿತು. ಬದಲಾಗುತಿರುವಕಾಲಮಾನಹೊಸ ಪರಿಸ್ಥಿತಿ,ಸ್ಥಿತಿಗತಿ ಹಾಗೂಸಮಸ್ಯೆಗಳಿಗೆ ಅನುಗುಣವಾಗಿ ಸಂವಿಧಾನಕ್ಕೆ ಸೂಕ್ತ ತಿದ್ದುಪಡಿಗಳನ್ನು ತೆರಬೇಕಾಗುತ್ತದೆ. ತಿದ್ದುಪಡಿಗಳನ್ನು ಮಾಡುವಾಗ ಹಿಂದಿನ ಅನುಭವ, ಪ್ರಸ್ತುತಪರಿಷ್ಕರಣೆಯ ಅಗತ್ಯ, ಪ್ರಸ್ತುತತೆ, ಭವಿಷ್ಯದ ಪ್ರಗತಿಹಾಗೂ ನ್ಯಾಯ ಪರವಾಗಿರುವ ತತ್ವಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕು.

ಸಂವಿಧಾನ ತಿದ್ದುಪಡಿ ಮಾಡುವ ಬಗ್ಗೆ
ಪಂಡಿತ್ ಜವಾಹರಲಾಲ್ ನೆಹರೂ ಅವರ
ಅಭಿಪ್ರಾಯ ಹೀಗಿದೆ:

“ಅತ್ಯಂತ ಕಠಿಣವಾದ ಮತ್ತು ಸ್ಥಿರ ವಾದ
ಏನನ್ನಾದರೂ ಮಾಡಲು ಪ್ರಯತ್ನಿಸಿದರೆ ಅದು
ದೇಶದ ಪ್ರಗತಿಯನ್ನು ಮತ್ತು ಸಮಾಜದ ಅಭಿವೃದ್ಧಿ ಯನ್ನು ಕುಂಠಿತಗೊಳಿಸುತ್ತದೆ. ಆದ್ದರಿಂದ ಸಂವಿಧಾನ‌ವನ್ನು ಅತಿ ಕಠಿಣವಾಗಿ ರೂಪಿಸಲು ಸಾಧ್ಯವಿಲ್ಲ! ತೀವ್ರಗತಿಯಲ್ಲಿ ಬದಲಾಗುತ್ತಿರುವ ಪ್ರಪಂಚದಲ್ಲಿಇಂದು ಪ್ರಸ್ತುತವೆನಿಸುವುದು ನಾಳೆ ಆಪ್ರಸ್ತುತವೆನಿಸು ತ್ತದೆ. ಸಂವಿಧಾನದಲ್ಲಿ ತಿದ್ದುಪಡಿಗೆ ಅವಕಾಶ ನೀಡುವುದು ಎಂದರೆ ಕಾಲಕಾಲಕ್ಕೆಬದಲಾಗುತ್ತಿರುವ.ಸಮಾಜದೊಂದಿಗೆ ಸಂವಿಧಾನವು ಬದಲಾಗಿ
ಇಂದಿನ ಸಮಾಜಕ್ಕೆ ಪ್ರಸ್ತುತವಾದ ಸಂವಿಧಾನ
ಎನಿಸಿಕೊಳ್ಳುವುದಾಗಿರುತ್ತದೆ.”

ಈ ಎಲ್ಲ ಎಚ್ಚರ ಗಳನ್ನು ಗಮನದಲ್ಲಿಟ್ಟು
ಕೊಂಡು ಕಳೆದ 68 ವರ್ಷಗಳಲ್ಲಿ ನಮ್ಮಸಂವಿಧಾನವನ್ನು 10 ಬಾರಿ ತಿದ್ದುಪಡಿ ಮಾಡಲಾಗಿದೆ. ಇವುಗಳಲ್ಲಿ ಪ್ರಮುಖವಾದ ತಿದ್ದುಪಡಿಗಳೆಂದರೆ:

  1. 1ನೇ ತಿದ್ದುಪಡಿ, 1951: ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ
    ವರ್ಗಗಳ ಅಭಿವೃದ್ಧಿಗಾಗಿ ವಿಶೇಷ ನಿಯಮಗಳನ್ನು ರಚಿಸುವ ಅಧಿಕಾರವನ್ನು
    ರಾಜ್ಯ ಸರ್ಕಾರಗಳಿಗೆ ನೀಡಲಾಯಿತು.
  2. 5ನೇ ತಿದ್ದುಪಡಿ, 1956: ರಾಜ್ಯಗಳ ಏಕೀಕರಣ ಮಾಡಲಾಯಿತು.
  3. 42 ನೇ ತಿದ್ದುಪಡಿ, 1976: ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಈ ಕೆಳಕಂಡ ಬದಲಾವಣೆಗಳನ್ನು ತರಲಾಯಿತು;
  • ಅ. ಸಂವಿಧಾನದ ಪ್ರಸ್ತಾವನೆ ಸಮಾಜವಾದಿ, ಧರ್ಮನಿರಪೇಕ್ಷ ಜಾತ್ಯತೀತ
    ಎಂಬ ಎರಡು ಹೊಸ ಪದಗಳನ್ನು ಹಾಗೂ ದೇಶದ ಏಕತೆಯ ಜೊತೆಗೆ
    ಸಮಗ್ರತೆಯನ್ನು ಸೇರಿಸಲಾಯಿತು.
  • ಆ, ಮೂಲಭೂತ ಕರ್ತವ್ಯಗಳ ಪಟ್ಟಿಯನ್ನು ಸಂವಿಧಾನಕ್ಕೆ ಸೇರಿಸಲಾಯಿತು.
  • ಈ. ಎಲ್ಲರಿಗೂ ಸಮಾನ ನ್ಯಾಯ ದೊರಕಿಸುವುದು ಹಾಗೂ ದುರ್ಬಲರಿಗೆ ಉಚಿತ ಕಾನೂನು ನೆರವು ನೀಡುವುದು.
  • ಈ, ಉದ್ದಿಮೆಗಳು ವ್ಯವಸ್ಥಾಪನೆಯಲ್ಲಿ ಕಾರ್ಮಿಕರ ಪಾಲ್ಗೊಳ್ಳಲು ಅವಕಾಶ
    ನೀಡಲಾಯಿತು,
  • ಉ. ಪರಿಸರ, ಅರಣ್ಯ ಮತ್ತು ವನ್ಯಜೀವಿಗಳ ಮೊದಲಾದ ಪ್ರಾಕೃತಿಕ ಸಂಪತ್ತಿನ
    ಸಂರಕ್ಷಣೆಗೆ ಆದ್ಯತೆ ನೀಡಲಾಯಿತು
  • ಊ. ದೇಶದ ಯಾವುದೇ ಭಾಗದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲು
    ಅವಕಾಶ ನೀಡಲಾಯಿತು.
  • ಋ, ಗಂಭೀರ ಪರಿಸ್ಥಿತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸಿಗಳು
    ರಾಜ್ಯಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸುವ ಅಧಿಕಾರ ವನ್ನು ಕೇಂದ್ರ
    ಸರ್ಕಾರಕ್ಕೆ ನೀಡಲಾಯಿತು.

44 ನೇ ತಿದ್ದುಪಡಿ, 1978

(1) 42 ನೇ ತಿದ್ದುಪಡಿ ಕೆಲವು ಅತಿರೇಕ ಗಳನ್ನು ರದ್ದು ಗೊಳಿಸಿ ಹಿಂದೆ ಇದ್ದ ಪರಿಸ್ಥಿತಿಯನ್ನು ಮರು ಸ್ಥಾಪಿಸಲಾಯಿತು.

(2) ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದು ಹಾಕಲಾಯಿತು.

(3) ಅನುಚ್ಛೇದ 20 ಮತ್ತು 21ರಲ್ಲಿ ತಿಳಿಯಪಡಿಸಿರುವ ಮೂಲಭೂತ ಹಕ್ಕುಗಳನ್ನು ರಾಷ್ಟ್ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ರದ್ದುಗೊಳಿಸದಂತೆ ಮಾಡಲಾಯಿತು.

52 ನೇ ತಿದ್ದುಪಡಿ, 1985

ಚುನಾಯಿತ ಪ್ರತಿನಿಧಿಗಳ ಪಕ್ಷಾಂತರವನ್ನುಕಾನೂನು ಬಾಹಿರ ಗೊಳಿಸಿ, ಪಕ್ಷಾಂತರ ನಿಷೇಧ ಕಾಯ್ದೆಯನ್ನು, 10ನೇ ಅನುಸೂಚಿಗೆ ಸೇರಿಸಲಾಯಿತು.

61ನೇ ತಿದ್ದುಪಡಿ, 1989

ಮತದಾನದ ವಯಸ್ಸನ್ನು 21 ರಿಂದ 18 ವರ್ಷಗಳಿಗೆ
ಇಳಿಸಲಾಯಿತು.

73ನೇ ತಿದ್ದುಪಡಿ, 1992

ಪಂಚಾಯತ್‌ರಾಜ್ ವ್ಯವಸ್ಥೆ ಜಾರಿಗೆ ತರಲಾಯಿತು.

86ನೇ ತಿದ್ದುಪಡಿ, 2002

6 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣದ ಹಕ್ಕು ನೀಡಲಾಯಿತು.

(‘ಸಂವಿಧಾನ ಓದು’: ನ್ಯಾ.ಎಚ್.ಎನ್.ನಾಗಮೋಹನ ದಾಸ್ ,ಅವರ ಪುಸ್ತಕದಿಂದ ಈ ಲೇಖನವನ್ನು ತೆಗೆದುಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version